ಕೊಡಗಿನ ಸಂತ್ರಸ್ತರಿಗೆ ಮೂಡಲಗಿಯಿಂದ ನಿಧಿ ಸಂಗ್ರಹ

0
4
loading...

ಕೊಡಗಿನ ಸಂತ್ರಸ್ತರಿಗೆ ಮೂಡಲಗಿಯಿಂದ ನಿಧಿ ಸಂಗ್ರಹ
ಕನ್ನಡಮ್ಮ ಸುದ್ದಿ- ಮೂಡಲಗಿ: ಕೊಡಗು ಹಾಗೂ ಕೇರಳದಲ್ಲಿ ಇಂದು ಆಗಿರುವ ಅತಿವೃಷ್ಠಿಯಲ್ಲಿ ಜನತೆಯ ಸಂಕಷ್ಠಕ್ಕೆ ಮೂಡಲಗಿಯ ಪಾದಭೋದ್ವ ಸ್ವಾಮಿಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲರು, ಎಲ್ಲ ಉಪನ್ಯಾಸಕರು ಹಾಗೂ ಎನ್.ಎಸ್.ಎಸ್. ಘಟಕ ಮತ್ತು ಭಾರತ ಸ್ಕೌಟ್ಸ ಹಾಗೂ ಗೈಡ್ ವಿಭಾಗಗಳಿಂದ ಮಹಾವಿದ್ಯಾಲಯ ಹಾಗೂ ಊರಿನ ಪ್ರಮುಖ ರಸ್ತೆ ಮತ್ತು ವ್ಯಾಪಾರಿ ಮಳಿಗೆಗಳಲ್ಲಿ ನಿಧಿ ಸಂಗ್ರಹ ಕಾರ್ಯವನ್ನು ಕೈಕೊಳ್ಳಲಾಯಿತು.
ಮಹಾವಿದ್ಯಾಲಯದ ಆವರಣದಲ್ಲಿ ಸದರಿ ಕಾರ್ಯಕ್ಕೆ ಚಾಲನೆ ನೀಡಿದ ಕನ್ನಡ ಉಪನ್ಯಾಸಕರಾದ ಶಿವಾನಂದ ಚಂಡಕೆ ಮಾತನಾಡಿ, ಇಂದು ನಿಸರ್ಗ ವಿಕೋಪದಿಂದ ಸಂಕಷ್ಠಕ್ಕೆ ಒಳಗಾದ ಕೊಡಗಿನ ಜನತೆಗೆ ನಾವೆಲ್ಲರೂ ಮಾನವೀಯತೆಯ ಹಿನ್ನಲೆಯಲ್ಲಿ ನೆರವು ನೀಡಬೇಕಾದ ಅಗತ್ಯತೆಯಿದೆ. ನಾವೆಲ್ಲರೂ ಇದರಲ್ಲಿ ಭಾಗಿಯಾಗುವುದರ ಮೂಲಕ ನಮ್ಮ ಕೈಲಾದ ಸಹಾಯ ಮಾಡೋಣವೆಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ ಆರ್. ಬಿ. ಕೊಕಟನೂರ ಮಾತನಾಡಿ, ನೆರೆ ಸಂತ್ರಸ್ಥರ ಕಷ್ಠ ಹೇಳತೀರದಾಗಿದೆ. ಆರ್ಥೀಕ ಸಂಕಷ್ಟದಲ್ಲಿರುವ ಅವರಿಗೆ ನಾವು ನೀವೆಲ್ಲರೂ ಕೈಲಾದ ಸಹಾಯ ಮಾಡುವುದರ ಮೂಲಕ ಅವರ ಕಷ್ಟದಲ್ಲಿ ಪರೋಕ್ಷವಾಗಿ ಭಾಗಿಯಾಗೋಣ. ಇವೆಲ್ಲವೂ ಮನುಷ್ಯ ಮನುಷ್ಯರಿಗೆ ನೀಡುವ ಮಾನವೀಯ ಸಂಬಂಧಗಳ ಹಿನ್ನಲೆಯಲ್ಲಿ ಮಾಡುವ ಸಹಕಾರ. ಧನ ಸಂಗ್ರಹ ಮಾಡುವುದರ ಮೂಲಕ ಇದರಲ್ಲಿ ಮೂಡಲಗಿಯ ಸಮಸ್ತ ಜನರನ್ನು ಭಾಗಿದಾರರನ್ನಾಗಿಸೋಣ ಎಂದು ತಿಳಿಸಿದರು. ಪರಿಹಾರ ನಿಧಿ ಸಂಗ್ರಣ ಕಾರ್ಯದಲ್ಲಿ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರಾದ ಸ್ಕೌಟ್ ಲೀಡರ್ ಡಾ. ರವಿ ಗಡದನ್ನವರ, ರೇಂಜರ್ ಲೀಡರ್ ಶಿವಲೀಲಾ, ಎನ್.ಎಸ್.ಎಸ್. ಘಟಕದ ಸಂಯೋಜನಾಧಿಕಾರಿ ಸಂಜೀವಕುಮಾರ್ ಗಾಣಿಗೇರ, ಚೇತನ್‌ರಾಜ್, ಆಶ್ವಿನಿ.ಎಸ್. ಬಸಪ್ಪ ಹೆಬ್ಬಾಳ ಮುಂತಾದವರು ಸಾಥ್ ನೀಡಿದರು. ದೇಣಿಗೆ ಸಂಗ್ರಹದ ನಂತರ ಕೋಡಿಸಲಾಗಿದ್ದ ೩೧೧೧೧.೦೦ ರೂಗಳನ್ನು ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಡಿ.ಡಿ. ಮೂಲಕ ಕಳುಹಿಸಿಕೊಡಲಾಯಿತು.

loading...