ಕೊಡಗು, ಕೇರಳ ಸಂತ್ರಸ್ತರಿಗಾಗಿ ನಿಧಿ ಸಂಗ್ರಹ ಜಾಥಾಕ್ಕೆ ಚಾಲನೆ

0
5
loading...

ಕನ್ನಡಮ್ಮ ಸುದ್ದಿ-ಬಂಕಾಪುರ: ನೆರೆ ಹಾವಳಿ ಪ್ರವಾಹದಿಂದ ತತ್ತರಿಸಿರುವ ಕೊಡಗು ಹಾಗೂ ಕೇರಳ ಸಂತ್ರಸ್ತರ ಪರಿಹಾರಕ್ಕಾಗಿ ಪಟ್ಟಣದ ಕನ್ನಡ ರಾಜ್ಯೋತ್ಸವ ಬಳಗದ ವತಿಯಿಂದ ನಿಧಿ ಸಂಗ್ರಹ ಜಾಥಾ ಕಾರ್ಯಕ್ರಮಕ್ಕೆ ಪಿಎಸ್‍ಐ ಸಂತೋಷಗೌಡ ಪಾಟೀಲ ಚಾಲನೆ ನೀಡಿದರು.
ಪಟ್ಟಣದ ನಾಡಕಚೇರಿಯಿಂದ ಆರಂಭಗೊಂಡ ನಿಧಿ ಸಂಗ್ರಹ ಪೆಟ್ಟಿಗೆಗೆ ಉಪತಹಶೀಲ್ದಾರ ಎಸ್.ಪಿ.ಚಪ್ಪಳಗಾವಿ ಯವರ ಸಮ್ಮುಖದಲ್ಲಿ ಶೀಲ್‍ಮಾಡಿದ ಪೆಟ್ಟಿಗೆಯೊಂದಿಗೆ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ವರ್ತಕರು, ಸಾರ್ವಜನಿಕರು, ಪೊಲೀಸ್ ಠಾಣೆ ಸಿಬ್ಬಂದಿ, ಅಟೋ ಚಾಲಕರು, ಬೀದಿ ವ್ಯಾಪಾರಸ್ಥರಿಂದ ಸ್ವ ಇಚ್ಚೆಯಿಂದ ಸಂತ್ರಸ್ಥರ ನಿಧಿಗೆ ಹಣ ಪಡೆದರು. ಸೋಮವಾರ ಸಂಜೆಯ ವರೆಗೂ ಸಂಗ್ರಹವಾದ ಹಣವನ್ನು ಉಪತಹಶೀಲ್ದಾರ ಸಮ್ಮುಖದಲ್ಲಿ ಎಣಿಕೆ ಮಾಡಿದರು. ಸಂಗ್ರಹವಾದ ಹಣವನ್ನು ಮಂಗಳವಾರ ‘ಮುಖ್ಯಮಂತ್ರಿ ಪರಿಹಾರ ನಿಧಿ’ ಹೆಸರಿಗೆ ಡಿಡಿ ಕಳುಹಿಸಿ ಕೊಡಲಾಗುವುದು ಎಂದು ಜಾಥಾದ ನೇತೃತ್ವ ವಹಿಸಿದ್ದ ಕನ್ನಡ ರಾಜೋತ್ಸವ ಸಮಿತಿ ಅಧ್ಯಕ್ಷ ರಾಮಕೃಷ್ಣ ಆಲದಕಟ್ಟಿ ಪತ್ರಿಕೆಗೆ ಮಾಹಿತಿ ನೀಡಿದರು.ಬಸವರಾಜ ನಾರಾಯಣಪುರ, ಮಹೇಶ ಪುಕಾಳೆ, ಕಿರಣ ಸಕ್ರಿ, ವಿಜಯ ರಾಣೋಜಿ, ಓಂಪ್ರಕಾಶ ಅಂಗಡಿ, ಮಂಜುನಾಥ ಈರಪ್ಪನವರ, ಮಾಲತೇಶ ದ್ವಾಸಿ, ಈರಣ್ಣ ಚಿಗಳ್ಳಿ, ಮಲ್ಲನಗೌಡ ಪಾಟೀಲ, ದೇವಣ್ಣ ಹಳವಳ್ಳಿ, ಶಂಬು ಕುರಗೋಡಿ, ಬಸವರಾಜ ಕಟ್ಟಿಮನಿ, ರವಿ ನರೇಗಲ್ ಸೇರಿದಂತೆ ಮತ್ತಿತರರು ನಿಧಿ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದರು.

loading...