ಕೊಡಗು, ಮಡಿಕೇರಿ ನಿರಾಶ್ರಿತರಿಗೆ ಪರಿಹಾರ ನಿಧಿ ವಿತರಣೆ

0
0
loading...

ವಿಜಯಪುರ: ದೇವರ ಹಿಪ್ಪರಗಿ ತಾಲೂಕಿನ ಮುಳಸಾವಳಗಿ ಕರವೇ ಗ್ರಾಮ ಘಟಕದ ಪದಾಧಿಕಾರಿಗಳು ಗುರುವಾರ ಸೋಮವಾರ ಕೊಡಗು ಮತ್ತು ಮಡಿಕೇರಿ ನಿರಾಶ್ರಿತರಿಗೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ 6007 ರೂ ಅರ್ಪಿಸಿದರು.
ಕರವೇ ಪದಾಧಿಕಾರಿ ಉಮೇಶ ಬಿರಾದಾರ ಮಾತನಾಡಿ, ರಾಜ್ಯದ ಕೊಡಗು, ಮಡಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ -ಪಾಸ್ತಿಗಳು, ಮನೆ ಮತ್ತು ಜೀವ ಹಾನಿಗಳಾಗಿದೆ. ಕೊಡಗು ಜನರು ತಮ್ಮ ಎಲ್ಲ ಆಸ್ತಿ -ಪಾಸ್ತಿಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ ಎಂದರು.
ಶರತ್‌ ಕಂಬಾರ ಜಿಲ್ಲಾ ಕಾರ್ಯದರ್ಶಿರಾದ ಪ್ರಕಾಶ ಕುಂಬಾರ, ಸಾಯಬಣ್ಣ ಮಡಿವಾಳರ, ಭರತ ಕೋಳಿ, ಫಯಾಜ್‌ ಕಲಾದಗಿ, ಶಾಂತು ನಾಗರಳ್ಳಿ, ಯಲ್ಲು ನಾಗಠಾಣ, ರಮೇಶ ಹೊನಮೊರೆ ಮುಂತಾದವರು ಉಪಸ್ಥಿತರಿದ್ದರು.

loading...