ಕೊಡಗು ಸಂತ್ರಸ್ತರಿಗೆ ಅಬ್ಬಿಗೇರಿ ಗ್ರಾಮ, ಜಕ್ಕಲಿ ಗ್ರಾಮ, ಶಾಲಾ ಮಕ್ಕಳಿಂದ ನಿಧಿ ಸಂಗ್ರಹ

0
3
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ರಾಜ್ಯದ ಕೊಡಗು ಮತ್ತು ಮಡಕೇರಿ ಜಿಲ್ಲೆಗಳಲ್ಲಿ ಭೀಕರ ಮಳೆಯಿಂದ ಮುಗಳುಹಡೆಯಾಗಿ ಜಿಲ್ಲೆಯ ಜನರು ಮನೆ, ಮಠಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲಿಕಿದ್ದು, ಕುಡಿಯಲು ನೀರು, ತಿನ್ನಲು ಆಹಾರ, ವಾಸಿಸಲು ಆಶ್ರಯವಿಲ್ಲದೇ ಸಂಕಟ ಪಡುತ್ತಿದ್ದಾರೆ. ಅವರ ಸಂಕಷ್ಟದಲ್ಲಿ ಸಹಭಾಗಿಗಳಾಗಿ ಅಬ್ಬಿಗೇರಿ, ಜಕ್ಕಲಿ, ನರೇಗಲ್ಲ ಪಟ್ಟಣದ ಓಂ ಶಿಕ್ಷಣ ಸಂಸ್ಥೆಯ ಶಾಲಾ ಮಕ್ಕಳು ಹಾಗೂ ನಾಗರಿಕರು ಸ್ವಯಂ ಪ್ರೇರಿತವಾಗಿ ಪರಿಹಾರ ನಿಧಿಯನ್ನು ಸಂಗ್ರಹಿಸಿದ್ದಾರೆ ಎಂದು ಅಬ್ಬಿಗೇರಿ ಗ್ರಾಮದ ಡಾ| ಆರ್.ಬಿ. ಬಸವರಡ್ಡೇರ ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾಮದ ವತಿಯಿಂದ ಗುರುವಾರ ಕೊಡಗು ಸಂತ್ರಸ್ತರಿಗೆ ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಭಾಗದಲ್ಲಿ ಮಳೆಯಿಲ್ಲದೇ ಜನರು ಸಂಕಷ್ಟ ಎದುರಿಸುತ್ತಿರುವ ದಿನಗಳಲ್ಲಿ ಮಳೆರಾಯ ಕೊಡಗು ಜಿಲ್ಲೆಯಲ್ಲಿ ಮತ್ತು ಕೇರಳ ರಾಜ್ಯದಲ್ಲಿ ಭೀಕರವಾಗಿ ಸುರಿದು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಜನರು ಸಂಕಷ್ಟದಿಂದ ಪಾರಾಗಿ ಬಂದು ನೆಮ್ಮದಿ ಬದುಕು ಕಾಣಲಿ, ಸಂತ್ರಸ್ತರು ಆತಂಕಪಡುವ ಅಗತ್ಯವಿಲ್ಲ. ನಿಮ್ಮ ನೇರವಿಗೆ ಇಡೀ ರಾಜ್ಯದ ಜನತೆ ಸಿದ್ದವಾಗಿದೆ. ನರೇಗಲ್ಲ ಹೋಬಳಿವ್ಯಾಪ್ತಿ ನಾಗರಿಕರು, ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಸ್ವಯಂ ಪ್ರೇರಣೆಯಿಂದ ಕಷ್ಟದಲ್ಲಿರುವ ಕೊಡಗು ಜನತೆಗೆ ನೇರವು ನೀಡುವಂತೆ ಮನವಿ ಮಾಡಿದರು. ಜಕ್ಕಲಿ, ಅಬ್ಬಿಗೇರಿ, ನರೇಗಲ್ಲ ಗ್ರಾಮಗಳಲ್ಲಿ ವಿದ್ಯಾರ್ಥಿಗಳು, ನಾಗರಿಕರು ಸ್ವಯಂ ಗ್ರಾಮದ ಪ್ರಮುಖ ಅಂಗಡಿ, ಬೀದಿಗಳಲ್ಲಿ ತಿರುಗಾಡಿ ಪರಿಹಾರ ನಿಧಿ ಸಂಗ್ರಹಿಸಿದರು. ಜಕ್ಕಲಿ ಗ್ರಾಮದಲ್ಲಿ ಕರವೇ ತಾಲೂಕು ಅಧ್ಯಕ್ಷ ಉಮೇಶ ಮೇಟಿ, ನರೇಗಲ್ಲ ಓಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಶೋಕ ಬೇವಿನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಾಬುಗೌಡ ಪಾಟೀಲ, ದುರಗೇಶ ಬಂಡಿವಡ್ಡರ, ಬಸವರಾಜ ಇಟಗಿ, ನಿತೀಶ್ ಬಂಡಿವಡ್ಡರ, ಮಾರುತಿ ಬಂಡಿವಡ್ಡರ, ತಿರುಮಲೇಶ ಬಂಡಿವಡ್ಡರ. ಜಕ್ಕಲಿ ಗ್ರಾಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಯಲ್ಲವ್ವ ಜಾಲಣ್ಣವರ, ಗ್ರಾ.ಪಂ ಮಾಜಿ ಸದಸ್ಯ ಕಳಕಪ್ಪ ಮುಗಳಿ, ಹರ್ಷವರ್ಧನ್ ದೊಡ್ಡಮೇಟಿ, ಮಲ್ಲಿಕಾರ್ಜುನ ನರೇಗಲ್ಲ, ಮಲ್ಲಪ್ಪ ಬಾರಕೇರ, ಸಂತೋಷ ವಾಲಿ, ರವಿ ಜಂಗಣ್ಣವರ, ಮಂಜುನಾಥ ಅಕ್ಕಿಶೆಟ್ಟರ. ನರೇಗಲ್ಲ ಪಟ್ಟಣದಲ್ಲಿ ಓಂ ಶಿಕ್ಷಣ ಸಂಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

loading...