ಕೊಡಗು ಸಂತ್ರಸ್ತರಿಗೆ ಆರ್‌ಎಸ್‌ಎಸ್ ಸಹಾಯ ನಿಧಿ ರವಾನೆ

0
1
loading...

ಕೊಡಗು ಸಂತ್ರಸ್ತರಿಗೆ ಆರ್‌ಎಸ್‌ಎಸ್ ಸಹಾಯ ನಿಧಿ ರವಾನೆ

ಕನ್ನಡಮ್ಮ ಸುದ್ದಿ- ಗೋಕಾಕ: ಕೇರಳ ರಾಜ್ಯ ಮತ್ತು ಕೊಡಗು-ಮಡಿಕೇರಿ ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪದಿಂದ ಬಳಲುತ್ತಿರುವ ಸಂತ್ರಸ್ತರಿಗಾಗಿ ಸಹಾಯ ಮಾಡುವ ಸಲುವಾಗಿ ಆರ್‌ಎಸ್‌ಎಸ್ ಹಾಗೂ ಜೆಸಿಐ ಸಂಸ್ಥೆ ಆಶ್ರಯದಲ್ಲಿ ನಗರದಲ್ಲಿ ಸಹಾಯ ನಿಧಿ ಸಂಗ್ರಹ ಮಾಡಲಾಯಿತು.
ಬುಧವಾರದಂದು ನಗರದ ಕೊಳವಿ ಹಣಮಂತ ದೇವಸ್ಥಾನದಲ್ಲಿ ಆರ್‌ಎಸ್‌ಎಸ್‌ನ ಮುಖಂಡ ಎಂ.ಡಿ.ಚುನಮರಿ ಅವರು ಚಾಲನೆ ನೀಡಿದರು.
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಲ್ಲ ವ್ಯಾಪಾರಸ್ಥರಿಂದ, ವಿದ್ಯಾರ್ಥಿಗಳಿಂದ, ಆಟೋ ಚಾಲಕರಿಂದ ಹಾಗೂ ನಗರದ ಪ್ರಮುಖರಿಂದ ೫೦ ಸಾವಿರ ರೂ.ಗಳನ್ನು ಸಹಾಯ ನಿಧಿ ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ಜಮಾ ಮಾಡಿದರು. ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಕಾರ್ಯಕ್ರಮ ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಜೆಸಿಐ ಸಂಸ್ಥೆಯ ರಾಷ್ಟಿçÃಯ ಸಂಯೋಜಕ ವಿಷ್ಣು ಲಾತೂರ, ಆರ್‌ಎಸ್‌ಎಸ್ ನ ನಾರಾಯಣ ಮಠಾಧಿಕಾರಿ, ಜೆಸಿಐ ಸಂಸ್ಥೆಯ ಅಧ್ಯಕ್ಷ ಜಿ.ಆರ್.ನಿಡೋಣಿ, ರವಿ ಮಾಲದಿನ್ನಿ, ಮಲ್ಲಪ್ಪ ಮದಿಹಳ್ಳಿ, ಧನ್ಯಕುಮಾರ ಕಿತ್ತೂರ, ಲಕ್ಕಪ್ಪ ತಹಶೀಲ್ದಾರ, ಸಂಬಾಜಿ ನಷ್ಟೆ, ಚೂನಪ್ಪ ಹಟ್ಟಿ, ಸುನೀಲ ಬೆಂಡವಾಡ, ಶಂಕರ ಗೋಕಾವಿ ಇದ್ದರು.

loading...