ಕೊಡಗು ಸಂತ್ರಸ್ತರಿಗೆ ಕರವೇ ಕಾರ್ಯಕರ್ತರಿಂದ ನೆರವು

0
15
loading...

ಕನ್ನಡಮ್ಮ ಸುದ್ದಿ-ನರಗುಂದ: ರಾಜ್ಯದ ಕೊಡಗು, ಉಡುಪಿ, ಮಂಡ್ಯ, ಕೇರಳ ಮುಂತಾದ ಕಡೆಗಳಲ್ಲಿ ಜಲಪ್ರಳಯದಲ್ಲಿ ಸಿಲುಕಿರುವ ಪ್ರವಾಹ ಸಂತ್ರಸ್ತರಿಗೆ ನೇರವಾಗುವಂತೆ ಕರವೇ ಪ್ರವೀಣಶೆಟ್ಟಿ ಬಣದ ಕಾರ್ಯಕರ್ತರು ಹಾಗೂ ವಿವಿಧ ಸಂಘಟಣೆಗಳ ಸದಸ್ಯ ಚನ್ನು ನಂದಿ, ಹನಮಂತ.ಎಚ್. ಮಜ್ಜಿಗುಡ್ಡ. ಡಾ. ಎಚ್.ಆರ್ ಹಿರೇಹಾಳ, ವಾಸುರಡ್ಡಿ ಹೆಬ್ಬಾಳ, ವಿನೋದ ವಡ್ಡರ, ರವಿ ಚಿಂತಾಲ, ಬಾಬೂ ಅತ್ತಾರ, ವಿಠಲ ಜಾಧವ, ಜಗದೀಶ ಗೊಂಡಬಾಳ ಅನೇಕರು 20,160 ರೂ, ನಿಧಿ ಸಂಗ್ರಹಿಸಿ ಡಿಡಿ ಸಿದ್ದಮಾಡಿ ತಹಸೀಲ್ದಾರ ಮುಖಾಂತರ ಪರಿಹಾರ ಸಂತ್ರಸ್ತರ ನಿಧಿಗೆ ತಲುಪಿಸಿದರು.
ಮಹದಾಯಿ ಮಲಪ್ರಭೆ ಹೋರಾಟ ಸಮಿತಿಯಿಂದ ನಿಧಿ ಸಂಗ್ರಹ: ಕೇರಳ ಹಾಗೂ ಕೊಡಗಿನಲ್ಲಿ ಭಾರಿ ಮಳೆ ಬಿದ್ದು ಅಲ್ಲಿಯ ಜನತೆ ತೊಂದರೆ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಮಹದಾಯಿ ಮಲಪ್ರಭೆ ನದಿ ಜೋಡಣೆಗಾಗಿ ಧರಣಿ ನಡೆಸಿದ ರೈತರು ಸೋಮವಾರ ಸಂತ್ರಸ್ಥರಿಗಾಗಿ ನಿಧಿ ಸಂಗ್ರಹಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಧರಣಿ ನಿರತ ರೈತರು ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳಿಗೆ ತೆರಳಿ ನಿಧಿ ಸಂಗ್ರಹಿಸಿದರು. ಒಟ್ಟು 7,300 ರೂಗಳನ್ನು ಸಂಗ್ರಹಿಸಿ ಉಪ ತಹಸೀಲ್ದಾರ ಎ,ಜಿ,ಪಾಟೀಲ ಅವರನ್ನು ಧರಣಿ ಸ್ಥಳಕ್ಕೆ ಕರೆಯಿಸಿ ಪರಿಹಾರ ನಿಧಿಯನ್ನು ನೀಡಿದರು.
ಈ ಸಂದರ್ಭ ರೈತಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ, ಬಸವರಾಜು ಸಾಬಳೆ, ಎಸ್.ಬಿ. ಜೋಗಣ್ಣವರ, ರಮೇಶ ನಾಯ್ಕರ್, ಈರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಸುಬಾಷ್ ಗಿರಿಯಣ್ಣವರ, ಬಿ.ಎಚ್. ಪಠಾಣ, ವಾಸು ಬೋಸ್ಲೆ, ಹನುಮಂತ ಸರನಾಯ್ಕರ್, ವೀರಣ್ಣ ಗಡಗಿಶೆಟ್ಟರ, ಯಲ್ಲಪ್ಪ ಚಲವಾದಿ, ಸೋಮಪ್ಪ ಆಯಟ್ಟಿ, ಲಚ್ಚವ್ವ ಜ್ಯೋತೆಣ್ಣವರ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.

loading...