ಕೊಡಗು ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ

0
5
loading...

ನಿಡಗುಂದಿ: ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಸೇರಿ ಸೋಮವಾರ ಕೊಡಗು ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹಿಸಿದರು.
ನಿಡಗುಂದಿ ಗ್ರಾಮಸ್ಥರು, ಪಟ್ಟಣ ಪಂಚಾಯಿತಿ ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ನವ ನಿರ್ಮಾಣ ಸೇನೆ, ವಿವಿಧ ಸಂಘ ಸಂಸ್ಥೆಗಳ ಮುಖಂಡರೆಲ್ಲರೂ ಸೇರಿ ಪಟ್ಟಣದ ದ್ಯಾಮವ್ವನ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪರಿಹಾರ ನಿಧಿಗಾಗಿ ಹಣ ಸಂಗ್ರಹಿಸಿದರು.

ಒಟ್ಟು ಸಂಗ್ರಹಿಸಿದ ೭೦,೬೮೦ ರೂ ನ್ನು ಡಿಡಿ ತೆಗೆಸಿ ನಿಡಗುಂದಿ ತಹಶೀಲ್ದಾರ್ ಎಂ.ಬಿ. ನಾಗಠಾಣ ಅವರ ಮೂಲಕ ಸರ್ಕಾರದ ಪರಿಹಾರ ನಿಧಿಗೆ ಸಲ್ಲಿಸಲಾಯಿತು.
ಮುಖಂಡರಾದ ಸಿದ್ದಣ್ಣ ನಾಗಠಾಣ, ಸುರೇಶ ಸಣ್ಣಮನಿ, ಸಂಗಣ್ಣ ಕೋತಿನ, ಬಸಯ್ಯ ಸಾಲಿಮಠ, ತಿರುಪತಿ ಬಂಡಿವಡ್ಡರ, ಬಸವರಾಜ ಕುಂಬಾರ, ಮಂಜುನಾಥ ಹಿರೇಮಠ, ಆನಂದ ಹಡಗಲಿ, ನಬೀರ್‌ಸೂಲ್ ಬಾಣಕಾರ ಸೇರಿದಂತೆ ಇನ್ನಿÃತರ ಮುಖಂಡರು ಇದ್ದರು.

loading...