ಕೊಡಗು ಸಂತ್ರಸ್ತರ ನೆರವಿಗೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ

0
18
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಕೊಡಗಿನಲ್ಲಿ ಉಂಟಾಗಿರುವ ನರೆಹಾವಳಿಯಿಂದ ತತ್ತರಿಸಿರುವ ಸಂತ್ರಸ್ತರಿಗೆ ನೆರವು ನೀಡಲು ಮಾಡಿಕೊಂಡ ಮನವಿಗೆ ಜಿಲ್ಲೆಯ ಜನ ಉತ್ತಮ ರೀತಿಯಲ್ಲಿ ಸ್ಪಂದಿಸಿ, ಉದಾರ ದೇಣಿಗೆಯನ್ನು ನೀಡುತ್ತಿದ್ದು, ಮಾನವೀಯತೆ ಮೆರೆದಿದ್ದಾರೆ.
ಸೋಮವಾರದಂದು ದೇಣಿಗೆಯನ್ನು ನೀಡಿದ ಸಾರ್ವಜನಿಕರಿಗೆ ಹಾಗೂ ಪರಿಹಾರ ಸಾಮಗ್ರಿ ಸಂಗ್ರಹಿಸುವಲ್ಲಿ ಶ್ರಮ ವಹಿಸಿದವರಿಗೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಜಿಲ್ಲಾಡಳಿತದ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಣದ ದೇಣಿಗೆಯನ್ನು ನೀಡಬಯಸುವವರು ಖಾತೆಯ ಹೆಸರು – ಅhieಜಿ ಒiಟಿisಣeಡಿ ಖeಟieಜಿ ಈuಟಿಜ ಓಚಿಣuಡಿಚಿಟ ಅಚಿಟಚಿmiಣಥಿ 2018, ಬ್ಯಾಂಕ್ ಹೆಸರು – S.ಃ.I ಃಚಿಟಿಞ, ಶಾಖೆ ಗಿiಜhಚಿಟಿ souಜhಚಿ bಡಿಚಿಟಿಛಿh, ಖಾತೆ ಸಂಖ್ಯೆ 37887098605, ಐ.ಎಫ್.ಎಸ್.ಸಿ. ಕೋಡ್ SಃIಓ0040277 ಎಂ.ಐ.ಸಿ.ಆರ್ ಸಂಖ್ಯೆ 560002419, ಈ ಖಾತೆಗೆ ಸಲ್ಲಿಸುವ ದೇಣಿಗೆಗೆ ಆದಾಯ ತೆರೆಗೆ ಕಾಯ್ದೆ 80 ಜಿ ರಡಿ ತೆರಿಗೆ ವಿನಾಯಿತಿಯನ್ನೂ ಸಹ ನೀಡಲಾಗುತ್ತದೆ ಎಂದಿದ್ದಾರೆ.ಕೊಪ್ಪಳ ತಾಲೂಕಿನಲ್ಲಿ, ಅಡುಗೆ ಸಾಮಗ್ರಿಗಳು, ಬಟ್ಟೆಗಳು, ಹೊದಿಕೆಗಳು ಸೇರಿದಂತೆ ಅಂದಾಜು ರೂ. 85,000/- ಮೊತ್ತದ ದೇಣಿಗೆ ಸಂಗ್ರಹವಾಗಿದೆ. ಗಂಗಾವತಿ ತಾಲೂಕಿನಲ್ಲಿ, 80 ಸೀರೆಗಳು, 60 ಲಂಗಾ, 100 ಲುಂಗಿಗಳು, 100 ಒಳ ಉಡುಪುಗಳು, 100 ಬನಿಯಾನಗಳು, 100 ಟವಲ್ ಗಳು, 11 ಮಕ್ಕಳ ಉಡುಪುಗಳು ಮತ್ತು 144 ಬಿಸ್ಕತ್ ಪ್ಯಾಕೇಟಗಳು. ಕಾರಟಗಿ ತಾಲೂಕಿನಲ್ಲಿ ಔಷಧಿಗಳು, 150 ಕೆ.ಜಿ. ಅಕ್ಕಿ, 200 ಸ್ಟೀಲ್ ಪ್ಲೇಟ್ಸ್ ಮತ್ತು ತಂಬಿಗೆಗಳು. ಯಲಬುರ್ಗಾ ತಾಲೂಕಿನಲ್ಲಿ, ಬಟ್ಟೆಗಳು, ಧಾನ್ಯಗಳು, ಮತ್ತು ಅಂದಾಜು 27000/- ದೇಣಿಗೆ ಮೊತ್ತ. ಕುಕನೂರು ತಾಲೂಕಿನಲ್ಲಿ, 6000 ಕಿಲೋ ಅಕ್ಕಿ, 89 ಲೀಟರ್ ಅಡುಗೆ ಎಣ್ಣೆ, ಬಿಸ್ಕತ್ ದೊಡ್ಡ ಬಾಕ್ಸ್ 10 ಡಜನ್, 2 ಬಾಕ್ಸ್ ಸೋಪುಗಳು, ಬಟ್ಟೆಗಳು, ಹೊದಿಕೆಗಳು, ಹಾಗೂ ಆರ್ಥಿಕ ದೇಣಿಗೆ (ಇನ್ನೂ ಎಣಿಕೆ ಆಗಿಲ್ಲಾ). ಕುಷ್ಟಗಿ ತಾಲೂಕಿನಲ್ಲಿ: 3 ಬಾಕ್ಸ್ ಬಿಸ್ಕತ್ ಪ್ಯಾಕೇಟಗಳು, 10 ಜೊತೆ ಟೀ ಶರ್ಟ ಹಾಗೂ ಪ್ಯಾಂಟಗಳು. ಕನಕಗಿರಿ ತಾಲೂಕಿನಲ್ಲಿ 100 ಊಟದ ಪ್ಲೇಟ್‍ಗಳು ಮತ್ತು 25 ಲೋಟಗಳು ಸಂಗ್ರಹವಾಗಿವೆ.

loading...