ಕೊಪ್ಪಳದಲ್ಲಿ ಅಗಸ್ಟ್ ೨೧ರಂದು ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಕಾರ್ಯಾರಂಭ- ಎಚ್.ಬಿ.ಹಸಬಿ

0
5
loading...

ಕನ್ನಡಮ್ಮ ಸುದ್ದಿ-ಕೊಪ್ಪಳ :ಬಹುನಿರೀಕ್ಷಿತ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶಾದ್ಯಂತ ಅಗಸ್ಟ್ ೨೧ರಂದು ಚಾಲನೆ ನೀಡಲಿದ್ದಾರೆ. ಅದೇ ದಿನ ಕೊಪ್ಪಳದಲ್ಲಿಯೂ ಈ ಸೇವೆ ಕಾರ್ಯಾರಂಭಗೊಳ್ಳಲಿದೆ ಎಂದು ಗದಗ ಅಂಚೆ ವಿಭಾಗೀಯ ಅಂಚೆ ಅಧೀಕ್ಷಕರಾದ ಎಚ್.ಬಿ.ಹಸಬಿ ಹೇಳಿದರು.

ನಗರದ ಪ್ರಧಾನ ಅಂಚೆ ಕಛೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಭಾರತೀಯ ಅಂಚೆ ಇಲಾಖೆಯು ೧೬೫ ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿಯವರಗೆ ಕೇವಲ ಪತ್ರ ವ್ಯವಹಾರಗಳನ್ನು ಮತ್ತು ನಿಗದಿತ ಹಣಕಾಸು ವ್ಯವಹಾರಗಳನ್ನು ಮಾಡುತ್ತಿತ್ತು. ಅಗಸ್ಟ್ ೨೧ರಂದು ಈ ಇಲಾಖೆ ಬ್ಯಾಂಕಿಂಗ್ ಕ್ಷೆÃತ್ರಕ್ಕೆ ಪಾದಾರ್ಪಣೆ ಮಾಡುತ್ತಿದೆ. ಅದೇ ದಿನ ರಾಷ್ಟçದ ೬೫೦ ಶಾಖೆಗಳು ಹಾಗೂ ೩೨೫೦ ಉಪಶಾಖೆಗಳು ಏಕಕಾಲಕ್ಕೆ ಪ್ರಾರಂಭವಾಗುತ್ತವೆ ಎಂದರು.

ಸಹಾಯಕ ಅಂಚೆ ಅಧೀಕ್ಷಕರಾದ ಪಿ.ಚಿದಾನಂದ, ಮ್ಯಾನೇಜರ್ ದುರುದುಂಡಪ್ಪ, ಪ್ರಧಾನ ಅಂಚೆ ಕಛೇರಿಯ ಅಂಚೆ ಪಾಲಕರಾದ ಬಿ.ವಿ.ಅಂಗಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಜಿ.ಎನ್.ಹಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು. ಸರ್ವೋತ್ತಮ ಉಪಾಧ್ಯಾಯ ಸ್ವಾಗತಿಸಿದರು. ಎಸ್.ಎಚ್.ಹೂಗಾರ ವಂದಿಸಿದರು.

loading...