ಕ್ರೀಡೆಯಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆ: ಎ.ಬಿ. ಕೌಲಗಿ

0
7
loading...

ಇಂಡಿ: ಮಕ್ಕಳಿಗೆ ಕ್ರೀಡೆಗಳು ಅತೀ ಅವಶ್ಯಕವಾಗಿದೆ. ಆದರೆ ಕ್ರೀಡೆಗಳಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ ಎಂದು ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿ ಎ.ಬಿ. ಕೌಲಗಿ ಹೇಳಿದರು.
ಅವರು ತಾಲೂಕಿನ ಸಾಲೋಟಗಿ ಗ್ರಾಮದ ಶಿವಯೋಗೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೋಂಡ ಜಿಲ್ಲಾ ಪಂಚಾಯಿತ, ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇಂಡಿ ನೇತೃತ್ವದಲ್ಲಿ ಪ್ರೌಢಶಾಲೆಗಳ 2018-19 ನೇ ಸಾಲಿನ ವಲಯ ಮಟ್ಟದ ಕ್ರೀಡಾಕೂಟದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದರು.
ಶಾಲಾ ಆವರಣಗಳಲ್ಲಿ ಕ್ರೀಡಾ ಮೈದಾನಗಳಿಲ್ಲದಿದ್ದರೆ ಜೈಲು ಎಂಬ ಭಾವನೆ ಮಕ್ಕಳಲ್ಲಿ ಉಂಟಾಗುತ್ತದೆ. ಪ್ರತಿಯೊಂದು ಶಾಲೆಗಳು ಕ್ರೀಡಾ ಮೈದಾನ ಹೊಂದುವುದು ಅವಶ್ಯವಾಗಿದೆ. ಸದೃಢ ಶರೀರದಲ್ಲಿ ಸದೃಢವಾದ ಮನಸ್ಸು ಇರುತ್ತದೆ. ಕ್ರೀಡೆಗಳು ದೈಹಿಕ, ಮಾನಸಿಕ, ಆರೋಗ್ಯ ಭಾಗ್ಯ ನೀಡುವುದರಿಂದ ಶಿಕ್ಷಕರು ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಆರ್‌.ಎಂ ಬಗಲಿ ಅವರು ಕ್ರೀಡಾಕೂಟವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು. ಹಾಗೂ ಕ್ರೀಡಾ ಧ್ವಜವನ್ನು ಸಂಸ್ಥೆಯ ಉಪಾಧ್ಯಕ್ಷ ಎಸ್‌.ಜೆ ಜೋತಗೊಂಡ ಅವರು ನೆರವೇರಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಕೆ.ಜಿ. ಕರೂರ, ಪ್ರಾಚಾರ್ಯ ಸಿ.ಎಸ್‌. ಮಂಗಳೂರ, ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಸಂಗನಗೌಡ ಹಚ್ಚಡದ, ಎಂ.ಬಿ. ಜಯವಾಡಗಿ, ಹಿರಿಯ ಶಿಕ್ಷಕ ವಿ.ಕೆ.ದೊಡ್ಡಗಾಣೀಗೇರ, ಎಸ್‌.ಎಂ ಮೇತ್ರಿ, ಎಸ್‌.ಎಂ ತಳಕೇರಿ, ವೈ.ಎಸ್‌. ಉಪಾಸೆ, ಹಾಗೂ ಎಲ್ಲಾ ದೈಹಿಕ ಶಿಕ್ಷಕರು ಹಾಗೂ ಶಾಲಾ ಸಿಬ್ಬಂಧಿವರ್ಗದವರು ಇದ್ದರು.

loading...