ಕ್ರಿÃಡಾಪಟುಗಳಿಗೆ ಮಾನಸಿಕ ದೃಢತೆ ಅಗತ್ಯ: ಶೇಖರ ನಾಯ್ಕ

0
6
loading...

ಬೆಳಗಾವಿ: ಕ್ರಿÃಡಾಪಟುಗಳು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಎಲ್ಲ ರೀತಿಯ ಸಂಕಷ್ಟಗಳನ್ನು ಎದುರಿಸುವ ಮಾನಸಿಕ ದೃಢತೆ ಹೊಂದುವುದು ಅಗತ್ಯವಾಗಿದೆ ಎಂದು ಭಾರತೀಯ ಅಂಧರ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಪದ್ಮಶ್ರಿÃ ಶೇಖರ ನಾಯ್ಕ ಹೇಳಿದರು.
ಶನಿವಾರ ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಅರ್ಗನೈóಝೇಷನ ಜಿತೋ ಯುವ ಘಟಕದಿಂದ ರಣನೀತಿ.೩ ” ಮೂರನೇಯ ಆವೃತ್ತಿಯಡಿ ಇದೇ ಅಗಸ್ಟ ೧೧ ರಿಂದ ೧೪ ರವರೆಗೆ ನಡೆಯುವ ಕ್ರಿÃಡಾ ಸ್ಫರ್ಧಾಮೇಳದ ಅಂಗವಾಗಿ ಕ್ರಿÃಡಾ ಪಟುಗಳ ಹರಾಜು ಪ್ರಕ್ರಿಯೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಬಹಳ ಕಷ್ಟಗಳನ್ನು ಅನುಭವಿಸಿದ್ದೆÃನೆ. ಅಂಧರು ಎಂಬ ಕಾರಣದಿಂದ ಕೆಲವೊಂದು ಸಂದರ್ಭದಲ್ಲಿ ಕಿಳುರಮೆ ಅನುಭವಿಸಿದ್ದೆÃನೆ. ಆದರೆ ಇವೆಲ್ಲದಕ್ಕೂ ಅಂಜದೆ ಧೈರ್ಯದಿಂದ ಮುನ್ನುಗ್ಗಿ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡು ವಿಶೇಷ ಸಾಧನೆ ಮಾಡಿ ದೇಶಕ್ಕೆ ಗೌರವ ಮತ್ತು ಹೆಮ್ಮೆ ತಂದಿರುವುದು ಸಂತೋಷದ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಕ್ಷಿಣ ಮತ ಕ್ಷೆÃತ್ರದ ಶಾಸಕ ಅಭಯ ಪಾಟೀಲ ಅವರು ಮಾತನಾಡಿ, ಜಿತೋ ಸಂಸ್ಥೆಯು ಕ್ರಿÃಡಾಪಟುಗಳಿಗೆ ಉತ್ತೆÃಜನ ನೀಡುತ್ತ ಅನೇಕ ಉದಯೋನ್ಮುಖ ಕ್ರಿÃಡಾಪಟುಗಳಿಗೆ ಇಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಬೆಳಗಾವಿಯಲ್ಲಿ ಅನೇಕ ಕ್ರಿÃಡಾ ಪ್ರತಿಭೆಗಳಿದ್ದಾರೆ . ಆದರೆ ಅವರಿಗೆ ಸೂಕ್ತ ವೇದಿಕೆ ಇಲ್ಲದ ಕಾರಣ ಕ್ರಿÃಡೆಯಿಂದ ದೂರ ಉಳಿಯುವಂತಾಗಿದೆ.ಮುಂಬರುವ ದಿನಗಳಲ್ಲಿ ಬೆಳಗಾವಿಯಲ್ಲಿ ಕೈಗಾರಿಕೋದ್ಯಮದ ಜೊತೆಗೆ ಕ್ರಿÃಡಾ ಸಂಕುಲಗಳನ್ನು ಪ್ರಾರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅಭಯ ಪಾಟೀಲ ಅವರು ಭರವಸೆ ನೀಡಿದರು.
ಸಮಾರಂಭದಲ್ಲಿ ಜಿತೋ ಅಧ್ಯಕ್ಷ ಸತೀಶ ಶಹಾ ಅವರು ಮಾತನಾಡಿದರು. ವೇದಿಕೆ ಮೇಲೆ ಜಿತೋ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಹರದಿ ಉಪಸ್ಥಿತರಿದ್ದರು. ಜಿತೋ ಯುವ ಘಟಕದ ಅಧ್ಯಕ್ಷ ಅಮಿತ ದೋಷಿ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಕಾರ್ಯದರ್ಶಿ ಅಕ್ಷಯ ಭೊಜನ್ನವರ ವಂದಿಸಿದರು. ರಜತ ಹರದಿ ಮತ್ತು ಸಾಹಿತ್ಯಾ ದೊಡ್ಡಣ್ಣವರ ಕಾರ್ಯಕ್ರಮ ನಿರೂಪಿಸಿದರು. ೧೨೦ ವಿವಿಧ ಕ್ರಿÃಡೆಗಳಲ್ಲಿನ ಕ್ರಿÃಡಾ ಪಟುಗಳ ಹರಾಜು ಕಾರ್ಯಕ್ರಮ ನಡೆಯಿತು.

loading...