ಕ್ರಿÃಡಾ ಮನೋಭಾವದಿಂದ ಭಾಗವಹಿಸಿ: ಜಿರಾಳೆ

0
5
loading...

ಕನ್ನಡಮ್ಮ ಸುದ್ದಿ-ತೇರದಾಳ: ಸೋಲೆ ಗೆಲುವಿನ ಸೋಪಾನ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಕ್ರಿÃಡಾ ಮನೋಭಾವದಿಂದ ಕ್ರಿÃಡೆಯಲ್ಲಿ ಭಾಗವಹಿಸಿ ಅತ್ಯುತ್ತಮ ಕ್ರಿÃಡಾಪಟು ತಯಾರಾದಾಗ ಜಗತ್ತೆÃ ಅವರನ್ನು ನಿಬ್ಬೆರಗಾಗಿ ನೋಡುತ್ತದೆ. ಸ್ಪರ್ಧೆಗಳು ಮಕ್ಕಳಲ್ಲಿ ಕ್ರಿÃಡಾ ಮನೋಭಾವ ಪ್ರೆÃರೆಪಿಸುವಂತಾಗಬೇಕು ಎಂದು ಎಚ್.ವಾಯ್. ಜಿರಾಳೆ ಹೇಳಿದರು.
ಪಟ್ಟಣದ ಗುರುಕುಲ ಆಟದ ಮೈದಾನದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ ಬಾಗಲಕೋಟ, ಕ್ಷೆÃತ್ರ ಶಿಕ್ಷಣಾಧಿಕಾರಿಗಳು, ಕ್ಷೆÃತ್ರ ಸಮನ್ವಯಾಧಿಕಾರಿಗಳು ಕಾರ್ಯಾಲಯ ಜಮಖಂಡಿ, ಸಮೂಹ ಸಂಪನ್ಮೂಲ ಕೇಂದ್ರ ತೇರದಾಳ ಹಾಗೂ ಶಂಕರಲಿಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಇವರ ಸಂಯುಕ್ತ ಆಶ್ರಯದಲ್ಲಿ ೧೪ವರ್ಷದ ವಯೋಮಿತಿಯೊಳಗಿನ ಪ್ರಾಥಮಿಕ ಶಾಲಾ ಮಕ್ಕಳ ತೇರದಾಳ ಪೂರ್ವ ವಲಯ ಮಟ್ಟದ ಕ್ರಿÃಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸದೃಢವಾದ ದೇಹದಲ್ಲಿ ಸದೃಡವಾದ ಮನಸ್ಸು ಇರುತ್ತದೆ.

ಸ್ಮಾರ್ಟಫೋನಗಳನ್ನು ಮಕ್ಕಳ ಕೈಗೆ ಕೊಡುವುದರಿಂದ ಮಕ್ಕಳಲ್ಲಿನ ಸ್ಪರ್ಧಾ ಮನೋಭಾವನೆ ನಶಿಸಿ ಹೋಗುತ್ತದೆ. ಸ್ಪರ್ಧೆಯಲ್ಲಿ ಸೋಲು ಗೆಲವು ಸಾಮಾನ್ಯ, ಸೋಲಿಗೆ ಹತಾಶೆಯಾಗದೆ ಮುಂದೆ ಸಾಗಿ ಯಶಸ್ಸನ್ನು ಕಾಣಬೇಕು ಎಂದರು. ವಿಶ್ವನಾಥ ಉಪ್ಪಿನ ಕ್ರಿÃಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಾನಿಧ್ಯವಹಿಸಿ ಕ್ರಿÃಡಾ ಧ್ವಜಾರೋಹಣ ನೆರವೇರಿಸಿ ಮಗಯ್ಯಸ್ವಾಮಿ ತೆಳಗಿನಮನಿ ಆಶೀರ್ವಚನ ನೀಡಿದರು. ಅಣ್ಣಪ್ಪ ಕಿಚಡಿ ಅಧ್ಯಕ್ಷತೆ ವಹಿಸಿದ್ದರು. ಟಿ.ಸಿ. ಪಡಸಲಗಿ, ಎ.ಕೆ. ಹೊನಮನಿ, ಸಿಆರ್‌ಪಿ ಎಸ್.ಬಿ. ಹಡಪದ, ದೈಹಿಕ ಶಿಕ್ಷಕ ಜಿ.ಬಿ. ಸಂಗೋಂದಿ, ಶಿವಾನಂದ ಬಡಿಗೇರ, ತುಳಜಪ್ಪ ಮಾಳಿ ಸೇರಿದಂತೆ ಇನ್ನಿತರರು ವೇದಿಕೆಯ ಮೇಲಿದ್ದರು. ತೇರದಾಳ ವಲಯದ ಎಲ್ಲ ದೈಹಿಕ ಶಿಕ್ಷಕರು, ಮುಖ್ಯಗುರುಗಳು, ಶಿಕ್ಷಕರು ಸೇರಿದಂತೆ ಇತರರು ಇದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯಗುರು ಶಂಕರ ತಿಗಣಿ ಸ್ವಾಗತಿಸಿದರು. ವ್ಹಿ.ಎಸ್. ಅಂಗಡಿ ನಿರೂಪಿಸಿದರು. ದಾನಮ್ಮ ಹಿರೇಮಠ ವಂದಿಸಿದರು.

loading...