ಕ್ಷೆÃತ್ರದ ಅಭಿವೃದ್ದಿ ಶ್ರಮಿಸಿದ್ದೆನೆ ಕಾಂಗ್ರೆಸ್‌ಗೆ ಮತಹಾಕಿ: ಆಶೋಕ ಪಟ್ಟಣ ಮನವಿ

0
0
loading...

ಕ್ಷೆÃತ್ರದ ಅಭಿವೃದ್ದಿ ಶ್ರಮಿಸಿದ್ದೆನೆ ಕಾಂಗ್ರೆಸ್‌ಗೆ ಮತಹಾಕಿ: ಆಶೋಕ ಪಟ್ಟಣ ಮನವಿ
ಕನ್ನಡಮ್ಮ ಸುದ್ದಿ-ರಾಮದುರ್ಗಃ ರಾಮದುರ್ಗ ನಗರದ ಜನರಿಗೆ ಬಹುದಿನ ಬೇಡಿಕೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಯೋಜನೆ ರೂಪಿಸಿ ಮಲಪ್ರಭಾ ನದಿ ನವಿಲು ತೀರ್ಥ ಡ್ಯಾಂನಿಂದ ಶುದ್ದ ಕುಡಿಯುವ ನೀರು ನೀಡಲಾಗುತ್ತಿದೆ ಪುರಸಭೆಯ ಅಭಿವೃದ್ದಿಗಾಗಿ ಶ್ರಮಿಸಲಾಗಿದೆ ಆದ್ದರಿಂದ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಚುಣಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತವನ್ನು ನೀಡಬೇಕೆಂದು.
ಮಾಜಿ ಶಾಸಕ ಅಶೋಕ ಮ.ಪಟ್ಟಣ ಹೇಳಿದರು.
ಸ್ಥಳೀಯ ಪುರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಯನಗರ, ಭಾಗ್ಯನಗರ, ಬಿಳಗಿನಗರ, ಶ್ರಿÃಪತಿನಗರ, ಸೇರಿದಂತೆ ವಿವಿಧ ವಾರ್ಡಗಳಲ್ಲಿ ಮತಯಾಚನೆ ಮಾಡಿದರು. ಶಾಸಕನಾದ ಅವಧಿಯಲ್ಲಿ ನೂರು ಕೋಟಿ ಹೆಚ್ಚು ಅನುದಾನವನ್ನು ಅಂದು ನಗರದ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸಲಾಗಿದೆ, ರಾಮದುರ್ಗ ನಗರದ ಜನತಗೆ ದಿನದ ೨೪x೭ ತಾಸು ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಇದರಿಂದ ನಗರದ ಜನರಿಗೆ ನೀರಿನ ತೊಂದರೆ ನಿವಾರಣೆಯಾಗಿದೆ. ಮುಳ್ಳೂರ ಗುಡ್ಡದ ಮೇಲೆ ರಾಜ್ಯದ ಎರಡನೇಯ ಬೃಹತ್ ಎತ್ತರದ ಶಿವನ ಮೂರ್ತಿ, ಸಾಯಿ ಮಂದಿರ ಹಾಗೂ ಸುಂದರವಾದ ಉದ್ಯಾನವನ ನಿರ್ಮಾಣವಾಗುತ್ತಿದೆ. ನಗರದ ಸೌಂದರ್ಯಕ್ಕಾಗಿ ಸುಂದರವಾದ ರಸ್ತೆಗಳು, ರಸ್ತೆ ನಡುವೆ ಅಲಂಕಾರಿಕ ವಿದ್ಯುತ್ ದೀಪ, ಪ್ರತಿವಾರ್ಡಗಳಲ್ಲಿ ಸಿಸಿ ರಸ್ತೆ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಸಮಗ್ರ ಅಭಿವೃದ್ದಿಗೆ ಶ್ರಮಿಸಲಾಗಿದೆ. ರಾಮದುರ್ಗದ ಜೀವನದಿ ಮಲಪ್ರಭಾ ನದಿಯನ್ನು ಹೂಳೆತ್ತುವ ಮೂಲಕ ಮತ್ತೆ ಅತಿಕ್ರಮಣವಾಗದಂತೆ ನದಿಯ ಸುತ್ತಲು ಪಿಚ್ಚಿಂಗ ಮಾಡಿಸಿ ನದಿಯನ್ನು ಸ್ವಚ್ಚಗೊಳಿಸಲಾಗಿದೆ. ಮೃತ್ಯೂಕೂಪದಂತಿರುವ ಮೂಳ್ಳೂರ ಘಾಟ ರಸ್ತೆಯನ್ನು ಬದಲಿಸಿ ಹೊಸ ರಸ್ತೆಯನ್ನು ನಿರ್ಮಾಣ ಮಾಡಿ ಜನರಿಗೆ ಹಾಗೂ ವಾಹನಗಳಿಗೆ ಮುಕ್ತ ಸಂಚಾರಕ್ಕೆ ಅನೂಕೂಲ ಕಲ್ಪಿಸಲಾಗಿದೆ. ಕಾಂಗ್ರೆಸ್ ಮುಖಂಡ ಬಿ.ಎಸ್. ನಾಯ್ಕ ಮಾತನಾಡಿ ಅಗಷ್ಟ ೩೧ ಶುಕ್ರವಾರ ರಂದು ನಡೆಯಲಿರುವ ರಾಮದುರ್ಗ ಪುರಸಭೆಯ ಚುನಾವಣೆಗೆ ೨೭ ವಾರ್ಡಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ, ನಗರದ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಿ ಅಭಿವೃದ್ದಿಗೆ ಸಹಕರಿಸಬೇಕು ಎಂದು ತಮ್ಮಲ್ಲಿ ವಿನಂತಿ ಪೂರ್ವಕವಾಗಿ ಕೇಳಿಕೊಳ್ಳುತ್ತೆÃನೆ. ಈ ಸಂದರ್ಬದಲ್ಲಿ ಅಭ್ಯರ್ಥಿಗಳಾದ ಇಮಾಮಸಾಬ ಕಲಾದಗಿ, ದುರಗಪ್ಪ ಬಂಡಿವಡ್ಡರ, ಪದ್ಮಾವತಿ ಸಿದ್ದಲಿಂಗಪ್ಪನವರ, ಮೋಹನ ಅಬ್ಬಿಗೇರಿ, ರಾಜೇಶ್ವರಿ ಮೆಟಗುಡ್ಡ, ದಾದಾಪೀರ ಬೇಪಾರಿ ಮುಖಂಡರಾದ ಜಿ.ಬಿ.ರಂಗನಗೌಡರ, ಬಿ.ಎಂ ಪಾಟೀಲ, ಸೋಮಶೇಖರ ಸಿದ್ದಲಿಂಗಪ್ಪನವರ, ಮಹಾಮತೇಶ ಹಿರೇಮಠ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

loading...