ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ ಬಿಡುಗಡೆಗೆ ಆಗ್ರಹಿಸಿ ಮೌನ ಪ್ರತಿಭಟನೆ

0
4
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ಎಸ್.ಐ.ಟಿ ಬಂಧಿಸಿರುವ ನಗರದ ಪ್ರಮುಖ ಆರೋಪಿಗಳೆಂದು ಹೇಳುವ ಗಣೇಶ್ ಮಿಸ್ಕಿನ್ ಹಾಗೂ ಅಮಿತ್ ಬದ್ದಿ ಅವರು ಅಮಾಯಕರಾಗಿದ್ದು ಈ ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಎಸ್‍ಎಸ್‍ಕೆ ಸಮಾಜದಿಂದ ನಗರದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.
ಗಣೇಶ್ ಮಿಸ್ಕಿನ್ ಹಾಗೂ ಅಮಿತ್ ಬದ್ದಿ ಸಮಾಜದ ಯುವಕರಾಗಿದ್ದು ಹತ್ಯೆಯ ಯಾವುದೇ ರೀತಿಯ ಪ್ರಕರಣದಲ್ಲಿ ಪಾಲ್ಗೊಂಡಿಲ್ಲ ಅವರು ಅಮಾಯಕರು ಅವರನ್ನು ಕೂಡಲೇ ಪ್ರಕರಣದಿಂದ ಕೈ ಬಿಡಬೇಕು ಎಂದು ಸಮಾಜದ ವತಿಯಿಂದ ಒತ್ತಾಯಿಸಲಾಯಿತು. ಅಮಾಯಕ ಯುವಕರನ್ನು ಸುಖಾಸುಮ್ಮನೆ ಅಪರಾಧಿ ಎಂದು ಬಿಂಬಿಸುವುದು ದುರದೃಷ್ಟಕರ ಹಾಗೂ ಖಂಡನೀಯವಾಗಿದೆ ಅವರ ಕುಟುಂಬದವರಿಗೆ ಯಾವುದೇ ಮಾಹಿತಿಯನ್ನು ನೀಡದೇ ಏಕಾಏಕಿಯಾಗಿ ಬಂಧಿಸಿರುವುದು ಸರಿಯಲ್ಲ ಎಂದು ಎಸ್.ಎಸ್.ಕೆ. ಸಮಾಜದ ಮುಖಂಡರು ಹೇಳಿದರು. ನಗರದ ದಾಜೀಬಾನಪೇಟೆಯ ತುಳಜಾಭವಾನಿ ದೇವಸ್ಥಾನದಿಂದ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು .ಈ ಸಂದರ್ಭದಲ್ಲಿ ಎಸ್.ಎಸ್.ಕೆ. ಸಮಾಜದ ಮುಖ್ಯ ಧರ್ಮದರ್ಶಿ ನೀಲಕಂಠ ಜಡಿ, ಎಸ್.ಎಸ್. ಕೆ. ಬ್ಯಾಂಕ್ ಚೇರ್ಮನ್ ವಿಠ್ಠಲ್ ಲದವಾ, ಮಾಜಿ ಶಾಸಕ ಅಶೋಕ್ ಕಾಟವೆ, ಮಾಜಿ ಮಹಾಪೌರ ಡಿ ಕೆ ಚೌಹಾಣ್, ಎಸ್ಸಿ ನಿರಂಜನ್, ಯುವಕ ಮಂಡಲ, ಮಹಿಳಾ ಮಂಡಲ ಇತರ ಸದಸ್ಯರು ಭಾಗವಹಿಸಿದ್ದರು.

loading...