ಗಣೇಶ ಉತ್ಸವ ಸಂಬಂಧಿಸಿದಂತೆ ಅಧಿಕಾರಿಗಳ‌ ಸಭೆ ಕರೆಯಲಾಗುವುದು: ಮೇಯರ ಚಿಕ್ಕಲದಿನ್ನಿ

0
33
loading...

ಕನ್ನಡಮ್ಮ ‌ಸುದ್ದಿ-ಬೆಳಗಾವಿ: ನಗರದ ಗಣೇಶ ಉತ್ಸವವಕ್ಕೆ ನೂರು ವರ್ಷಗಳ ಕಾಲ ಇತಿಹಾಸ ವಿದೆ. ಆದ್ದರಿಂದ ಗಣೇಶ ಉತ್ಸವಕ್ಕೆ ತೊಂದರೆಯಾಗದಂತೆ ಪಾಲಿಕೆ ಅಧಿಕಾರಿಗಳ ಸಭೆ ಕರೆದು ರಸ್ತೆ,ಹಾಗೂ‌ ವಿದ್ಯುತ್‌ವ್ಯವಸ್ಥೆ ಮಾಡಲಾಗುವುದು ಎಂದು ಮೇಯರ ಬಸಪ್ಪಾ ಚಿಕ್ಕಲದಿನ್ನಿ ಭರವಸೆ ನೀಡಿದರು.

ಅವರು ಮಹಾನಗರ ಪಾಲಿಕೆ ಮೇಯರ ಅವರ ಕಚೇರಿಯಲ್ಲಿ ಮಧ್ಯವರ್ತಿ ಮಹಾಮಂಡಳ‌ ಹಾಗೂ ವಡಗಾಂವ, ಶಹಾಪುರ ಗಣೇಶ ಮಂಡಳ ಮನವಿಗೆ ಸ್ವಿಕರಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಪಿಒಪಿ ಗಣೇಶ ನಿಷೇಧ ಮಾಡಬಾರದು. ಕಾರಣ ಪಾಲಿಕೆ ವತಿಯಿಂದ ಈಗಾಗಲೇ
ಗಣೇಶ ವಿಸರ್ಜನೆ ಪ್ರತ್ಯೇಕ ಮೂರು ಹೊಂಡ ಮಾಡಿಸಲಾಗಿದೆ‌. ಇದರಿಂದ ಪರಿಸರಕ್ಕೆ ಯಾವುದೇ ರೀತಿ ಹಾನಿಯಾಗುವುದಿಲ್ಲ. ವಿಜೃಂಭಣೆಯಿಂದ ಗಣೇ ಉತ್ಸವ ಆಚರಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು. ಇದೇ ವೇಳೆ ನಗರದ ಸ್ವಚ್ಛತೆ ಉದ್ದೇಶದಿಂದ ಕಸ ಡಬ್ಬಿಗಳನ್ನು ನಗರದಾದ್ಯಂತ ರಸ್ತೆಯ ಪಕ್ಕ‌ ಇಡಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಉಪಮೇಯರ ಮಧು ಶ್ರೀ ಪೂಜಾರ,ಮಧ್ಯವರ್ತಿ ಮಹಾಮಂಡಳದ ವಿಕಾಸ ಕಲಘಟಗಿ, ರಮಾಕಾಂತ ಪುಂಡುಸ್ಕರ, ಶಿವರಾಜ ಪಾಟೀಲ.ಮದನ ಬಾಮನಿ,ಸತೀಶ ಗೌರಗುಂಡಾ.ರಾಜೇಂದ್ರ ಗಂಡೆ,ಬಾಳಾ ಸಾಹೇಬ್ ಕಾಕತಕರ, ಶೇಕರ ಹಂಡೆ, ಇತರರು ಇದ್ದರು.

loading...