ಗರ್ಭಿಣಿ ಪತ್ನಿ ಸಜೀವ ದಹನಕ್ಕೆ ಯತ್ನ: ಪತಿ ಪರಾರಿ

0
12
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಗರ್ಭಿಣಿ ಮಹಿಳೆಯನ್ನು ಸಜೀವ ದಹನಕ್ಕೆ ಯತ್ನಿಸಿದ ಅಮಾನವೀಯ ಘಟನೆ ಜಿಲ್ಲೆಯ ಗೋಕಾಕ ತಾಲೂಕಿನ ತಪಸಿ ಗ್ರಾಮದಲ್ಲಿ ನಡೆದಿದೆ.
ತಪಸಿ ಗ್ರಾಮದ ಅನುಸೂಯ ಎಂಬ ಮಹಿಳೆಯ ಮೇಲೆ ವರದಕ್ಷಿಣೆ ಕಿರುಕುಳ ನೀಡಿ ಸಜೀವ ದಹನಕ್ಕೆ ಅವಳ ಪತಿ ಸಿದ್ದಪ್ಪ ಮತ್ತು ಆತನ ಕುಟುಂಬ ಯತ್ನಿಸಿದೆ. ಗಂಭೀರ ಗಾಯಗೊಂಡ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗಿದೆ. ಘಟನೆ ನಂತರ ಪತಿ ಮತ್ತು ಆತನ ಕುಟುಂಬಸ್ಥರು ಪರಾರಿಯಾಗಿದ್ದಾರೆ. ಈ ಕುರಿತು ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...