ಗಾಂಜಾ ನಶೆಯಲ್ಲಿ ಚಾಕುವಿನಿಂದ ಯುವಕನ ಮೇಲೆ ಬರ್ಬರವಾಗಿ ಹಲ್ಲೆ

0
7
loading...

ಗಾಂಜಾ ನಶೆಯಲ್ಲಿ ಚಾಕುವಿನಿಂದ ಯುವಕನ ಮೇಲೆ ಬರ್ಬರವಾಗಿ ಹಲ್ಲೆ

ಕನ್ನಡಮ್ಮ ಸುದ್ದಿ-ಬೆಳಗಾವಿ:ನಗರದ ಖಾಸಭಾಗ ಪ್ರದೇಶದಲ್ಲಿ ನಿನ್ನೆ ರಾತ್ರಿ ಹಿಂದವಾಡಿಯ ಯುವಕನೊಬ್ಬ ಗಾಂಜಾ ಸೇವನೆ ಮತ್ತು ಕುಡಿದ ಅಮಲಿನಲ್ಲಿ ಬಂದು ಚಾಕುವಿನಿಂದ ಬರ್ಬರವಾಗಿ ತಲೆಗೆ ಹಲ್ಲೆ ಮಾಡಿ ಪರಾರಿಯಾದ ಘಟನೆ ಖಾಸಭಾಗ ಪ್ರದೇಶದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ತುರ್ತು ಚಿಕಿತ್ಸಾ ಘಟಕದಲ್ಲಿ ಇರಿಸಲಾಗಿದೆ.ತಲೆಗೆ ಗಂಭಿರ ಗಾಯವಾಗಿದ್ದು ಸುಮಾರು ೪೦ ಕ್ಕೂ ಹೆಚ್ಚು ಹೊಲಿಗೆಗಳಾಗಿವೆ ಎಂದು ತಿಳಿದು ಬಂದಿದ್ದು, ಹಲ್ಲೆಗೋಳಗಾದ ಯುವಕ ಸುಕಲ್ಪ ಸತೀಶ್ ಪಾಟೀಲ ವಯಸ್ಸು ೨೧ ಖಾಸಭಾಗ ನಿವಾಸಿಯಾಗಿದ್ದಾನೆ ಎಂದು ಗುರುತಿಸಲಾಗಿದೆ. ಶಾಹಾಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...