ಗುಳೆ ತಡೆ ಅಭಿಯಾನ ರಥಕ್ಕೆ ಬಾಲಚಂದ್ರನ್‌ರಿಂದ ಚಾಲನೆ

0
7
loading...

ಕನ್ನಡಮ್ಮ ಸುದ್ದಿ-ಕೊಪ್ಪಳ : ಮುನಿರಾಬಾದ ಗ್ರಾ.ಪಂ. ಆವರಣದಲ್ಲಿ ಗುಳೆ ತಡೆ ಅಭಿಯಾನ ಉದ್ಯೋಗ ಮಾಹಿತಿಯುಳ್ಳ ಅಭಿಯಾನ ರಥಕ್ಕೆ ತಾ.ಪಂ ಅಧ್ಯಕ್ಷ ಬಾಲಚಂದ್ರನ್‌ ಅವರು ಹಸಿರು ನೀಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಬಯಸಿ ಗ್ರಾ.ಪಂಗೆ ಅರ್ಜಿ ಸಲ್ಲಿಸಿ ಕೂಲಿ ಉದ್ಯೋಗ ಪಡೆದುಕೊಳ್ಳಿ. ಪ್ರತಿ ದಿನಕ್ಕೆ ಕೂಲಿ ರೂ.249/-ನ್ನು ನಿಗದಿಪಡಿಸಿದ್ದು ಮತ್ತು ಉಪಕರಣಗಳ ಬಳಕೆಗಾಗಿ ಗುದ್ದಲಿ, ಸಲಿಕೆ ಹರಿತಕ್ಕೆ ರೂ.10/-ನ್ನು ಹೆಚ್ಚುವರಿಯಾಗಿ ಪಾವತಿಸಲು ಅವಕಾಶವಿದೆ. ಯಾವುದೇ ಕಾರಣಕ್ಕೂ ಕೂಲಿಕಾರರು ಗುಳೆ ಹೋಗದೇ ಸ್ಥಳೀಯವಾಗಿ ಗ್ರಾ.ಪಂಗೆ ಸಂಪರ್ಕಿಸುವುಂತೆ ತಾ.ಪಂ.ಅಧ್ಯಕ್ಷ ಬಾಲಚಂದ್ರನ್‌ ಹೇಳಿದರು. ಮುನಿರಾಬಾದ ಗ್ರಾ.ಪಂ. ಅಧ್ಯಕ್ಷೆ ಸುಶೀಲಮ್ಮ, ಉಪಾಧ್ಯಕ್ಷೆ ಖುರ್ಷಿದಾಬೇಗಂ, ಸದಸ್ಯ ವೆಂಕೋಬ ದಾಸರ, ಭಾರತಿ, ಪಿಡಿಓ ದುರ್ಗಾಪ್ರಸಾದ, ಕರವಸೂಲಿಗಾರ ರಾಜು, ಗಣಕಯಂತ್ರ ನಿರ್ವಾಹಕ ದೊಡ್ಡಬಸಪ್ಪ ಹಾಗೂ ಸಿಬ್ಬಂದಿ ಇದ್ದರು.

loading...