ಗೂಳಪ್ಪಾ ಗೆಲುವು ಬಿಜೆಪಿ ನಾಯಕರ ಪ್ರತಿಷ್ಠೆಯ ಸವಾಲಾಗಿದೆ: ಗದ್ದಿಗೌಡರ

0
10
loading...

ವಿಜಯಪುರ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೂಳಪ್ಪಾ ಶಟಗಾರ ಗೆಲುವು ಅವಳಿ ಜಿಲ್ಲಾ ಬಿಜೆಪಿ ನಾಯಕರ ಪ್ರತಿಷ್ಠೆಯ ಸವಾಲಾಗಿದೆ ಎಂದು ಬಾಗಲಕೋಟ ಸಂಸದ ಗದ್ದಿಗೌಡರ ಹೇಳಿದರು.
ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಬಿಜೆಪಿಯ ಅಭ್ಯರ್ಥಿಯಾದ ಗೂಳಪ್ಪಾ ಶಟಗಾರ ಅವರ ಚುನಾವಣಾ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಗೂಳಪ್ಪಾ ಶಟಗಾರ ನಾಮಪತ್ರ ಸಲ್ಲಿಸಿದ್ದಾರೆ. ಇವರ ಗೆಲವು ಬಿಜೆಪಿ ಅವಳಿ ಜಿಲ್ಲೆಯ ನಾಯಕರಿಗೆ ಸವಾಲಾಗಿದೆ. ಈ ಚುನಾವಣೆ ಅವಳಿ ಜಿಲ್ಲೆಯ ಮುಂದಿನ ಲೋಕ ಸಭೆಯ ಚುನಾವಣೆಯ ದಿಕ್ಸೂಚಿಯಾಗಿದೆ. ಅದಕ್ಕಾಗಿ ಪಕ್ಷದ ನಾಯಕರು ಈ ಸವಾಲನ್ನು ಸ್ವಿÃಕರಿಸಿ ಶತಾಯ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.
ಬಾಗಲಕೋಟ ಜಿಲ್ಲಾ ಅಧ್ಯಕ್ಷ ಸಿದ್ದು ಸವದಿ ಮಾತನಾಡಿ, ವಿಜಯಪುರ ಬಾಗಲಕೋಟ ಅಖಂಡ ಜಿಲ್ಲೆ ಬಿಜೆಪಿಗೆ ಗಂಡು ಮೆಟ್ಟಿದ ನೆಲವಾಗಿದ್ದು, ಈ ಬಾರಿ ಇಬ್ಬರು ಸಂಸದರು ಹತ್ತು ಜನ ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಇಷ್ಟೆಲ್ಲ ಶಕ್ತಿ ನಮ್ಮೊÃಂದಿಗೆ ಇದ್ದಾಗ ಈ ಚುನಾವಣೆಯಲ್ಲಿ ನಮ್ಮ ಗೆಲವು ಶತಸಿದ್ದ. ಆದ್ದರಿಂದ ಎಲ್ಲರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಗೂಳಪ್ಪಾ ಶಟಗಾರ ಅವರ ಪರವಾಗಿ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಉಪಾಧ್ಯಕ್ಷ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಮಖಂಡಿಯ ಮಾಜಿ ಶಾಸಕ ಶ್ರಿÃಕಾಂತ ಕುಲಕರ್ಣಿ, ರಮೇಶ ಭುಸನೂರ, ಚಂದ್ರಶೇಖರ ಕವಟಗಿ, ವಿಜುಗೌಡ ಪಾಟೀಲ ಸೇರಿದಂತೆ ಕಾರ್ಯಕರ್ತರು ಇದ್ದರು.

loading...