ಗೈರು ಹಾಜರಾದರೆ ಶಿಸ್ತುಕ್ರಮ: ತಹಶೀಲ್ದಾರ ಎಚ್ಚರಿಕೆ

0
4
loading...

ಗುಳೇದಗುಡ್ಡ: ರಾಷ್ಟಿçÃಯ ಕಾರ್ಯಕ್ರಮಗಳ ಬಗ್ಗೆ ಕರೆಯುವ ಸಭೆಯಲ್ಲಿ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕೈಗೊಳ್ಳಲಾಗುವುದು ಎಂದು ಇಲ್ಲಿನ ತಹಶೀಲ್ದಾರ ಸುರೇಶ ವರ್ಮಾ ಎಚ್ಚರಿಕೆ ನೀಡಿದರು. ನೂತನ ಗುಳೇದಗುಡ್ಡ ತಾಲೂಕಿನ ಸ್ವಾತಂತ್ರೊö್ಯÃತ್ಸವದಂದು ಸಾರ್ವಜನಿಕ ಧ್ವಜಾರೋಹಣ ಆಚರಿಸುವ ನಿಟ್ಟಿನಲ್ಲಿ ಸೋಮವಾರ ನಗರದ ಪುರಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಕೆಲವು ಅಧಿಕಾರಿಗಳು ಗೈರು ಹಾಜರಾದ ಹಿನ್ನಲೆಯಲ್ಲಿ ಅವರು ಈ ಎಚ್ಚರಿಕೆ ನೀಡಿದರು. ನಗರದಲ್ಲಿನ ತಾಲೂಕು ಕಚೇರಿಗಳ ಜೊತೆಗೆ ಎಲ್ಲ ಸಹಕಾರಿ ಸಂಘ, ಸಂಸ್ಥೆಗಳ ಕಚೇರಿಯ ಮುಂದೆ ಸ್ವಾತಂತ್ರö್ಯ ದಿನದಂದು ರಾಷ್ಟçಧ್ವಜ ಹಾರಿಸುವುದ ಕಡ್ಡಾಯವಾಗಿದೆ. ಧ್ವಜನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು ಎಂದರು.
ಗುಳೇದಗುಡ್ಡ ತಾಲೂಕು ಆಡಳಿತದಿಂದ ನಗರದ ಪುರಸಭೆ ಎದುರು ತಹಶೀಲ್ದಾರ ಅವರು ಸ್ವಾತಂತ್ರö್ಯ ದಿನದ ಧ್ವಜಾರೋಹಣ ನೆರವೇರಿಸಲು ಹಾಗೂ ಈ ಬಾರಿ ಪುರಸಭೆ ಚುನಾವಣೆಯ ಹಿನ್ನಲೆಯಲ್ಲಿ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಸ್ವಾತಂತ್ರö್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಾರ್ವಜನಿಕ ಧ್ವಜಾರೋಹ ಕಾರ್ಯಕ್ರಮದಲ್ಲಿ ನಗರದ ಸಾರ್ವಜನಿಕರು, ಗಣ್ಯವ್ಯಕ್ತಿಗಳು, ಎಲ್ಲ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕ ಸಿಬ್ಬಂದಿಗಳು, ಸರಕಾರಿ ಇಲಾಖೆಯ ಎಲ್ಲ ಸಿಬ್ಬಂದಿಗಳು ಭಾಗವಹಿಸುವಂತೆ ಕೋರಲಾಯಿತು.

ಪೂರ್ವಭಾವಿ ಸಭೆಯಲ್ಲಿ ತಾಲೂಕಿನ ಎಲ್ಲ ಶಾಲೆಗಳ ಮುಖ್ಯೊÃಪಾಧ್ಯಾಯರುಗಳು, ಎಲ್ಲÀ ಸರಕಾರಿ ಇಲಾಖೆಯ ಮುಖ್ಯಸ್ಥರು, ಬಾಗವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಯೇಸು ಬೆಂಗಳೂರು, ಮ್ಯಾನೇಜರ ಯು.ಜಿ. ವರದಪ್ಪನವರ ಹಾಗೂ ಸಿಬ್ಬಂದಿ ಇದ್ದರು.

loading...