ಗೋಟುರ ಪಿಕೆಪಿಎಸ್ ಚುನಾವಣೆ: ಲಕ್ಷ್ಮೀದೇವಿ ಪ್ಯಾನೆಲ್ ಭರ್ಜರಿ ಗೆಲವು.

0
128
loading...

ಗೋಟುರ ಪಿಕೆಪಿಎಸ್ ಚುನಾವಣೆ: ಲಕ್ಷ್ಮೀದೇವಿ ಪ್ಯಾನೆಲ್ ಭರ್ಜರಿ ಗೆಲವು.

ಕನ್ನಡಮ್ಮ ಸುದ್ದಿ-ಸಂಕೇಶ್ವರ :ಸಮೀಪದ ಗೋಟುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ರವಿವಾರ ನಡೆದ ಚುನಾವಣೆಯಲ್ಲಿ ಹಳೆಯ ಲಕ್ಷ್ಮೀ ದೇವಿ ಪ್ಯಾನಲ್‌ ಭರ್ಜರಿ ಗೆಲವು ಸಾಧಿಸಿದೆ.

ಪಿಕೆಪಿಎಸ್ ಚುನಾವಣೆಗೆ ಗ್ರಾಮದಲ್ಲಿ ರವಿವಾರ ಮುಂಜಾನೆಯಿಂದ ಮತದಾನ ನಡೆದಿತ್ತು .ಸಂಜೆ ಮತ ಎಣಿಕೆಯು ಸಂಘದ ಕಚೇರಿಯಲ್ಲಿ ನಡೆಸಲಾಯಿತು.ಚುನಾವಣೆ ಕೇಂದ್ರದ ಸುತ್ತಮುತ್ತ ಬೀಗಿ ಪೊಲೀಸ್ ಬಂಧೂಬಸ್ತ ಒದಗಿಸಲಾಗಿತ್ತು .

ಚುನಾವಣೆಯಲ್ಲಿ ಆಯ್ಕೆಯಾದವರ ಹೆಸರು ಇಂತಿವೆ.

ಸಾಮಾನ್ಯ ವರ್ಗದಿಂದ ಪುಂಡಲಿಕ ನಂದಗಾವಿ,ತಿಪ್ಪಣ್ಣ ಕಮತೆ,ವಿಶ್ವನಾಥ ಅ ಕಮತೆ,ದುಂಡಪ್ಪ ಭಿ.ಪಾಟೀಲ,ಬಾಳಗೌಡ(ಸುಜೀತ) ಸಾ ಪಾಟೀಲ ಆಯ್ಕೆಯಾದರೆ, ಹಿಂದುಳಿದ ‘ಅ’ ವರ್ಗದಿಂದ
ಬಸವಣ್ಣಿ ಶಿ ಹಿಡದುಗ್ಗಿ, ಶಿವಾನಂದ ಕುಂದಿ,
ಮಹಿಳಾ ಕ್ಷೇತ್ರದಿಂದ ಅಕ್ಕಾತಾಯಿ ದು ಸತ್ತಿಗೆರಿ,ಇಂದುತಾಯಿ ಮ ರವಳೋಜಿ,
ಬಿನ್ ಸಾಲಗಾರ ಕ್ಷೇತ್ರದಿಂದ ಭೀಮಗೌಡ ಮಾ ಪಾಟೀಲ ಆಯ್ಕೆ ಯಾಗಿದ್ದಾರೆ. ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಮಸೂಭಾ ಶೇಖನ್ನವರ ವಿಜಯರಾಗಿದ್ದಾರೆ,ಪರಿಶಿಷ್ಟ ವರ್ಗದಿಂದ ಆನಂದ ವಗ್ಗೆರ ಜಯಶಾಲಿಯಾಗಿದ್ದಾರೆ .

ತೀವ್ರ ಕೂತುಹಲ ಮೂಡಿಸಿದ್ದ ಈ ಚುನಾವಣೆ ಜಿದ್ದಾ ಜಿದ್ದಿ ನಡುವೆ ಪುಂಡಲಿಕ ನಂದಗಾವಿ ನೇತೃತ್ವದಲ್ಲಿ ಭರ್ಜರಿ ಗೆಲವು ಸಾಧಿಸಿ ಮುಂದಿನ ಐದು ವರ್ಷಗಳ ಅವಧಿಗೆ ಲಕ್ಷ್ಮಿ ದೇವಿ ಪ್ಯಾನೆಲ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

loading...