ಗೋವಿನ ಜೋಳಕ್ಕೆ ಲದ್ದಿಹುಳು ಕೀಟ ಭಾದೆ, ಬಾಡುತ್ತಿರುವ ಬೆಳೆ ಆತಂಕದಲ್ಲಿ ರೈತರು

0
4
loading...

ಗೋವಿನ ಜೋಳಕ್ಕೆ ಲದ್ದಿಹುಳು ಕೀಟ ಭಾದೆ, ಬಾಡುತ್ತಿರುವ ಬೆಳೆ ಆತಂಕದಲ್ಲಿ ರೈತರು
ಲದ್ದಿ ಹುಳ ನಿಂತ್ರಣಕ್ಕೆ ಅಧಿಕಾರಿಗಳಿಂದ ರೈತರಿಗೆ ಮಾಹಿತಿ

ಮುತ್ತು ಕಮ್ಮಾರ
ರಾಮದುರ್ಗಃ ರೈತರಿಗೆ ಒಂದಿಲ್ಲೊಂದು ಕಷ್ಟ ತಪ್ಪಿದ್ದಲ್ಲ ಎನ್ನುವುದು ಸತ್ಯ ತಾಲೂಕಿನಲ್ಲಿ ಗೋವಿನ ಜೋಳದ ಬೆಳೆಗೆ ತಗಲುವ ಲದ್ದಿಹುಳು ಕಾಣಿಸಿಕೊಂಡಿದ್ದು, ಎಷ್ಟೆ ಎತ್ತರಕ್ಕೆ ಬೆಳದ ಬೆಳೆಯನ್ನು ಈ ಕೀಟ ಭಾಧೆಯಿಂದ ಬೆಳೆ ನಾಶವಾಗುತ್ತಿವೆ ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ತಾಲೂಕಿನಲ್ಲಿ ಈಗಾಗಲೆ ೧೨೭೦೦ ಹೆಕ್ಟರ್ ಪ್ರದೇಶದಲ್ಲಿ ಗೋವಿನ ಜೋಳ ಬೆಳೆಯಲಾಗಿದೆ. ಪರಿಪೂರ್ಣವಾಗಿ ಹಿಂಗಾರು ಮಳೆಯಾಗದಿದ್ದರೂ ಆಗಾಗ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ಬೆಳೆಯು ಬೆಳೆದು ನಿಂತಿದೆ. ಆದರೆ ಲದ್ದುಹುಳು ಕಾಣಿಸಿಕೊಂಡಿದ್ದು, ಬೆಳೆನಾಶವಾಗುವ ಬೀತಿಯಲ್ಲಿ ರೈತರು ಕಾಲ ಕಳೆಯುತ್ತಿದ್ದಾರೆ.
ಲದ್ದಿ ಹುಳು ಚರಿತ್ರೆ:
ಮುಸುಕಿನಜೋಳದಲ್ಲಿ ವೈಜ್ಞಾನಿಕವಾಗಿ ಸ್ಪೊÃಡಾಪ್ಟೆರಾ ಪ್ರೂಜಿಪೆರ್ಡಾ ಎಂದು ಕರೆಯುವ ಕೀಡೆ ಅಲ್ಪ ಸಮಯದಲ್ಲಿ ಹೆಚ್ಚು ಆಹಾರವನ್ನು ತಿಂದು ಹೆಚ್ಚಿನ ಪ್ರಮಾಣದಲ್ಲಿ ಲದ್ದಿಯನ್ನು ಹಾಕುತ್ತದೆ. ಇದನ್ನೆ ಲದ್ದಿಹುಳು ಎಂದು ಕರೆಯುತ್ತಾರೆ.
ಲದ್ದಿಹುಳು ಬೆಳೆಹಾನಿಯುಂಟು ಮಾಡುವ ಬಗೆ:
ಹೆಣ್ಣು ಪತಂಗವು ಎಲೆಯ ಮೇಲೆ ಗುಂಪುಗುಂಪಾಗಿ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳಿಂದ ಹೊರಬಂದ ಮರುಹುಳುಗಳು ಮೊದಲು ಎಲೆಗಳನ್ನು ಕೆರೆದು ತಿನ್ನುತ್ತದೆ. ನಂತರ ಕಾಂಡ ಕೊರೆಯುವ ಕೀಟದಂತೆ ಸುಳಿಗರಿಗಳಲ್ಲಿ ಸಣ್ಣಸಣ್ಣ ರಂದ್ರಗಳನ್ನು ಮಾಡಿ ಎಲೆಗಳನ್ನು ತಿಂದು ನಾಶಪಡಿಸುತ್ತವೆ. ಬೆಳೆಯ ಎಲ್ಲಾ ಹಂತಗಳಲ್ಲಿಯೂ ಈ ಕೀಡೆಯು ಬೆಳೆಯನ್ನು ಬಾಧಿಸುತ್ತದೆ.
ಲದ್ದುಹುಳು ನಿರ್ವಹಣೆ ಮಾಡುವ ಕ್ರಮಗಳು:
ಬೆಳೆಯ ಎತ್ತರ ಕಡಿಮೆ ಇದ್ದಲ್ಲಿ ಜೈವಿಕ ಕ್ರಮಗಳನ್ನು ಅನುಸರಿಸುವುದು ಸೂಕ್ತ. ೨ಗ್ರಾಂ ನ್ಯೂಮೇರಿಯಾ ಅಥವಾ ೨ ಗ್ರಾಂ ಬಿಟಿ ದಂಡಾಣು ಅಥವಾ ೨ ಗ್ರಾಂ ಮೆಟಾರೈಜಿಯಂ ಪ್ರತಿ ಲೀಟರ್ ನೀರಿಗೆ ಬೆಳೆಗಳಿಗೆ ಸಿಂಪರಿಸಬೇಕು.
ರಾಸಾಯನಿಕ ಕ್ರಮಗಳು: ಲ್ಯಾಮ್ಡಾಸೈಹೆಲೋಥ್ರಿನ್ ೫ಇಸಿ/೦.೫ಮೀ.ಲಿ ಅಥವಾ ಎಮಾಮೆಕ್ಸಿನ್ ಬೆಂಜೋತೆಟ್ ೫ ಎಸ್.ಜಿ/೦.೪ ಗ್ರಾಂ ಅಥವಾ ಸ್ಪೆöÊನೋಸ್ಯಾಡ್ ೪೫ ಎಸ್.ಸಿ/೦೨ಮಿ.ಲಿ ಅಥವಾ ಕ್ಲೊÃರೆಂಟ್ರಾನಿಲಿಪ್ರೊÃಲ್ ೧೮.೫% ಎಸ್.ಸಿ/೦೨ ಮಿ.ಲೀ. ಅಥವಾ ಫ್ಲೂಬೆಂಡಿಯಾಮೈಟ್ ೩೯.೩೫ ಎಸ್.ಸಿ/೦.೧ ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿ ಹಾಗೂ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು. ಸಿಂಪರಣೆಯನ್ನು ಬೆಳಿಗ್ಗೆ ಅಥವಾ ಸಾಯಂಕಾಲ ಮಾಡುವುದು ಸೂಕ್ತ ವಿಧಾನ.
ಬೆಳೆ ಎತ್ತರವಾಗಿದ್ದಲ್ಲಿ ಕಳಿತ ವಿಷಪಾಷಾಣ ಬಳಸಬೇಕು. ಒಂದು ಎಕರೆಗೆ ೨೦ ಕೆಜಿ ವಿಷಪಾಷಾಣ ಬಳಸಬೇಕು.
ವಿಷಪಾಷಾಣ ತಯಾರಿಸುವ ವಿಧಾನ:
೨ ಕೆಜಿ ಬೆಲ್ಲ, ೨೫೦ ಮಿ.ಲೀ ಮೋನೊಕ್ರೊÃಟೊಫಾಸ್, ೩೬ ಎಸ್.ಎಲ್ ಮತ್ತು ಭತ್ತ ಅಥವಾ ಗೋದಿ ತೌಡು ತಕ್ಕ ಮಟ್ಟಿಗೆ ನೀರು ಬೆರೆಸಿ ರಾತ್ರಿಯಿಡಿ ಕಳೆಯಲು ಬಿಡಬೇಕು. ಅಥವಾ ೨ ಕೆ.ಜಿ ಬೆಲ್ಲ ಹಾಗೂ ೨೦ ಕೆ.ಜಿ ಭತ್ತ ಇಲ್ಲವೆ ಗೋದಿ ತೌಡು ತಕ್ಕ ಮಟ್ಟಿಗೆ ನೀರನ್ನು ಬೆರೆಸಿ ರಾತ್ರಿಯಿಡಿ ಕಳೆಯಲು ಬಿಟ್ಟು ಮಾರನೇ ದಿನ ೨೦೦ ಗ್ರಾಂ. ಥೈಯೋಡಿಕಾರ್ಬ್ ಕೀಟನಾಶಕ ಮಿಶ್ರಣ ಮಾಡಿ ಸಾಯಂಕಾಲ ಬೆಳೆಯ ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ ಎರಚಬೇಕು. ಕೀಡೆಗಳು ಈ ವಿಷ ಪಾಷಾಣಕ್ಕೆ ಬೇಗನೆ ಆಕರ್ಷಿತಗೊಂಡು ತಿನ್ನುವುದರಿಂದ ಬಹುಬೇಗನೆ ಹತೋಟಿ ಸಾಧ್ಯವಾಗುತ್ತದೆ. ಬೆಳೆ ದಟ್ಟವಾಗಿದ್ದಲ್ಲಿ ಎರಡು ಸಾಲಿಗೊಂದರಂತೆ ಎರಡು ಮೀಟರ್ ಅಂತರದಲ್ಲಿ ಒಂದೊಂದು ಹಿಡಿ ಪಾಷಾಣವನ್ನು ಹೊಲದಲ್ಲಿ ಇಟ್ಟು ಕೀಡೆಗಳನ್ನು ಆಕರ್ಷಿಸಿ ನಾಶಪಡಿಸಬಹುದುದೆಂದು ನಿವೃತ್ತ ಸಾಹಾಯಕ ಕೃಷಿ ನಿರ್ದೇಶಕ ಆರ್.ಡಿ.ಕಟಗಲ್ಲ ಹೇಳುತ್ತಾರೆ.

—–ಬಾಕ್ಸ್——-

ಅಮೇರಿಕಾದಲ್ಲಿರುವ ಹೊಸಪ್ರಬೇದ ಲದ್ದಿಹುಳು ಕೀಡೆಯು ಏಷ್ಯಾಖಂಡದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಕಂಡು ಬಂದಿದೆ. ಇದು ಎಲ್ಲ ಬೆಳೆಗಳಿಗೆ ಬಾಧಿಸುತ್ತದೆ. ರಾಮದುರ್ಗ ತಾಲೂಕಿನಲ್ಲಿ ಗೋವಿನ ಜೋಳದ ಬೆಳೆಯಲ್ಲಿ ಲದ್ದಿಹುಳು ಕಂಡು ಬಂದಿದ್ದು, ಈಗಾಗಲೆ ತಾಲೂಕಿನ ಹಲವು ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಈ ಕೀಡೆಯನ್ನು ಬಹುಬೇಗನೆ ಹತೋಟಿಗೆ ತರಬಹುದು. ರೈತರು ಆತಂಕ ಪಡುವ ಅಗತ್ಯವಿಲ್ಲ. ಹುಳು ಕಂಡ ತಕ್ಷಣ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕೃಷಿ ಸಹಾಯಕರಿಂದ ಮಾಹಿತಿ ಪಡೆಯಬೇಕು.

ಎಚ್.ಡಿ.ಕೋಳೆಕರ್ ಜಂಟಿ ಕೃಷಿ ನಿರ್ದೇಶಕರು, ಬೆಳಗಾವಿ.
—ಬಾಕ್ಸ್——

ತಾಲೂಕಿನಲ್ಲಿ ಗೋವಿನಜೋಳದ ಬೆಳೆಗೆ ಹೊಸಬಗೆ ಲದ್ದಿಹುಳು ಕಾಣಿಸಿಕೊಂಡಿದೆ. ಇಂತಹ ಹುಳುವನ್ನು ಎಂದೂ ಕಂಡಿಲ್ಲ. ಕೀಡೆಯನ್ನು ಹತೋಟಿಗೆ ತರಲು ಕೃಷಿ ಅಧಿಕಾರಿಗಳು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ರೈತ ಬಾಂಧವರು ಅಧಿಕಾರಿಗಳು ನೀಡಿದ ಸಲಹೆಗಳನ್ನು ಪಾಲಿಸಿದರೆ ಬೇಗನೆ ಹತೋಟಿಗೆ ತರಬಹುದು.
ಬಸವರಾಜ ನಡಮನಿ ಶಿಕ್ಷಕರು, ಪ್ರಗತಿಪರ ರೈತರು ಮುಖಂಡರು, ಹಲಗತ್ತಿ
ಆರ್.ಡಿ.ಕಟಗಲ್ಲ ನಿವೃತ್ತ ಕೃಷಿ ನಿರ್ದೇಶಕರು.

loading...