ಗೋ- ಹತ್ಯೆ ನಿಷೇಧಕ್ಕೆ ಎಲ್ಲರೂ ಶ್ರಮಿಸಿ: ಶಿವಾಚಾರ್ಯರು

0
4
loading...

ಕನ್ನಡಮ್ಮ ಸುದ್ದಿ-ನರಗುಂದ: ಭಾರತವನ್ನು ಸಂಪೂರ್ಣ ಗೋಮಾಂಸ ರಫ್ತು ಮುಕ್ತ ಮತ್ತು ಜಾನುವಾರು, ಪ್ರಾಣಿಬಲಿ ಹತ್ಯೆಮುಕ್ತ ರಾಷ್ಟವನ್ನಾಗಿಸಲು ನಾವೆಲ್ಲ ಕಂಕನಬದ್ಧರಾಗಬೇಕಿದೆ. ಈ ದಿಶೆಯಲ್ಲಿ ಗೋವಂಶ-ಜಾನುವಾರು ಹತ್ಯೆ ಮುಕ್ತ ಕರ್ನಾಟಕ ನಿರ್ಮಾಣ ಸಂಘಟಣೆಗಳು ಅ. 22 ರಂದು ನಡೆಯುವ ಬಕ್ರೀದ್ ಸಂದರ್ಭದಲ್ಲಿ ಗೋಹತ್ಯೆಯನ್ನು ನಿಷೇಧಿಸಲು ದೊಡ್ಡ ಚಳುವಳಿಯನ್ನು ಆರಂಭಿಸಲಿರುವುದು ದೇಶದಲ್ಲಿ ಹೆಚ್ಚಿನ ಮಾನ್ಯತೆ ಪಡೆದುಕೊಂಡಂತಾಗಿದೆ ಎಂದು ಪಟ್ಟಣದ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ತಿಳಿಸಿದರು.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೋಹತ್ಯೆ ನೀಷೇಧಿಸಬೇಕೆಂದು ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಪ್ರತಿಭಟಣೆ ಮೂಲಕ ತಹಸೀಲ್ದಾರರಿಗೆ ಮನವಿ ಅರ್ಪಿಸಲಾಗುವುದು. ಗೋಪಶು, ಪ್ರಾಣಿಗಳು ಭಾರತೀಯರ ಬೆನ್ನೆಲಬು. ಹಾಗೂ ಸಮೃದ್ದ ಸಶಕ್ತ ಭಾರತದ ಜೀವಾಳ. ಪರಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಅವರು ತಿಳಿಸಿದರು.ಸರ್ಕಾರ ಗೋವಂಶ ರಕ್ಷಾದಳ ಎಂಬ ನಿಯಮ ಜಾರಿಗೆ ತಂದಿದ್ದರೂ ಕೂಡ ಸಂಪೂರ್ಣವಾಗಿ ಕಾನೂನು ಚೌಕಟ್ಟು ಪರಿಪಾಲನೆಯಾಗುತ್ತಿಲ್ಲ. ಭಾರತ ಸಂವಿಧಾನದ ಕಲಂ 48,51 ಎ ಇತ್ಯಾಧಿಗಳ ಪ್ರಕಾರ ಗೋಹತ್ಯೆ ನಿಷೇಧ, ಗೋವಂಶಾಧಿ ಜಾನುವಾರುಗಳ, ವನ್ಯಜೀವಿಗಳ ಕೆರೆ, ಕಟ್ಟೆ ಸರೋವರ ಇತ್ಯಾಧಿಗಳ ಸಂರಕ್ಷಣೆ, ಸಂವರ್ಧನೆ ಹಾಗೂ ಸಕಲ ಜೀವರಾಶಿಗಳಲ್ಲಿಯೂ ದಯಾಭಾವ ಹೊಂದಿರುವ ಪ್ರತಿಯೊಬ್ಬ ಭಾರತೀಯರ ಸಂವಿಧಾನ ಬದ್ದ ಮೂಲಕರ್ತವ್ಯವೆನ್ನುವುದನ್ನು ನಾವೆಲ್ಲ ಮರೆಯದೇ ಪಾಲಿಸಬೇಕಿದೆ. ಹೀಗಾಗಿ ನಾವೆಲ್ಲ ನಮ್ಮ ಭಾರತೀಯ ಸಂಪ್ರದಾಯ ಕಾನೂನು ಪಾಲಿಸಿ ಗೋಹತ್ಯೆಯನ್ನು ನಿಲ್ಲಿಸೋಣವೆಂದು ತಿಳಿಸಿದರು.
ವಿಶ್ವಹಿಂದು ಪರಿಷತ್ ತಾಲೂಕ ಘಟಕದ ಅಧ್ಯಕ್ಷ ರವಿ ಹೊಂಗಲ ಮಾತನಾಡಿ, ಗೋಹತ್ಯೆ ತಡೆಯಲು ಈಗಾಗಲೇ ಪ್ರತಿ ಜಿಲ್ಲೆಯಲ್ಲಿ ಡಿಸಿ ಅಧ್ಯಕ್ಷತೆಯಲ್ಲಿ ಎಸ್.ಪಿ.ಆರ್.ಟಿ.ಸಿ, ಸಿಇಓ ಅವರನ್ನೊಳಗೊಂಡ ಜಿಲ್ಲಾ ಸಮಿತಿಯನ್ನು ನೇಮಿಸಲಾಗಿದೆ. ಆ ಸಮಿತಿಯ ಮೂಲಕವೇ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಬಕ್ರೀದ್, ರಂಜಾನ್ ಹಾಗೂ ಇನ್ನಿತರ ದಿನಗಳಲ್ಲಿಯೂ ಗೋವು, ಒಂಟೆಗಳು ಮತ್ತು ಕಾನೂನಿನಲ್ಲಿ ನಮೋದಿಸಲ್ಪಟ್ಟ ಇನ್ನಿತರ ಜಾನುವಾರುಗಳ, ಪ್ರಾಣಿಗಳ ಹತ್ಯೆ ಮತ್ತು ಬಲಿಯನ್ನು ಸಾಮೂಹಿಕ ಸ್ಥಳ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಾಣಿಗಳ ಹತ್ಯೆ, ಸಾಗಾಣಿಕೆ ಅಥವಾ ಖರೀಧಿ, ಮಾರಾಟ, ಸಂಖ್ಯೆಗಿಂತ ಹೆಚ್ಚು ಪ್ರಾಣಿಗಳನ್ನು ವಾಹನಗಳಲ್ಲಿ ತುಂಬಿ ಸಾಗಿಸುವುದನ್ನು ತಡೆಯಲು ಮುಂದಾಗಬೇಕು. ಪೊಲೀಸ್ ವ್ಯವಸ್ಥೆ ಇಂತಹ ಅಕ್ರಮಗಳನ್ನು ತಡೆದು ಅಕ್ರಮ ಸಾಗಾಣಿಕೆಯ ಜಾನುವಾರುಗಳನ್ನು ವಶಪಡಿಸಿಕೊಂಡು ಸರ್ಕಾರಿ ಅಥವಾ ಖಾಸಗಿ ಸಂಘ,ಸಂಸ್ಥೆಗಳ ಗೋಶಾಲೆಗಳಿಗೆ ಸರಂಕ್ಷಣೆ ಮಾಡಲು ಸೇರಿಸಬೇಕೆನ್ನುವ ನಿಯಮವನ್ನು ಪಾಲಿಸಬೇಕೆಂದು ತಿಳಿಸಿದರು.ಬಸನಗೌಡ ಮಲ್ಲನಗೌಡ್ರ, ಸಂಗಣ್ಣ ಕಳಸ, ವಿಠಲ ಕಾಪ್ಸೆ, ನಿರಂಜನ ಮಡಿವಾಳರ, ಶಂಕರಗೌಡ ಪಾಟೀಲ, ವೆಂಕಟೇಶ ಖಾನಪೇಠ, ಮುರುಗೇಶ ಪುರಾಣಿ, ಬಸವರಾಜ ಬಿಜಾಪೂರ, ವಿಜಯ ಮಾನೆ, ಪ್ರಕಾಶ ಹಸಬಿ, ಶ್ರೀನಿವಾಸ ಗುಜಮಾಗಡಿ, ಬಸವರಾಜ ಗಡೇಕಾರ ಅನೇಕರು ಉಪಸ್ಥಿತರಿದ್ದರು.

loading...