ಚರಂಡಿಯಲ್ಲಿ ನೀರಿನ ಪೈಪ್‌ ಅಳವಡಿಕೆ: ನಿವಾಸಿಗಳಿಂದ ಆಕ್ರೋಶ

0
0
loading...

ಕನ್ನಡಮ್ಮ ಸುದ್ದಿ-ಕುಕನೂರು: ತಾಲೂಕಿನ ಇಟಗಿಯ 1ನೇ ವಾರ್ಡ್‌ನ ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್‌ನ್ನು ಅಳವಡಿಸಲಾಗಿದ್ದು, ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನ ಟ್ಯಾಂಕ್‌ ಸಂಪರ್ಕಿಸುವ ಪೈಪ್‌ನ್ನು ಚರಂಡಿಯಲ್ಲೇ ಗ್ರಾಪಂನವರು ಅಳವಡಿಸಿದ್ದಾರೆ. ಅಲ್ಲದೇ ಪೈಪ್‌ ಕೆಲವು ಕಡೆ ಲೀಕೇಜ್‌ ಆಗಿದ್ದು, ಚರಂಡಿ ನೀರು ಪೈಪ್‌ನಲ್ಲಿ ಮಿಶ್ರಿತವಾಗುತ್ತಿದೆ. ಈ ಬಗ್ಗೆ ಗ್ರಾಪಂಗೆ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನುತ್ತಿಲ್ಲವೆಂದು ನಿವಾಸಿಗಳು ಆರೋಪಿಸಿದ್ದಾರೆ.
ಸುಲೋಚಮ್ಮಾ ಕ್ಯಾದಗುಂಪಿ, ಶ್ಯಾವಮ್ಮ ಹಡಪದ, ಗಂಗಮ್ಮ ಉಳ್ಳಾಗಡ್ಡಿ, ರೇಣವ್ವ ಕ್ಯಾದಗುಂಪಿ, ರೇಣಪ್ಪ ಅಮ್ಮರಗೋಳ್‌, ಈರಪ್ಪ ಕ್ಯಾದಗುಂಪಿ, ಸದ್ದಾಂ ಎಳಿಗಾರ್‌, ಪ್ರಭುರಾಜ್‌ ಹಳ್ಳಿ, ಜಾಹೀರ್‌ ಎಳಿಗಾರ್‌, ಬಸವರಾಜ ಹಳ್ಳಿ, ಮುತ್ತಣ್ಣ ಕಳ್ಳಿ ಇದ್ದರು.

loading...