ಚಿನ್ನಾಭರಣ ವ್ಯಾಪಾರಸ್ಥರು ಪ್ರತಿಭಟನೆ

0
3
loading...

ವಿಜಯಪುರ : ಚಿನ್ನದ ವರ್ತಕರ ಮೇಲೆ ಗ್ರಾಮೀಣ ಪೊಲೀಸ್‌ ಠಾಣೆಯ ಅಧಿಕಾರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಚಿನ್ನಾಭರಣ ವ್ಯಾಪಾರಸ್ಥರು ಮಂಗಳವಾರವೂ ಸಹ ತಮ್ಮ ಅಂಗಡಿಗಳನ್ನು ಬಂದ್‌ ಮಾಡಿದ್ದಾರೆ.
ಮಂಗಳವಾರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ಸರಾಫ್‌ ಬಜಾರ್‌ನಿಂದ ಬೃಹತ್‌ ಪ್ರತಿಭಟನಾ ರ್ಯಾಲಿ ಸಹ ನಡೆಸಿದರು. ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದ ರ್ಯಾಲಿ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು. ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಹಲ್ಲೆ ನಡೆಸಿದ ಸಿಪಿಐ ಅವರನ್ನು ಅಮಾನತ್ತುಗೊಳಿಸಬೇಕು ಎಂದು ಪೊಲೀಸ್‌ ಮಹಾ ನಿರ್ದೇಶಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ, ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಚಿನ್ನಾಭರಣ ವ್ಯಾಪಾರಿ ಪ್ರದೀಪ (ಬಾಳು) ಗಿರಗಾಂವಕರ ಮಾತನಾಡಿ, ಆರೋಪಿಯೊಬ್ಬ ಅಂಗಡಿ ತೋರಿಸಿದ್ದಾನೆ ಎಂಬ ಕಾರಣಕ್ಕೆ ಮಹಾರಾಷ್ಟ್ರದ ಮಹಾಳ ಬಳಿ ಚಿನ್ನದ ಅಂಗಡಿ ನಡೆಸುತ್ತಿರುವ ನಮ್ಮ ಸಂಬಂಧಿಕರನ್ನು ಪೊಲೀಸರು ಗ್ರಾಮೀಣ ಪೊಲೀಸ್‌ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈ ಬಗ್ಗೆ ಸೌಜನ್ಯವಾಗಿ ವಿಚಾರಿಸಲು ಹೋದಾಗ ಗ್ರಾಮೀಣ ಪೊಲೀಸ್‌ ಠಾಣೆಯ ಸಿಪಿಐ ನಮ್ಮ ಮೇಲೆ ಹಲ್ಲೆ ನಡೆಸಲು ಮುಂದಾದರು, ನಿಂದಿಸಿದರು. ತಪ್ಪಿದ್ದರೆ, ತಪ್ಪು, ಕೇವಲ ಏನಾಗಿದೆ ಹೇಳಿ ಎಂದು ಹೇಳಿದರೆ ನನ್ನನ್ನೇ ನಿಂದಿಸಿದ್ದಾರೆ. ಈ ರೀತಿ ಪೊಲೀಸರ ವರ್ತನೆ ಸರಿಯಲ್ಲ. ನನಗೆ ನ್ಯಾಯ ದೊರಕಬೇಕು, ನ್ಯಾಯಕ್ಕಾಗಿ ನಾನು ಬೆಳಗಾವಿ ಐಜಿಪಿ ಅವರಿಗೂ ಭೇಟಿ ಮಾಡುತ್ತೇನೆ, ಅಲ್ಲಿಯೂ ನ್ಯಾಯ ದೊರಕದಿದ್ದರೆ ಗೃಹ ಸಚಿವರ ಬಳಿ ಹೋಗುವೆ ಎಂದರು.
ಚಿನ್ನದ ಅಂಗಡಿ ವ್ಯಾಪಾರಸ್ಥರಾದ ಸಂತೋಷ ವಿಶ್ವಕರ್ಮ, ಉದಯ ಸೋನಾರ, ಬಸವರಾಜ ಬಡಿಗೇರ, ಸಚಿನ ಗಿರಗಾಂವಕರ ಮೊದಲಾದವರು ಪ್ರತಿಭಟನೆ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

loading...