ಚಿನ್ನ ಸಾಗಣೆ ಹಿಂದೆ ಸ್ಮಗ್ಲಿಂಗ್ ಮಾಫಿಯಾ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಆಧಿಕಾರಿಗಳೇ ದಂಗು..!

0
4
loading...

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಎರಡು ಪ್ರತ್ಯೇಕ ಅಕ್ರಮ ಚಿನ್ನಸಾಗಾಣೆ ಪ್ರಕರಣದಲ್ಲಿ ಇಬ್ಬರು ಮಹಿಳೆಯರು,ದಂಪತಿಯನ್ನು ಬಂಧಿಸಲಾಗಿದೆ.
ಅಂದ ಹಾಗೇ ವಿಮಾನ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರನ್ನು ಒಳ ಉಡುಪಿನಲ್ಲಿ ಚಿನ್ನದ ಪುಡಿ ಸಾಗಿಸುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಮುಂಬೈ ಮೂಲದ ಷಹೀದಾ ಬಾನು ಎಂಬುವರಿಂದ 24 ಲಕ್ಷ ಮೌಲ್ಯದ, 796 ಗ್ರಾಂ ಚಿನ್ನದ ಪುಡಿ ಹಾಗೂ ಶಕೀನಾ ಶೇಕ್ ಎಂಬುವರಿಂದ 853 ಗ್ರಾಂ ಚಿನ್ನದ ಪುಡಿಯನ್ನು ಜಪ್ತಿ ಮಾಡಲಾಗಿದೆ.
ಅಬುದಾಬಿ ಹಾಗೂ ದುಬೈನಿಂದ ಪ್ರತ್ಯೇಕವಾಗಿ ಬಂದ ಮಹಿಳೆಯರನ್ನು ಕಸ್ಟಮ್ಸ್ ಆಧಿಕಾರಿಗಳು ಬಂಧಿಸಿ, ತೀವ್ರ ತನಿಖೆಗೆ ಒಳಪಡಿಸಿದ್ದಾರೆ.
ಚಿನ್ನ ಸಾಗಣೆ ಹಿಂದೆ ಸ್ಮಗ್ಲಿಂಗ್ ಮಾಫಿಯಾ ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಮಹಿಳೆಯರ ಮೂಲಕ ವ್ಯವಸ್ಥಿತವಾಗಿ ಚಿನ್ನದ ಪುಡಿ ಸಾಗಿಸುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ.
ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿರುವ ಕಸ್ಟಮ್ಸ್ ಆಧಿಕಾರಿಗಳು, ಹೊಸ ರೀತಿಯ ಚಿನ್ನ ಸಾಗಣೆ ಕಂಡು ಕಸ್ಟಮ್ಸ್ ಆಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದಾರೆ ಎನ್ನಲಾಗುತ್ತಿದೆ. ಈ ಇಬ್ಬರು ಚಾಲಾಕಿಗಳಿಂದ ಒಟ್ಟು 58 ಲಕ್ಷ ಮೌಲ್ಯದ ಚಿನ್ನದ ಪುಡಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಅಕ್ರಮವಾಗಿ ಚಿನ್ನಾಭರಣ ಸಾಗಿಸುತ್ತಿದ್ದ ತಮಿಳುನಾಡಿನ ಸೇಲಂ ಮೂಲದ ದಂಪತಿಯನ್ನು ಬಂಧಿಸಲಾಗಿದೆ.
ದಂಪತಿಯನ್ನು ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ದಂಪತಿ 35 ಲಕ್ಷ ಮೌಲ್ಯದ 1 ಕೆಜಿ 175 ಗ್ರಾಂ ಚಿನ್ನವನ್ನು ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ ಏರ್ ಇಂಟಲಿಜೆನ್ಸಿ ಯುನಿಟ್ ಹಾಗೂ ಕಸ್ಟಮ್ಸ್ ಅಧಿಕಾರಿಗಳು ಚಿನ್ನವನ್ನು ವಶಕ್ಕೆ ಪಡೆದು, ದಂಪತಿಯನ್ನು ಬಂಧಿಸಿದ್ದಾರೆ.

loading...