ಚುನಾವಣೆ ಶಾಂತಿಯುತ ಮತದಾನ ಅಭ್ಯರ್ಥಿಗಳು ನಿರಾಳ

0
0
loading...

ಇಳಕಲ್ಲ: ಇಂದು ನಡೆದ ನಗರಸಭೆ ಚುನಾವಣೆಯಲ್ಲಿ 57 ಮತಗಟ್ಟೆಗಳಲ್ಲಿ ಶಾಂತಿಯುತವಾದ ಮತದಾನ ನಡೆಯಿತು. ಬನ್ನಿಕಟ್ಟಿ, ಉರ್ದುಶಾಲೆ, ನಗರಸಭೆ, ಕೇಂದ್ರಶಾಲೆಯ ಮೌಲಾನಾ ಆಜಾದ ಮಾದರಿಶಾಲೆ ಎಸಿಓ ಶಾಲೆಗ|ಳಲ್ಲಿ ಮದ್ಯಾಹ್ನದ ಹೊತ್ತಿಗೆ ಶೇ: 40ರಷ್ಟು ಮತದಾನ ವಾಗಿದ್ದು ಸಾಲುಗಟ್ಟಲೇ ಜನತೆ ಸರದಿಯಲ್ಲಿ ನಿಂತು ಮತ ಚಲಾಯಿಸಿದರು.

ನಗರದ 7ಅತಿಸೂಕ್ಷ್ಮ 15 ಸೂಕ್ಷ್ಮ ಹಾಗೂ 35 ಸಾಧಾರಣ ಮತಗಟ್ಟೆಗಳೆಂದು ವಿಂಗಡಿಸಿ ವ್ಯಾಪಕ ಪೋಲಿಸ್‌ ಬಂದೋಬಸ್ತನ್ನು ಸಿಪಿಐ ಜೆ ಕರುಣೇಶಗೌಡ, ಪಿಎಸ್‌ಐ ನಾಗರಾಜ ಕಿಲ್ಲಾರಿ ಹಾಗೂ ಗ್ರಾಮೀಣ ಠಾಣೆ ಪಿಎಸ್‌ಐ ಎಸ್‌ ಎಮ್‌ ಶಿರಗುಪ್ಪಿ ನೇತೃತ್ವದಲ್ಲಿ ಮಾಡಲಾಗಿತ್ತು.
31 ವಾರ್ಡಗಳಲ್ಲಿ ಬಿಜೆಪಿಯಿಂದ 31 ಕಾಂಗ್ರೆಸ್‌ನಿಂದ 30 ಜೆಡಿಎಸ್‌ನಿಂದ 19 ಎಮ್‌ಐಎಮ್‌ನಿಂದ 2 ಪಕ್ಷೇತರರು 18 ಜನ ಸೇರಿದಂತೆ 100 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇವರೆಲ್ಲರ ಹಣೆಬರಹವನ್ನು ಮತದಾರರು ಮತಪೆಟ್ಟಿಗೆಯಲ್ಲಿ ಭದ್ರವಾಗಿರಿಸಿದ್ದಾರೆ. ಬರುವ ಸೋಮವಾರ ಭವಿಷ್ಯ ನಿರ್ಧಾರವಾಗಲಿದೆ. ವಿವಿಧ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಅಲ್ಲಲ್ಲಿ ಸಣ್ಣ ಪುಟ್ಟ ಚಕಮಕಿಗಳು ಜರಿಗಿದನ್ನು ಬಿಟ್ಟರೆ ಎಲ್ಲಾ ಮತಗಟ್ಟಿಗಳಲ್ಲಿ ಶಾಂತಿಯುತ ಮತದಾನ ನಡೆಯಿತು.

loading...