ಜಮೀನುಗಳಿಗೆ ನೀರು ಪೂರೈಸುವ ಯೋಜನೆಗೆ ಚಾಲನೆ

0
3
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಪಟ್ಟಣದ ಕನಕರಾಯನ ಗುಡ್ಡದ ಬಳಿಯ ಬೃಹತ್ ಚೆಕ್‍ಡ್ಯಾಂನಿಂದ ಮುರ್ಲಾಪೂರ ಹಾಗೂ ಕೊಪ್ಪಳ ರಸ್ತೆಗೆ ಬರುವಂತ ಸರವು, ಕಿರು ಚೆಕ್‍ಡ್ಯಾಂಗಳಿಗೆ ಮತ್ತು 4ಎಸ್ಸಿ ರೈತರ ಜಮೀನುಗಳಿಗೆ ಪೂರೈಸುವ ನೀರಿನ ಯೋಜನೆಗೆ ಶಾಸಕ ರಾಮಣ್ಣ ಲಮಾಣಿ ಶನಿವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ರೈತರ ಬಹುದಿನಗಳ ಬೇಡಿಕೆಯಾಗಿದ್ದ ಈ ಯೋಜನೆಗೆ ಇಂದು ಚಾಲನೆಗೆ ನೀಡಲಾಗಿದ್ದು, ರೈತರು ಇದನ್ನು ಸರಿಯಾಗಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತುಂಗಭದ್ರಾ ನದಿ ನೀರನ್ನು ಸಿಂಗಟಾಲೂರ ಏತ ನೀರಾವರಿ ಮುಖ್ಯಕಾಲುವೆ ಮೂಲಕ ಬೃಹತ್ ಚೆಕ್‍ಡ್ಯಾಂಗಳನ್ನು ತುಂಬಿಸಲಾಗುತ್ತಿದೆ. ಕನಕರಾಯನ ಗುಡ್ಡದ ಬಳಿಯ ಬೃಹತ್ ಚೆಕ್‍ಡ್ಯಾಂನಿಂದ ಸರವು, ಕಿರುಚೆಕ್‍ಡ್ಯಾಂಗಳಿಗೆ ನೀರು ಹರಿಸುವುದರ ಜೊತೆಗೆ ಈ ಭಾಗದಲ್ಲಿ ಬರುವಂತ ನಾಲ್ಕು ಎಸ್ಸಿ ಸಮುದಾಯ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸುವುದು ಈ ಯೋಜನೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ಮಂಜುನಾಥ ಇಟಗಿ, ಶೇಖಪ್ಪ ಬಳ್ಳಾರಿ, ಶಂಕರ ಉಳ್ಳಾಗಡ್ಡಿ, ಮಂಜುನಾಥ ಜೋಳದ, ಶಿವಪ್ಪ ಚಿಕ್ಕಣ್ಣವರ, ಮಲ್ಲಿಕಾರ್ಜುನ ದೊಡ್ಡಮನಿ, ದೇವಪ್ಪ ಬರದೂರ, ರಾಮಣ್ಣ ಕಂಬಳಿ, ಗವಿಶಿದ್ದಪ್ಪ ಬಳ್ಳಾರಿ, ದೇವಪ್ಪ ಮೋರನಾಳ, ಶ್ರೀನಿವಾಸ ಕಟ್ಟಿಮನಿ ಇದ್ದರು.

loading...