ಜಲಪಾತದಲ್ಲಿ ಕಾಣೆಯಾದ ಯುಸೂಫ್‌ಗಾಗಿ ಹುಡುಕಾಟ

0
13
 

loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಬುಧವಾರ ಸಂಜೆ ಕಾಲು ಜಾರಿ ಬಿದ್ದು ಸಾತೊಡ್ಡಿ ಜಲಪಾತದಲ್ಲಿ ಕಾಣೆಯಾದ ಮುಂಡಗೋಡಿನ ಯುವಕ ಯುಸೂಫ್ ನಿಗಾಗಿ ಗುರುವಾರವೂ ಹುಡುಕಾಟ ಮುಂದುವರೆದಿದೆ.
ಸ್ಥಳೀಯರು, ಗ್ರಾಮಸ್ಥರು, ಮುಂಡಗೋಡಿನಿಂದ ಬಂದ ಯುಸೂಫಫ್ ನ ಸಂಬಂಧಿಕರು, ಸ್ನೆÃಹಿತರು, ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಅರಣ್ಯ ಇಲಾಖೆಯ ಸಿಬ್ಬಂದಿ ತೀವೃವಾದ ಹುಡುಕಾಟ ನಡೆಸಿದರೂ ಕಾಣೆಯಾದ ಯುಸೂಫ್ ಮಾತ್ರ ಪತ್ತೆಯಾಗಲಿಲ್ಲ. ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿ ಹೋಗಿರಬಹುದೆಂದು ಶಂಕಿಸಲಾಗಿದ್ದು ನದಿ ಪಾತ್ರದ ದಡದ ಗುಂಟ ಹುಡುಕಾಟ ನಡೆಸಲಾಗುತ್ತಿದೆ ಎಂದು ಸಿಪಿಆಯ್ ಡಾ.ಮಂಜುನಾಥ ನಾಯಕ್ ತಿಳಿಸಿದ್ದಾರೆ.

ಮುಂಡಗೊಡಿನ ಕಾಲೇಜಿನ ವಿದ್ಯಾರ್ಥಿ ಯುಸೂಫ್ ಅಲ್ಲಾವುದ್ದಿÃನ್ (೧೯) ತನ್ನ ೧೪ ಸ್ನೆÃಹಿತರೊಂದಿಗೆ ಸಾತೊಡ್ಡಿ ಜಲಪಾತಕ್ಕೆವೀಕ್ಷಣೆಗೆ ಬಂದವನು ಕಾಲು ಜಾರಿ ಜಲಪಾತದಲ್ಲಿ ಬಿದ್ದು ಕಾಣೆಯಾಗಿದ್ದ.

loading...