ಜಾತ್ರೆಗಳು ಸರ್ವರ ಮನಸ್ಸು ಕೂಡಿಸುವ ಮೇಳಗಳು : ಮಹಾದೇವ

0
6
loading...

ರಬಕವಿ-ಬನಹಟ್ಟಿ: ಗ್ರಾಮೀಣ ಕ್ರಿÃಡೆಗಳನ್ನು ಆಯೋಜಿಸುವ ಮೂಲಕ ಮತ್ತು ಎಲ್ಲರೂ ಒಂದೆಡೆ ಕಲೆತು ಪೂಜೆ ಸಲ್ಲಿಸುವ ಮತ್ತು ಜಾತ್ರೆಯಲ್ಲಿ ಸಂತಸದಿಂದ ಕೂಡುವಲ್ಲಿ ಜಾತ್ರೆಗಳು ಬಹು ಮುಖ್ಯ ಪಾತ್ರ ವಹಿಸುತ್ತಿದ್ದು, ಎಲ್ಲರ ಮನಗಳನ್ನು ಕೂಡಿಸು ತನ್ಮೂಲಕ ನಾವೆಲ್ಲ ಒಂದೇ ಎಂಬ ಭಾವ ಮೂಡಿಸಲು ಜಾತ್ರೆಗಳು ಬಹು ಸಹಕಾರಿಯಾಗಿವೆ ಎಂದು ಯುವ ಧುರೀಣ ಮಹಾದೇವ ದೂಪದಾಳ ನುಡಿದರು.
ಇಲ್ಲಿನ ಗ್ರಾಮದೇವತೆ ದುರ್ಗಾದೇವಿ ಜಾತ್ರೆ ನಿಮಿತ್ಯ ಆಯೋಜಿಸಲಾಗಿದ್ದ ಕುದುರೆ ಗಾಡಿ ಓಡಿಸುವ ಸ್ಫರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು ಆಧುನಿಕ ಯುಗದ ಭರಾಟೆಯಲ್ಲಿ ಎಲ್ಲರೂ ತಂತಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲಿÃನರಾಗುತ್ತಾರೆ. ಜಾತ್ರೆ,ಹಬ್ಬ-ಹರಿದಿನಗಳ ನೆಪದಲ್ಲಿ ಊರಿನ ಎಲ್ಲರೂ ಒಂದೆಡೆ ಕಲೆತು ಸಂತೋಷ ಪಡೆಯುವುದರಿಂದ ನಮ್ಮಲ್ಲಿ ಬಾಂಧವ್ಯ ಹೆಚ್ಚುತ್ತದೆ. ಭಕ್ತಿಯ ಹಿನ್ನೆಲೆಯಲ್ಲಿ ಸಮಾಜಿಕ ಸ್ವಾಸ್ಥö್ಯವೂ ಬಲಗೊಳ್ಳುತ್ತದೆ ಎಂದರು.

ಈ ಸಂದರ್ಭದಲ್ಲಿ ವಲ್ಲಿಸಾಬ ಹುಡೇದಮನಿ, ಧರೆಪ್ಪ ಉಳ್ಳಾಗಡ್ಡಿ, ಪರಪ್ಪ ನಾಯಕ, ಶಂಕರ ಪಾಟೀಲ, ಸದಾಶಿವ ಪೂಜಾರಿ, ಹನುಮಂತ ಪೂಜಾರಿ, ಲಕ್ಕಪ್ಪ ಪಾಟೀಲ, ಸದಾಶಿವ ನಾಯಕ, ರವಿ ಬೀಳಗಿ, ಸಂಜಯ ತೆಗ್ಗಿ, ಬಸವರಾಜ ಬಾಗಿ, ಶ್ರಿÃಶೈಲ ದಲಾಲ್ ಸೇರಿದಂತೆ ಪ್ರಮುಖರಿದ್ದರು.

loading...