ಜಿಲ್ಲಾಧಿಕಾರಿ ಕಚೇರಿ ಮುತ್ತಿಗ: ರೈತ ಕಾರ್ಮಿಕರ ಬಂಧನ

0
6
loading...

ಕನ್ನಡಮ್ಮ ಸುದ್ದಿ-ಧಾರವಾಡ: ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಸೆಂಟರ್ ಆಫ್ ಟ್ರೇಡ್ ಯೂನಿಯನ್ ಜಿಲ್ಲಾ ಸಮಿತಿಗಳು ರೈತ ಕಾರ್ಮಿಕ ಕೃಷಿಕೂಲಿಕಾರರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿದ ನೂರಾರು ರೈತ ಕಾರ್ಮಿಕನ್ನು ಪೊಲೀಸರು ಬಂಧಿಸಿದ ಘಟನೆ ಜರುಗಿತು.
ಸಮಿತಿಯ ಅಧ್ಯಕ್ಷ ಸೊಪ್ಪಿನ ನೇತೃತ್ವವದಲ್ಲಿ ನೂರಾರು ರೈತ ಕಾರ್ಮಿಕರು ರೈತ ಹಿತಕಾಯುವಲ್ಲಿ ಕೇಂದ್ರ ಸರ್ಕಾರ ಯಾವುದೇ ಪ್ರಮುಖ ಯೋಜನೆಳನ್ನು ಅನುಷ್ಠಾನಗೊಳಿಸಿಲ್ಲ ವಿನಾಕಾರಣ ರೈತರ ಭೂಮಿ ಪಡೆದುಕೊಂಡು ದೊಡ್ಡ-ದೊಡ್ಡ ಬಂಡವಾಳದಾರರಿಗೆ ವಿತರಿಸುವ ಕಾರ್ಯಮಾಡಲಾಗುತ್ತಿದೆ ಎಂದು ಪ್ರತಿಭಟನೆಕಾರರು ದೂರಿದಲ್ಲದೇ ರೈತ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಮುತ್ತಿಗೆ ಹಾಕಲೆತ್ನಿಸಿರು. ರೈತರ ಎಲ್ಲಾ ಕೃಷಿ ಸಾಲಗಳನ್ನು ಒಮ್ಮೆ ಮನ್ನಾ ಮಾಡಲು ದೇಶವ್ಯಾಪಿ ರೈತರ ಋಣ ಮುಕ್ತ ಮಾಡಬೇಕು, ಡಾ.ಸ್ವಾಮಿನಾಥನ್ ಆಯೋಗದ ಶಿಪಾರಸ್ಸಿನಂತೆ ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಳೆ ಕಾತ್ರಿಪಡಿಸಬೇಕು ಎನ್ನುವುದು ಸೇರಿದಂತೆ ವಿವಿಧ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿವೆ. ಅರಣ್ಯ ಮತ್ತು ಬಗರಮುಕಂ ಹಾಗೂ ಉಳಿಮೆದಾರರಿಗೆ ಭೂಮಿಯ ಹಕ್ಕುಪತ್ರ ನೀಡಲು ವೈಜ್ಞಾನಿಕ ಮತ್ತು ರೈತ ಸ್ನೇಹಿ ಬೆಳೆ ವಿಮೆ ನಿಗದಿಗೊಳಿಸಬೇಕು, ರೈತ ಕೃಷಿಕೂಲಿಕಾರರಿಗೆ ಹಿತ್ತಲು ಸಹಿತ ವಸತಿ ಮತ್ತಗು ಕನಿಷ್ಟ ರೂ, 5000 ಪಿಂಚಣೆ ಒದಗಿಸಬೇಕೆಂದು ಪ್ರತಿಭಟನೆಕಾರರು ಒತ್ತಾಯಿಸಿದರು.

loading...