ಜಿಲ್ಲೆಯಲ್ಲಿ ಕಾಂಗ್ರೆಸ್ ಅದೋಗತ್ತಿಯತ್ತ:ಶಾಸಕ ,ಸಚಿವರು ನಡುವಳಿಕೆ ಬದಲಾಯಿಸಿಕೊಳ್ಳಬೇಕು: ಶಂಕರ ಮುನ್ನೋಳಿ

0
2
loading...

ಜಿಲ್ಲೆಯಲ್ಲಿ ಕಾಂಗ್ರೆಸ್ ಅದೋಗತ್ತಿಯತ್ತ:ಶಾಸಕ ,ಸಚಿವರು ನಡುವಳಿಕೆ ಬದಲಾಯಿಸಿಕೊಳ್ಳಬೇಕು: ಶಂಕರ ಮುನ್ನೋಳಿ

ಕನ್ನಡಮ್ಮ ಸುದ್ದಿ-ಬೆಳಗಾವಿ :ಜಿಲ್ಲೆಯ ನಾಯಕರ ಕಿತ್ತಾಟದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಧೋಗತ್ತಿಯತ್ತ ಸಾಗಿದ್ದು,ಶಾಸಕರು ಸಚಿವರು ತಮ್ಮ ನಡುವಳಿಕೆಯನ್ನು ಬದಲಾಯಿಸಿಕೊಳ್ಳಬೇಕು ,ಇಲ್ಲದಿದ್ದರೆ ಕಾಂಗ್ರೆಸ್ ನಿರ್ಣಾಮವಾಗುವುದು ಖಚಿತ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನ್ನೊಳಿ ಹೇಳಿದರು .

ನಗರದಲ್ಲಿ ಶುಕ್ರವಾರ ಪತ್ರಿಕಾ ಗೊಷ್ಠಿ ನಡೆಸಿ ಮಾತನಾಡಿದ ಅವರು ಜಿಲ್ಲೆಯ ಕಾಂಗ್ರೆಸ್ ಮುಖಂಡರು ತಮ್ಮ ಒಣ ಪ್ರತಿಷ್ಠೆಗಾಗಿ ಕಾಂಗ್ರೆಸ್ ಪಕ್ಷವನ್ನು ಅಳಿವಿನಂಚಿಗೆ ಕೊಂಡೊಯುತ್ತಿದ್ದಾರೆ .ಕೂಡಲೆ ಕಾಂಗ್ರೆಸ್ ಪಕ್ಷದ ಅದ್ಯಕ್ಷರು ಹಾಗೂ ಹೈ ಕಮಾಂಡ ಈ ನಾಯಕರಿಗೆ ಬುದ್ದಿ ಹೇಳಬೇಕು.ಇಲ್ಲವಾದರೆ ಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಲಿದೆ ಎಂದರು.

ಸಚಿವ ರಮೇಶ ಜಾರಕಿಹೋಳಿ ಜವಾಬ್ದಾರಿ ಸ್ಥಾನದಲ್ಲಿದವರು ಶಾಸಕರ ಬಗ್ಗೆ ಅವಾಚ್ಚ ಪದಗಳನ್ನು ಬಳಕೆ ಮಾಡಬಾರದು ಅದು ಸರಿಯಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬಗ್ಗೆ ರಮೇಶ ಜಾರಕಿಹೊಳಿ ಹೇಳಿದ ಕಾಲು ಕಸದ ಮಾತನ್ನು ಖಂಡಿಸಿದರು .

loading...