ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶೇ.69.07ರಷ್ಟು ಮತದಾನ

0
0
loading...

ಕನ್ನಡಮ್ಮ ಸುದ್ದಿ-ಹಾವೇರಿ: ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ನಡೆದ ಮತದಾನ ಬಹುತೆಕ ಶಾಂತಿಯುತವಾಗಿ ನಡೆದಿದ್ದು ಶೇ.69.07ರಷ್ಟು ಮತದಾನವಾಗಿದೆ.
ಹಾವೇರಿ ನಗರಸಭೆ ಶೇ.64.94, ರಾಣೇಬೆನ್ನೂರು ನಗರಸಭೆ ಶೇ.67.97, ಹಿರೇಕೆರೂರು ಪಟ್ಟಣ ಪಂಚಾಯತಿಗೆ ಶೇ.77.09, ಹಾನಗಲ್‌ ಪುರಸಭೆಗೆ ಶೇ.76.73 ಹಾಗೂ ಸವಣೂರು ಪುರಸಭೆಗೆ ಶೇ.70.42 ರಷ್ಟು ಮತದಾನವಾಗಿದೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಮತದಾನದಲ್ಲಿ ಹಾವೇರಿ ನಗರದಲ್ಲಿ 17,253 ಪುರುಷರು, 16,675 ಮಹಿಳೆಯರು ಸೇರಿ 33,929 ಮತದಾರರು ಮತದಾನ ಮಾಡಿದ್ದಾರೆ. ರಾಣೇಬೆನ್ನೂರು ನಗರದಲ್ಲಿ 30023 ಪುರುಷರು, 28,907 ಮಹಿಳೆಯರು ಸೇರಿ 58,930 ಮತದಾರರು ಮತದಾನ ಮಾಡಿದ್ದಾರೆ. ಹಾನಗಲ್‌ ನಗರದಲ್ಲಿ 8221 ಪುರುಷರು, 7458 ಮಹಿಳೆಯರು ಒಟು 15,679 ಮತದಾರರು ಮತದಾನ ಮಾಡಿದ್ದಾರೆ. ಹಿರೇಕೆರೂರು ಪಟ್ಟಣದಲ್ಲಿ 5,502 ಪುರುಷರು, 5248 ಮಹಿಳೆಯರು ಸೇರಿ 10,750 ಮತದಾರರು ಮತದಾನ ಮಾಡಿದ್ದಾರೆ. ಸವಣೂರು ಪಟ್ಟಣದಲ್ಲಿ 11,776 ಪುರುಷರು, 10,477 ಮಹಿಳೆಯರು ಸೇರಿ 22,253 ಮತದಾರರು ಮತದಾನ ಮಾಡಿದ್ದಾರೆ. 72,775 ಪುರುಷರು 68,765 ಮಹಿಳೆಯರು ಸೇರಿ 1,41,541 ಮತದಾರರು ಮತ ಚಲಾಯಿಸಿದ್ದಾರೆ.

loading...