ಜಿಲ್ಲೆಯ ಸಾಧಕರನ್ನು ಗುರುತಿಸುತ್ತಿಲ್ಲ: ಸಿದ್ದಣ್ಣವರ

0
6
loading...

ಗುಳೇದಗುಡ್ಡ: ಬಾಗಲಕೋಟ ಜಿಲ್ಲೆಯ ಸಾಹಿತಿಗಳು, ಕಲಾವಿದರು ಸಾಹಿತ್ಯ, ಕಲಾಕ್ಷೇತ್ರಕ್ಕೆ ಸಾಕಷ್ಟು ಕಾಣಿಕೆ ನೀಡಿದ್ದಾರೆ.. ಆದರೆ ಜಿಲ್ಲೆಯ ಕಲಾವಿದ, ಸಾಹಿತಿ ಸಾಧಕರನ್ನು ಗುರುತಿಸಲಾಗುತ್ತಿಲ್ಲ. ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಜಿಲ್ಲೆಯ ಸಾಧಕರಿಗೆ ದೊರಕದಿರವುದು ದುರಾದೃಷ್ಟ. ಪ್ರಶಸ್ತಿಗೋಸ್ಕರ ಲಾಭಿ ಮಾಡುವಂತಹ ಕಲಾವಿದರು, ಸಾಹಿತಿಗಳು ಜಿಲ್ಲೆಯಲ್ಲಿಲ್ಲ ಎಂದು ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಹೇಳಿದರು. ಅವರು ಇಲ್ಲಿನ ಶೆಟ್ಟರ ಶಾಲೆಯ ಸಭಾಭವನದಲ್ಲಿ ಶನಿವಾರ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಬಾಗಲಕೋಟೆಯ ಕವಿಕಾವ್ಯ ವಿಚಾರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ನಾಟಕಕಾರ ದಿ.ಎಚ್‌.ಆರ್‌. ಭಸ್ಮೆ ರಂಗ ಪರಿಸರ ಹಾಗೂ ಸಂವಾದ ಕಾರ್ಯಕ್ರಮ ಚಕೋರ 521ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ನಮ್ಮ ಆಂತರಿಕ ವಿಕಾಸ ಆಗಬೇಕಾದರೆ ನಾಟಕಕಾರರಾದ ದಿ. ಕಂದಗಲ್‌ ಹನಮಂತರಾಯರು, ದಿ. ಎಚ್‌.ಆರ್‌ ಭಸ್ಮೆ ಅವರನ್ನು ನಮ್ಮ ಜೀವನದಲ್ಲಿ ನೆನಪಿಕೊಳ್ಳಬೇಕು. ನಾಟಕಕಾರನ್ನು ನೆನೆಪಿಸುವಂತಹ ಕಾರ್ಯವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಂದಗಲ್ಲ ಹನಮಂತರಾಯರು, ಎಚ್‌.ಆರ್‌. ಭಸ್ಮೆ ಅವರ ನೆನಪು ಶಾಶ್ವತವಾಗಿ ಉಳಿಸಲು ತಲೆತಲಾಂತರಿಂದ ರಂಗಭೂಮಿಯಲ್ಲಿ ಸೇವೆಸಲ್ಲಿಸುತ್ತಿರುವ ಹಂಸನೂರು ಗ್ರಾಮವನ್ನು ಕಲಾಗ್ರಾಮವಾಗಿಸಬೇಕು. ಮುಖ್ಯಮಂತ್ರಿಗಳು, ಶಾಸಕರು ಈ ಬಗ್ಗೆ ಗಮನ ನೀಡಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಸರಗಣಾಚಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತ್ಯ ಅಕಾಡೆಮಿಯ ಸದಸ್ಯ ಸಿದ್ಲಿಂಗಪ್ಪ ಬೀಳಗಿ, ಪ್ರತಿನಿಧಿ ಎಚ್‌. ರಮೇಶ, ಪ್ರಕಾಶ ಗಾಯದ, ಡಾ. ಶಾಂತಾ ಕರಡಿಗುಡ್ಡ, ನಿಂಗಪ್ಪ ಈರಣ್ಣವರ, ಮೋಹನ ಕರನಂದಿ, ಹಣಮಪ್ಪ ತೋಟದ, ವಿಜಯ ಸಿಂಗದ, ಕಾಲೇಜಿನ ಪ್ರಾಚಾರ್ಯ ಮನೋಜ ಭಟ್‌, ಆನಂದ ಪೂಜಾರಿ ಮತ್ತಿತರರು ಇದ್ದರು.

loading...