ಜೀವನದಲ್ಲಿ ಏಳ್ಗೆ ಹೊಂದಲು ನೈತಿಕತೆ ಬೇಕು

0
3
loading...

ರಬಕವಿ-ಬನಹಟ್ಟಿ: ಜೀವನದಲ್ಲಿ ಏಳ್ಗೆ ಹೊಂದಲು ನೈತಿಕತೆ ಬೇಕು. ನೈತಿಕತೆಗಿಂತ ಪ್ರಬಲವಾದ ಅಸ್ತç ಇನ್ನೊಂದಿಲ್ಲ ಎಂದು ಬನಹಟ್ಟಿ ಎಸ್.ಆರ್.ಎ. ಕಾಲೇಜಿನ ಪ್ರೊ ಕೆ.ಎಚ್. ಸಿನ್ನೂರ ಹೇಳಿದರು.
ಅವರು ಬನಹಟ್ಟಿ ಲಕ್ಷಿö್ಮÃ ನಗರದ ಜಾಮೀಯಾ ಅಶರಪುಲ್ ಉಲೂಮ ಉರ್ದು ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿ, ಅಂಜುಮನ್‌ಕಮೀಟಿ, ಶಿಕ್ಷಕ ವೃಂದದವರು ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ವಿನಯಶೀಲ ವಿದ್ಯಾರ್ಥಿಗಳಿಗೆ, ಗುರುಹಿರಿಯರನ್ನು ಗೌರವಿಸುವವರಿಗೆ, ಶೃದ್ಧೆ ಹಾಗೂ ಆತ್ಮವಿಶ್ವಾಸದಿಂದ ಓದುವವರಿಗೆ ವಿದ್ಯೆ ಒಲಿಯುತ್ತದೆ ಎಂದರು.

ಅತಿಥಿ ಪ್ರೊ ನಾಗರಾಜ ಮಾತನಾಡಿ, ಸಮಾಜಕ್ಕೆ ಆದರ್ಶ ಪ್ರಜೆಯಾಗಿ ಹೊರಹೊಮ್ಮಲು ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಉತ್ತಮ ಸಂಸ್ಕçತಿ ಅಳವಡಿಸಿಕೊಳ್ಳಬೇಕೆಂದರು.
ಅತಿಥಿ ವಿಶ್ರಾಂತ ನಿರ್ದೇಶಕರಾದ ಎಸ್.ಆರ್. ಮನಹಳ್ಳಿ ಮಾತನಾಡಿ ಸಮುದಾಯ ಅಭಿವೃದ್ಧಿಗೆ ಶಿಕ್ಷಣ ಅವಶ್ಯಕ. ಶಿಕ್ಷಣ ಕ್ಷೆÃತ್ರದಲ್ಲಿ ಮಕ್ಕಳ ಸಾಧನೆಗೆ ಶಿಕ್ಷಕರು ಸೇರಿದಂತೆ ಪ್ರತಿಯೊಬ್ಬರ ಪಾತ್ರ ಮಹತ್ತರವಾದುದುಎಂದರು. ಕಾರ್ಯಕ್ರಮದಲ್ಲಿ ಹಾರೂನ ಸಾಂಗಲೀಕರ,ರಫೀಕ ಬಿಜಾಪುರ, ಬಂದೆನಮಾಜ ಡಾಂಗೆ, ಜಾಕೀರ ನದಾಫ, ಅಬೂಬಕರ ಮಂಟೂರ, ಮೌಲಾನಾ ಮುನೀರಸಾಬ, ಹಾಜಿಅಲ್ಲಾವುದ್ದಿನ ತಾಂಬೋಳಿ, ಅಂiÀÄÄಬ ಅತ್ತಾರ, ಕೆ.ಡಿ. ಗೋಠೆ, ಎಂ.ಎ.ಬಾಗವಾನ, ಆಯ್,ಎ, ಡಾಂಗೆ, ಎಪ್.ಆಯ್.ಮೋಮಿನ, ಆರ್.ಮುಲ್ಲಾ, ಯಾಸೀನ ಅತ್ತಾರ, ಮಲೀಕ ಮುಜಾವರ ಸೇರಿದಂತೆ ಅನೇಕರು ಇದ್ದರು.

loading...