ಜೀವನ ಸುಗಮವಾಗಿಸಲು ಶಿಕ್ಷಣ ಅವಶ್ಯ: ಸಿದ್ದಲಿಂಗಯ್ಯ

0
7
loading...

ಕನ್ನಡಮ್ಮ ಸುದ್ದಿ-ಧಾರವಾಡ: ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಸಮಾಜದ ಪ್ರತಿಷ್ಠಿತ ಹುದ್ದೆಗಳಾದ ವೈದ್ಯ, ಇಂಜನೀಯರ್, ಐ.ಎ.ಎಸ್., ಐ.ಪಿ.ಎಸ್., ದಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ಎನ್.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ 21ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿಯೇ ಪ್ರಪ್ರಥಮ ಪೊಲೀಸ್ ಮಕ್ಕಳ ವಸತಿ ಶಾಲೆಯು ಅತ್ಯಂತ ವಿಶಿಷ್ಠವಾದಂತಹ ಸ್ಥಾನಮಾನವನ್ನು ಹೊಂದಿದೆ. ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ನಡೆಯುವ ಈ ಶಾಲೆಯ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ಡಯಟ್ ಸಂಸ್ಥೆಯ ನಿವೃತ್ತ ಉಪನ್ಯಾಸಕ ಕೆ.ಜಿ. ದೇವರಮನಿ ಮಾತನಾಡಿ, ‘ನೀವೆಲ್ಲ ಈ ಶಾಲೆಯ ಬೋಧಕ ಸಿಬ್ಬಂದಿಯವರ ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ಈ ಶಾಲೆಯಲ್ಲಿ ನಿಮಗೆ ಎಲ್ಲಾ ಸೌಕರ್ಯಗಳು ಲಭ್ಯ ಇವೆ. ಹಿಂದೆ ನಾವು ಇವುಗಳಿಂದ ವಂಚಿತರಾಗಿದ್ದೇವು. ಈಗ ಇಲ್ಲಿನ ವಿದ್ಯಾರ್ಥಿಗಳು ಭಾವಿ ಜೀವನವನ್ನು ಉತ್ತಮಗೊಳಿಸಲು ಈ ಶಾಲೆಯ ಶಿಕ್ಷಣವನ್ನು ಗಂಭಿರವಾಗಿ ಪರಿಗಣಿಸಿ ಮುನ್ನಡೆಯಬೇಕೆಂದರು. ಡಾ. ಎಮ್. ರವಿಕುಮಾರ ಮಾತನಾಡಿ, ಈ ಶಾಲೆಯಲ್ಲಿ ನಾನು ಶಿಸ್ತು, ಸಂಯಮ, ಪಠ್ಯ-ಪಠ್ಯೇತರ ಚಟುವಟಿಕೆಯಲ್ಲಿ ಪ್ರಬುಧ್ಧತೆಯನ್ನು ಪಡೆದುಕೊಂಡೆ. ನನ್ನೆಲ್ಲಾ ಯಶಸ್ಸಿಗೆ ಗುಣಮಟ್ಟದ ಶಿಕ್ಷಣವೇ ಕಾರಣವಾಗಿದ್ದು ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಯಶಸ್ಸನ್ನು ಪಡೆಯಿರಿ ಎಂದರು. ಗ್ರಾಮೀಣ ಪೊಲೀಸ್ ಉಪಅಧೀಕ್ಷಕ ಡಾ. ಬಿ.ಪಿ. ಚಂದ್ರಶೇಖರ ಅಧ್ಯಕ್ಷತೆವಹಿಸಿ ಮಾತನಾಡಿದರು.
ಶಿಕ್ಷಕಿ ಜಯಶ್ರೀ ದನ್ನಪ್ಪನವರ, ಯು.ಡಿ. ಬದಾಮಿ, ಡಾ. ಎಸ್. ಓ. ಬಿರಾದಾರ ಉಪಸ್ಥಿತರಿದ್ದರು. ಪ್ರಾಚಾರ್ಯ ಆರ್.ಎಸ್.ದೇಶಪಾಂಡೆ ಸ್ವಾಗತಿಸಿದರು. ಶಿಲ್ಪಾ ಸುಣಗಾರ ವಂದಿಸಿದರು.

loading...