ಜೆಡಿಎಸ್ ಗೆಲುವಿಗೆ ಕಾರ್ಯಕರ್ತರು ಶ್ರಮಿಸಿ: ಸಂಜಯ

0
5
loading...

ಕನ್ನಡಮ್ಮ ಸುದ್ದಿ-ಹಾವೇರಿ: ನಗರಸಭೆಯ ಚುನಾವಣೆಯನ್ನು ನಾವು ಸ್ವತಂತ್ರವಾಗಿ ಎದುರಿಸುವಂತೆ ಸೂಚನೆ ಮಾಡಲಾಗುತ್ತಿದ್ದು, ನಗರಸಭೆಯ 31 ವಾರ್ಡ್‍ಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸಲಾಗುತ್ತದೆ. ರಾಜ್ಯದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿರುವುದರಿಂದ ಸರ್ಕಾರದ ಸೌಲಭ್ಯ ತರಲು ಸುಲಭವಾಗುತ್ತದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಸಂಜಯ ಡಾಂಗೆ ಹೇಳಿದರು.
ನಗರದ ಸರ್ಕಾರಿ ನೌಕರ ಭವನದಲ್ಲಿ ಜೆಡಿಎಸ್ ಶಹರ ಘಟಕದ ಸಭೆಯಲ್ಲಿ ಅವರು ಮಾತನಾಡಿದರು.
ನಗರಸಭೆಯಲ್ಲಿ ಆಡಳಿತ ಮಾಡಿದ ಬಿಜೆಪಿ ಹಾಗೂ ಕಾಂಗ್ರೆಸ್ ಜನರ ನಿರೀಕ್ಷೆಗೆ ತಕ್ಕ ಕೆಲಸ ಮಾಡಿಲ್ಲ. ನಗರ ಮೂಲ ಸೌಲಭ್ಯದಿಂದ ವಂಚಿತವಾಗಿದೆ. ನಗರದ ಸರ್ವಾಂಗಿಣ ಅಭಿವೃದ್ಧಿಗಾಗಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದೆ. ವಾರ್ಡಗಳಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಪ್ರತಿ ವಾರ್ಡಗಳಲ್ಲಿ 5-6 ಜನರು ಅರ್ಜಿ ಸಲ್ಲಿಸಿದ್ದು ಭಾರೀ ಪೈಪೋಟಿ ಉಂಟಾಗಿದೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಕಾರ್ಯಧ್ಯಕ್ಷ ಉಮೇಶ ತಳವಾರ ಮಾತನಾಡಿ, ಈ ಬಾರಿ ನಗರಸಭೆಯಲ್ಲಿ ಗೆಲ್ಲಲೆಬೇಕಾಗಿದೆ. ಅದಕ್ಕಾಗಿ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಕ್ರೀಯಾಶೀಲವಾಗಿ ಕೆಲಸ ಮಾಡಬೇಕು ಎಂದರು.
ಶಹರ ಘಟಕದ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ನಗರಸಭೆಯ ಚುನಾವಣೆಯಲ್ಲಿ ಆಕಾಂಕ್ಷಿಗಳಾಗಿ ಅರ್ಜಿಗಳನ್ನು ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡುವಂತೆ ಪ್ರಮಾಣಿಕೆಯಿಂದ ನಿರ್ವಹಿಸುತ್ತೇವೆ. ಅ. 12 ಒಳಗಾಗಿ ಜೆಡಿಎಸ್ ಪಕ್ಷದ ಅಧ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಎಲ್ಲ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಹೇಳಿದರು.
ಸುನೀಲ ದಂಡೆಮ್ಮನವರ, ಅಲ್ತಾಪ್ ನದಾಫ್, ರಬ್ಬಾನಿ ಹುಲಗೇರಿ, ಮೆಹಬೂಬ ಜಮಾದಾರ, ಪರಶುರಾಮ ಹಾವೇರಿ, ಸೈಯದ್ ಜಮಾದಾರ, ಖಾಜಾ ಸುಂಕದ, ಜಿಯಾ ಮುಲ್ಲಾ, ಇಮ್ರಾನ್ ಹುಬ್ಬಳ್ಳಿ, ಇರ್ಶಾದ್, ಅನ್ವರ ಕಡೆಮನಿ, ರಾಜು ಬ್ಯಾಹಟ್ಟಿ, ಅಶ್ಲಾಮ್ ಲಿಂಗದಹಳ್ಳಿ, ಮಂಜುರು ಆಲೂರ, ಶೇರ್ ಅಲಿ ಫಾರೂಕ್ ಇದ್ದರು.

loading...