ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ವಿ.ಕೃ. ಗೋಕಾಕರ ಕೊಡುಗೆ ಅಪಾರ: ಪುಟ್ಟಪ್ಪ

0
5
loading...

ಕನ್ನಡಮ್ಮ ಸುದ್ದಿ-ಸವಣೂರ: ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ. ವಿ.ಕೃ.ಗೋಕಾಕರ ಸಾಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾತ್ರರಾಗಿದ್ದು ಅವಿಸ್ಮರಣೀಯವಾಗಿದೆ ಎಂದು ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷ ಪಾಟೀಲ ಪುಟ್ಟಪ್ಪ ಹೇಳಿದರು.
ಪಟ್ಟಣದ ಗೋಕಾಕ ಸಾಂಸ್ಕøತಿಕ ಭವನದಲ್ಲಿ ಡಾ.ವಿ.ಕೃ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾವೇರಿ ವತಿಯಿಂದ ನಡೆದ ಗೋಕಾಕರ 109 ನೇ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನಪೀಠ ಪ್ರಶಸ್ತಿ ಟ್ರಸ್ಟ್‍ನ ಸದಸ್ಯರಾಗಿ ಕಾರ್ಯನಿರ್ವಹಿಸದೆ ಇರದಿದ್ದರೆ ಸುಮಾರು 8 ಜ್ಞಾನಪೀಠ ಪ್ರಶಸ್ತಿಗಳು ಬೇರೆ ರಾಜ್ಯದ ಪಾಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಯಿಂದ ಇಂದಿಗೂ ಕೂಡಾ ಸಾಹಿತ್ಯ, ಕಥೆ ಕಾದಂಬರಿಗಳ ರಸದೌತಣವನ್ನು ಉಣಬಡಿಸುವಂತಾಗಿದೆ ಎಂದರು.
ಗೋಕಾಕರು ಯಾವುದೇ ಜಾತಿ ಬೇದ ಭಾವವನ್ನು ಮಾಡದೆ ಪ್ರತಿಯೋಬ್ಬ ವ್ಯಕ್ತಿಯನ್ನು ಸಾಮಾನ್ಯ ಮನುಷ್ಯನಂತೆ ಕಂಡ ಅಪ್ರತಿಮ ವ್ಯಕ್ತಿ. ಮಹಾನ್ ವ್ಯಕ್ತಿಗಳ ಜೀವನ ಶೈಲಿ ಮತ್ತು ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆಗೆ ಗೋಕಾಕರ ಸೇವೆ ಅಪಾರ. ರಾಜ್ಯದಲ್ಲಿ ಜನಿಸಿದ ನಾವುಗಳು ಪುಣ್ಯವಂತರು. ಕನ್ನಡ ಭಾಷೆಗೆ ಗೋಕಾಕರ ಪಾತ್ರ ಅಪಾರವಾಗಿದೆ ಎಂದರು.
ಡಾ. ನರಹಳ್ಳಿ ಸುಬ್ರಹ್ಮಣ್ಯ ಮಾತನಾಡಿ, ಹಾವೇರಿ ಜಿಲ್ಲೆ ಸಾಹಿತ್ಯ, ಸಂಸ್ಕ್ರತಿ, ಕಲೆಗೆ ಶ್ರೀಮಂತ ತವರೂರು. ಜಗತ್ತಿನಲ್ಲಿ 7 ಸಾವಿರ ಭಾಷೆಗಳಿದ್ದು, ಅದರಲ್ಲಿ 4 ಸಾವಿರ ಭಾಷೆಗಳನ್ನು ತರ್ಜಿಮೆ ಮಾಡಿದ ಸಾಹಿತ್ಯಗಳು ನಮ್ಮ ಕರ್ನಾಟಕದವರೆ ಆಗಿದ್ದರಿಂದ ನಮ್ಮಂತ ಪುಣ್ಯಶಾಲಿಗಳು ಬೇರೆಯಾರಿಲ್ಲ. ದೇಶಾದ್ಯಂತ 30 ಭಾಷೆಗಳನ್ನು ಆಯ್ಕೆಮಾಡಿದೆ. ಅಂತಹ ಭಾಷೆಯಲ್ಲಿ ಕನ್ನಡ ಭಾಷೆ ಕೂಡಾ ಒಂದಾಗಿದೆ ಎಂದರು.
ಸಾಹಿತಿ ಡಾ. ನರಹಳ್ಳಿ ಸುಬ್ರಹ್ಮಣ್ಯ ರಚಿಸಿದ ವಿಶ್ವಾಮಿತ್ರ ಪ್ರತಿಭೆ ಕೃತಿಯನ್ನು ಬಿಡುಗಡೆಗೊಳಿಸಿದರು.
ಅಪರ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ ಅಧ್ಯಕ್ಷತೆ ವಹಿಸಿದ್ದರು.
ಗೋಕಾಕ ಟ್ರಸ್ಟ್‍ನ ಸದಸ್ಯ ಅನಿಲ ಗೋಕಾಕ, ಎನ್.ಪಿ.ಭಟ್, ಮೈಲಾರಪ್ಪ ತಳ್ಳಿಹಳ್ಳಿ, ರವಿ ಜೋಷಿ, ಮೋಹನ ಮೆಣಸಿನಕಾಯಿ, ಡಾ. ಸತೀಶ ಕುಲಕರ್ಣಿ, ಮಂಜುಳಾ ರಾಶಿನಕರ, ಕಸಾಪ ತಾಲ್ಲೂಕಾಧ್ಯಕ್ಷ ಪ್ರಭು ಅರಗೋಳ, ತಹಶೀಲ್ದಾರ ವಿ.ಡಿ.ಸಜ್ಜನ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಸ್.ಸುಧಾಕರ, ಹೆಚ್.ಎ.ಕುಮಾರ, ಚಂದ್ರಗೌಡ ಪಾಟೀಲ ಇದ್ದರು.

loading...