ಜ್ಞಾನವಿಲ್ಲದೆ ಸಮಾಜ ಸುಸ್ಥಿರವಾಗಲಾರದು: ಟಿ. ಜಿ. ಕೃಷ್ಣಭಟ್

0
7
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಭಾರತ ದೇಶವು ನೈತಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡು ಶಿಕ್ಷಕರು ಸಮಾಜಕ್ಕೆ ಜವಾಬ್ದಾರಿಯುತ ಸೇವೆಯನ್ನು ಸಲ್ಲಿಸಬೇಕಾಗಿದೆ ಎಂದು ನಿವೃತ್ತ ಪೋಲಿಸ್ ಕಮೀಷನರ್ ಟಿ.ಜಿ. ಕೃಷ್ಣಭಟ್ಟರು ನುಡಿದರು.
ಮಂಗಳವಾರ ನಗರದ ಎಸ್.ಕೆ.ಇ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಜ್ಙಾನವಿಲ್ಲದೆ ಸಮಾಜ ಸುಸ್ಥಿರವಾಗಲಾರದು, ಆದ್ದರಿಂದ ಶಿಕ್ಷಕ ತನ್ನ ಶೀಲ, ಗುಣ, ನಡತೆ, ಚಾರಿತ್ರö್ಯ, ನೈತಿಕತೆ ಗುಣಗಳೊಂದಿಗೆ ಮಕ್ಕಳಿಗೆ ಮಾದರಿ ಶಿಕ್ಷಕನಾಗಬೇಕಾಗಿದೆ. ಸತ್ಯ, ಜ್ಙಾನ, ಧರ್ಮ, ಶಾಂತಿ, ಕ್ಷಮಾ, ಮೊದಲಾದವುಗಳೇ ಜೀವನ ಮೌಲ್ಯಗಳು.
ಕಾರ್ಯಕ್ರಮದ ಅಧ್ಯಕ್ಷತೆ ಸಂಸ್ಥೆಯ ವೈಸ್ ಚೇರಮನ್‌ರಾದ ಎಸ್. ವಿ. ಶಾನಭಾಗ ಅವರು ವಹಿಸಿದ್ದರು. ಪ್ರಾರಂಭದಲ್ಲಿ ಅನುಶಾ ಆಪ್ಟೆ ಸ್ವಾಗತಗೀತೆ ಹಾಡಿದರು. ತದನಂತರ ಇತ್ತಿÃಚೆಗೆ ತೀರಿಕೊಂಡ ರಾಣಿ ಪಾರ್ವತಿದೇವಿ ಅವರ ಆತ್ಮಕ್ಕೆ ಸಭೆಯು ಶ್ರಧ್ಧಾಂಜಲಿ ಸಲ್ಲಿಸಿತು. ಪ್ರೊÃ. ಎಸ್.ಎಸ್. ಶಿಂಧೆ ಅವರು ಸ್ವಾಗತ ಕೋರಿದರು. ಪ್ರಾಚಾರ್ಯೆ ಡಾ. ಅಚಲಾ ದೇಸಾಯಿ ಅವರು ಅತಿಥಿಗಳನ್ನು ಪರಿಚಯಿಸಿದರು. ಲತಾ ಕಿತ್ತೂರ ಅವರು ಸಂಸ್ಥೆ ನಡೆದು ಬಂದದಾರಿಯನ್ನು ವಿವರಿಸಿದರು. ಆರ್. ವ್ಹಿ. ಭಟ್ ವಂದಿಸಿದರು.
ಸಂಸ್ಥೆಯ ಅಧ್ಯಕ್ಷ ಸೇವಂತಿಲಾಲ್ ಶಹಾ, ಕಾರ್ಯದರ್ಶಿ ಆರ್.ಬಿ. ದೇಶಪಾಂಡೆ, ಎಸ್.ಕೆ.ಇ. ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

loading...