ಟಾಟಾ ಸುಮೋಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ; ಸ್ಥಳದಲ್ಲೇ ಇಬ್ಬರ ಸಾವು

0
19

ಕೋಲಾರ: ಟಾಟಾ ಸುಮೋಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, 4 ಮಂದಿಗೆ ತೀವ್ರ ಗಾಯವಾಗಿರುವ ಘಟನೆ ಜಿಲ್ಲೆಯ ಮುಳಬಾಗಲು ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕಪ್ಪಲಮಡಗು ಬಳಿ ನಡೆದಿದೆ.
ತಡರಾತ್ರಿ ನಡೆದ ಘಟನೆ ಇದಾಗಿದ್ದು, ಬೈರಕೂರು ಗ್ರಾಮದ ನಂಜುಂಡಪ್ಪ (55), ನಂಜಪ್ಪ (50) ಮೃತರು.
ತಡರಾತ್ರಿ ಮುಳಬಾಗಿಲುನಿಂದ ಹೋಗುತ್ತಿದ್ದ ಟಾಟಾ ಸುಮೋಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 4 ಮಂದಿಗೆ ತೀವ್ರ ಗಾಯವಾಗಿದೆ.
ಮುಳಬಾಗಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...