ಟೈಯರ್ ಸ್ಪೋಟ: ಹಲವರಿಗೆ ಗಾಯ

0
4
loading...

ಕನ್ನಡಮ್ಮ ಸುದ್ದಿ-ನರಗುಂದ: ಟೈಯರ್ ಸ್ಪೋಟಗೊಂಡು ನಿಂತಿದ್ದ ಕ್ರೂಷರ್ ವಾಹನಕ್ಕೆ ಲಾರಿಯೊಂದು ಡಿಕ್ಕಿಹೊಡೆದ ಪರಿಣಾಮ ಕ್ರೂಷರ್ ಪಲ್ಟಿಯಾಗಿ ಒಟ್ಟು 15 ಜನ ಗಾಯಗೊಂಡು ಎಂಟು ಜನರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ರವಿವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಬೈರನಹಟ್ಟಿ ಬಳಿಯ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದಲ್ಲಿ ನಾಗಪ್ಪ ಮ್ಯಾಳಗಿ(58), ಸರೋಜಾ ಪವಾಡೆ(45), ಶರಣಮ್ಮ ಅಳ್ಳಾರ(55), ಗುರುಲಿಂಗಮ್ಮ ನಿಂದಳ್ಳಿ(65), ಶರಣಬಸಪ್ಪ ಮ್ಯಾಳಗಿ(38), ಶಿವಾನಂದ ಮ್ಯಾಳಗಿ(28) ಸಂಗಮ್ಮ ಬನ್ನೇರ(50), ಭಾಗಮ್ಮ ಮಂದೇವಾಲ್(50) ಎಂಬುವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ನರಗುಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‍ಗೆ ದಾಖಲಿಸಲಾಗಿದೆ.ಶಾರದಾ ಮ್ಯಾಳಗಿ, ನಿಂಗಮ್ಮ ಮ್ಯಾಳಗಿ, ಶರಣಮ್ಮ ಅಳ್ಳ್ಯಾರ, ರೇಖಾ ಶೇರಿ, ನಿಂಗಮ್ಮ ನಂದ್ಯಾಳ, ಬಸವರಾಜ ನಂದ್ಯಾಳ, ಯಶವಂತರಾಮ ನಂದ್ಯಾಳ ಹಾಗೂ ಕ್ರೂಷರ್ ವಾಹನ ಚಾಲಕ ಬಸವರಾಜ ಕರಿಗಾರಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನರಗುಂದ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಗೊಂಡವರೆಲ್ಲರೂ ಜೇವರ್ಗಿ ತಾಲೂಕಿನ ಯನಗುಂಡಿಹಳ್ಳಿ ಗ್ರಾಮದವರೆಂದು ತಿಳಿದು ಬಂದಿದೆ.
ಘಟನೆ ವಿವರ: ಗುಲ್ಬರ್ಗ ಜಿಲ್ಲೆ ಜೇವರ್ಗಿ ತಾಲೂಕಿನ ಯನಗುಂಡಿಹಳ್ಳಿ ಗ್ರಾಮದಿಂದ ನರಗುಂದ ಮಾರ್ಗವಾಗಿ ಧಾರವಾಡಕ್ಕೆ ಸಂಬಂಧಿಕರ ಮನೆ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕ್ರೂಷರ್ ವಾಹನದ ಹಿಂಬದಿ ಟೈಯರ್ ಸಿಡಿದು ನರಗುಂದ ಸಮೀಪದ ಬೈರನಹಟ್ಟಿ ಬಳಿ ನಿಂತಿದೆ. ವಾಹನ ನಿಲ್ಲಿಸಿದ ಚಾಲಕ ಕೆಳಗಿಳಿದು ನೋಡುವಷ್ಟರಲ್ಲಿ ಹುಬ್ಬಳ್ಳಿಯಿಂದ ಬಾಗಲಕೋಟಿ ಕಡೆಗೆ ತೆರಳುವ ಅಪರಿಚಿತ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿ ರಭಸಕ್ಕೆ ಕ್ರೂಷರ್ ವಾಹನದ ಮುಂಬದಿ ಚಕ್ರ ತುಂಡಾಗಿ 100 ಮೀ. ನಷ್ಟು ದೂರ ಉರುಳಿ ಬಿದ್ದಿದೆ. ಕೂಷರ್ ವಾಹನ ರಸ್ತೆ ಪಕ್ಕದ ಗುಂಡಿಗೆ (ಕಂದಕಕ್ಕೆ) ಬಿದ್ದು ಪಲ್ಟಿಯಾಗಿದೆ. ಈ ಕರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...