ಡಾಲ್ಬಿಗೆ ಖರ್ಚು ಮಾಡುವ ಹಣವನ್ನು ಸಂತ್ರಸ್ತರಿಗೆ ನೀಡಿ:ರಾಜಪ್ಪ ಗಣೇಶ ಮಂಡಳಿಯ ಪಧಾದಿಕಾರಿಗಳ ಪೂರ್ವಬಾವಿ ಸಭೆಯಲ್ಲಿ ಮನವಿ

0
0
loading...

ಡಾಲ್ಬಿಗೆ ಖರ್ಚು ಮಾಡುವ ಹಣವನ್ನು ಸಂತ್ರಸ್ತರಿಗೆ ನೀಡಿ:ರಾಜಪ್ಪ

ಗಣೇಶ ಮಂಡಳಿಯ ಪಧಾದಿಕಾರಿಗಳ ಪೂರ್ವಬಾವಿ ಸಭೆಯಲ್ಲಿ ಮನವಿ

ಕನ್ನಡಮ್ಮ ಸುದ್ದಿ-ಬೆಳಗಾವಿ:ಗಣೇಶ ಉತ್ಸವದ ಸಂದರ್ಭದಲ್ಲಿ ಶಬ್ದ ಮಾಲಿನ್ಯಕ್ಕೆ ಕಾರಣವಾಗುವ ಡಾಲ್ಬಿಗೆ ಖರ್ಚು ಮಾಡುವ ಹಣವನ್ನು ಮಹಾಮಂಡಳಿಯ ಸದಸ್ಯರು ಮಾನವೀಯತೆ ದೃಷ್ಟಿಯಿಂದ ಮಳೆಯ ಅವಾಂತರದಿಂದ ಸಂಕಷ್ಟದಲ್ಲಿರುವ ಕೊಡಗಿನ ಸಂತ್ರಸ್ತರಿಗೆ ನೀಡಬೇಕೆಂದು ಮನವಿ ಮಾಡಿದರು.

ಶುಕ್ರವಾದ ನಗರದ ಪೊಲೀಸ ಸಭಾ ಭವನದಲ್ಲಿ ನಡೆದ ಗಣೇಶ ಹಬ್ಬದ ಪ್ರಯುಕ್ತ ಮಹಾ ಮಂಡಳ ಸದಸ್ಯರ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ ಪೂರ್ವ ಬಾವಿ ಸಭೆಯಲ್ಲಿ ಅವರು ಮಾತನಾಡಿ, ಅವರು ನಗರದಲ್ಲಿ ಈ ಬಾರಿ ೩೭೮ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಯಾಗಲಿವೆ ಎಂಬ ಮಾಹಿತಿ ಬಂದಿದೆ.ಗಣೇಶ ಉತ್ಸ ವ ಸಾಗುವ ರಸ್ತೆಯಲ್ಲಿ ಟ್ರಾಪಿಕ್ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು .ಅತಿ ಸೂಕ್ಷ್ಮ ಪ್ರದೇಶಗಳಿಗೆ ಬೇಟಿ ನೀಡುತ್ತೆನೆ,ಡಾಲ್ಬಿ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳಲಾಗುವುದು ಎಂದರು .

ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಮಾತನಾಡಿ ಗಣೇಶ ಉತ್ಸವದಲ್ಲಿ ಮಂಡಳಿಯ ಹಿರಿಯರು ಯುವಕರಿಗೆ ಸಲಹೆ ಸೂಚನೆ ನೀಡಬೇಕು,ಪಾಲಿಕೆಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಕೊನೆಯದಾಗಿ ವಿಸರ್ಜನೆ ಮಾಡಲಾಗುವುದು ಎಂದರು .ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಳಲಾಗುವುದು ಎಂದರು .

ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಮಾತನಾಡಿ ಸಾರ್ವಜನಿಕರಿಂದ ಬಂದಿರುವ ಸಲಹೆಗಳನ್ನು ಸ್ವಿಕರಿಸಲಾಗಿದೆ.ಗಣಪತಿ ಉತ್ಸವ ಸಾಗುವ ರಸ್ತೆಗಳನ್ನು ಗುಂಡಿ ತಗ್ಗುಗಳನ್ನು ಬರುವ ಏಂಟು ಹತ್ತು ದಿನಗಳಲ್ಲಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು .

ನಗರದಲ್ಲಿ ಬೀದಿ ದ್ವಿÃಪಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ.ಗಣೇಶನ ಮೆರವಣಿಗೆ ಸಾಗುವ ಮದ್ಯದಲ್ಲಿನ ಇರುವ ಅಡ ತಡೆಗಳನ್ನು ನಿವಾರಿಸಲಾಗುವುದು ಎಂದರು .ಗಣೇಶ ಉತ್ಸವದಲ್ಲಿ ಏನೆ ತೊಂದರೆಯಾದರು ಸಂಪರ್ಕಿಸಲು ಸಹಾಯ ವಾಣಿ ಸಂಖ್ಯೆ ನೀಡಲಾಗುವುದು.

ಬ್ಯಾನರ್ ಬಗ್ಗೆ ಹೈಕೋರ್ಟ್ ಆದೇಶವಿರುವುದರಿಂದ ಇನ್ನೂ ªಮೂರು ನಾಲ್ಕು ದಿನಗಳಲ್ಲಿ ನಗರವನ್ನು ಹೊಲ್ಡಿಗ್ಸ್ ಮುಕ್ತ ನಗರವನ್ನಾಗಿಸಲು ಕ್ರಮ ಕೈಗೊಳಲಾಗುವುದು,ಉತ್ಸವದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೀರು ಸರಬರಾಜು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು .

ಹೆಸ್ಕಾ ಇಲಾಖೆಯ ಅಧಿಕಾರಿ ಅಪ್ಪಣವರ ಮಾತನಾಡಿ ಗಣೇಶ ಉತ್ಸವಕ್ಕೆ ಯಾವುದೆ ತೊಂದರೆ ವಿದ್ಯುತ್ ಸರಬರಾಜಿನಲ್ಲಿ ಆಗದಂತೆ ತಯಾರಿ ಮಾಡಿಕೊಂಡಿದ್ದೆವೆ ಎಂದು ತಿಳಿಸಿದರು .

ಮಹಾಮಂಡಳದ ಅದ್ಯಕ್ಷ ವಿಕಾಸ ಕಲಘಟಗಿ ಮಾತನಾಡಿ ಮಹಾ ಮಂಡಳದ ಕುಂದು ಕೊರೆತಗಳ ಬಗ್ಗೆ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ನಮ್ಮ ಬೇಡಿಕೆ ಸಲ್ಲಿಸಿದ್ದೆವೆ.ನಗರದಲ್ಲಿನ ಗಣೇಶ ಉತ್ಸವದ ಆಚರಣೆಯಲ್ಲಿ ಪಾಲಿಕೆ ಕಾರ್ಯ ಬಹಳಷ್ಟುಯಿದೆ.ಗಣೇಶ ಉತ್ಸವ ವಿಜೃಂಭನೆ ಆಚರಣೆಗೆ ಹೆಸ್ಕಾಂ ಸೇರಿದಂತೆ ಎಲ್ಲರ ಸಹಕಾರ ಅಗತ್ಯವಿದೆ.ಪಾಲಿಕೆ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಗರ ಪೊಲೀಸರು ಅಗತ್ಯ ಕ್ರಮ ಕೈಗೊಳಬೇಕು ಎಂದರು.

ವಿವಿದ ಮಂಡಳಿಯ ಸದಸ್ಯರು ಮಾತನಾಡಿ ಗಣೇಶ ಉತ್ಸವ ಆಚರಣೆಯಲ್ಲಿ ಸರಿಯಾಗಿ ಸಲಹೆ ಸೂಚನೆ ಪಾಲಿಸಿದವರಿಗೆ ಸೂಕ್ತ ಬಹುಮಾನ ನೀಡಿದರೆ ಅಚ್ಚು ಕಟ್ಟಾಗಿ ಗಣೇಶ ಉತ್ಸವ ಆಚರಿಸಲು ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದು ಸಲಹೆ ನೀಡಿದರು.ಪಾಲಿಕೆಯಿಂದ ಇರುವ ಸಹಾಯವಾಣಿ ಗಣೇಶ ಉತ್ಸವ ಮುಗಿಯುವರೆಗೂ ಇರಬೇಕು ಎಂದು ಶಹಪುರ ಮಹಾಮಂಡಳಿ ಸದಸ್ಯರಿಂದ ವಿನಂತಿಸಿದರು .

ಡಾಲ್ಬಿ ಬಗ್ಗೆ ಸ್ಪಷ್ಟವಾಗಿ ಸೂಚನೆ ನೀಡಬೇಕು ,ಬೇರೆದವರು ಹಚ್ಚಿದರೆ ನಾವು ಹಚ್ಚಬೇಕಾಗುತ್ತದೆ .ಮಳೆಯ ಅಬ್ಬರದಿಂದ ಕೊಡಗಿನ ಜನತೆ ಸಂಕಷ್ಟದಲ್ಲಿದ್ದಾರೆ ಈ ಬಾರಿ ಪಟಾಕಿ ಅತಿಯಾಗಿ ಸಿಡಿಸುವ ಬದಲಾಗಿ ಅದೆ ಹಣವನ್ನು ಕೊಡಗಿನ ಸಂತ್ರಸ್ತರಿಗೆ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಸಭೆಯಲ್ಲಿ ಉಪ ಆಯುಕ್ತರಾದ ಸಿಮಾ ಲಾಟ್ಕರ್ ,ಪಾಲಿಕೆ ಆಯುಕ್ತರಾದ ಶಶಿಧರ ಕುರೇರ,ಉಪ ಆಯುಕ್ತ ಮಾಹನಿಂಗ ನಂದಗಾವಿ,ಗಣೇಶ ಮಹಾಮಂಡಳಿ ಅದ್ಯಕ್ಷರಾದ ವಿಕಾಸ ಕಲಘಟಗಿ,ರಾಮಕಾಂತ ಕುಂಡೊಸ್ಕರ ಸೇರಿದಂತೆ ಹಾಗೂ ಹೆಸ್ಕಾಂ ಇಲಾಖೆ,ನೀರು ಸರಬರಾಜು ಇಲಾಖೆ,ಸೇರಿದಂತೆ ವಿವಿದ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

loading...