ಡಾ.ಅಂಬೇಡ್ಕರ ಅವರ ಆದರ್ಶಗಳಂತೆ ನಡೆಯಿರಿ: ಮಾವರಕರ

0
3
loading...

ಡಾ.ಅಂಬೇಡ್ಕರ ಅವರ ಆದರ್ಶಗಳಂತೆ ನಡೆಯಿರಿ: ಮಾವರಕರ
ಕನ್ನಡಮ್ಮ ಸುದ್ದಿ-ಬೆಳಗಾವಿ: ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ತತ್ವ ಆದರ್ಶಗಳಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಎಲ್ಲರು ಒಗ್ಗಟಿನಿಂದ ಶ್ರಮಿಸಬೇಕೆಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿಯ ಬೆಳಗಾವಿ ಜಿಲ್ಲಾ ಸಮಿತಿ ಜಿಲ್ಲಾ ಅಧ್ಯಕ್ಷ ಮಾರುತಿ ನಾ.ಮಾವರಕರ ಹೇಳಿದರು.
ಖಾನಾಪೂರ ತಾಲೂಕಿನ ಕಾಮಶಿನಕೋಪ್ಪ ಗ್ರಾಮದಲ್ಲಿ ರವಿವಾರರಂದು ನಡೆದ ಕಾನೂನು ಅರಿವು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿ ಕರ್ನಾಟಕ ಇದರ ಖಾನಾಪೂರ ತಾಲೂಕಾ ಸಮಿತಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಸಂಘಟನೆಯು ಸಮಾಜದ ಅಭಿವೃದ್ದಿ, ಸುಧಾರಣೆ, ಇನ್ನಿತರ ಕಾರ್ಯಗಳಿಗೆ ಪ್ರವೃತಿ ಹೊಂದಲು ಎಲ್ಲ ಸಂಘಟಿಕರು ಒಕ್ಕಟಿನಿಂದ ಕಾರ್ಯ ನಿರ್ವಹಿಸುವಂತೆ ಸಂಘಟಿಕರನ್ನು ಉದ್ದೆÃಶಿಸಿ ಮಾತನಾಡಿದರು.
ಸಂವಿಧಾನವು ರೂಪಿಸಿರುವ ಹಕ್ಕುಗಳ ಅನ್ವಯದಂತೆ ಎಲ್ಲರೂ ಅದರ ಪರಿಕಲ್ಪನೆ, ನಿರ್ದೇಶನಗಳನ್ನು ಪರಿಪಾಲಿಸಬೇಕು. ರಾಜ್ಯ ಪತ್ರದಲ್ಲಿ ಹೋರಡಿಸಿರುವ ಎಲ್ಲ ಪ.ಜಾತಿ/ಪಂಗಡಗಳ ನಿರುದ್ಯೊÃಗಿಗಳು, ಫಲಾನುಭವಿಗಳು ನ್ಯಾಯಯುತವಾಗಿ ಸರ್ಕಾರವು ನೀಡುವ ಯೋಜನೆಗಳು ಪಡೆದುಕೊಳ್ಳಬೇಕೆಂದು ಜಿಲ್ಲಾಧ್ಯಕ್ಷ ಮಾರುತಿ ಮಾವರಕರ ಹೇಳಿದರು.
ರಾಜ್ಯ ವಕೀಲ ಸಮಿತಿ ಸಂಘಟನಾ ಸಂಚಾಲಕ ಆನಂದ ಮಾಶ್ಯಾಳ ಮಾತನಾಡಿ ಕಾನೂನು ಎಲ್ಲರಿಗೂ ಸರಿಸಮಾನವಾದದ್ದು ಕಾನೂನು ಪ್ರತಿಯೊಬ್ಬರು ತಿಳಿದುಕೋಳ್ಳಬೇಕು.
ದೌರ್ಜನ್ಯವನ್ನು ಎಸಗಿಸಿದ ವ್ಯಕ್ತಿಗಳನ್ನು ಬಂಧಿಸಲು ಮೇಲ್ದರ್ಜೆಯ ವ್ಯಕ್ತಿಗಳು ಮಾತು ಕೇಳಿ ಅಧಿಕಾರಿಗಳು ಹಿಂದೆಟ್ಟು ಹಾಕುತಾರೆ. ನಾವು ನ್ಯಾಯ ಯುತವಾಗಿ ಇದ್ದು ನ್ಯಾಯ ಪಡೆದುಕೋಳ್ಳಬೇಕು. ತಪ್ಪಿಗಸ್ಥ ಅಧಿಕಾರಿಗಳ ವಿರುದ್ದ ಸಂಘಟನೆಯಿಂದ ಹೋರಾಟ ಮಾಡಿ ನ್ಯಾಯ ಪಡೆದು ಕೊಳ್ಳಬೇಕೆಂದು ಹೇಳಿದರು. ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳಿಗೆ ನ್ಯಾಯ ದೊರಕಿಸಲು ಪ್ರಾಮಾಣೀಕ ಕೆಲಸ ನಿರ್ವಹಿಸುವಲ್ಲಿ ಅಧಿಕಾರಿಗಳ ಆಧ್ಯ ಕರ್ತವ್ಯವಾಗಿರುತ್ತದೆ. ಆದರಿಂದ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಹಾಗೂ ಮೇಲಾಧಿಕಾರಿಗಳು ಕ್ರಮ ಕೈಗೋಳ್ಳುವ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಕಾಂಬಳೆ ಮಾತನಾಡಿ ಈ ಸಂಘಟನೆಯಲ್ಲಿ ಆದರ್ಶ, ತತ್ವ, ಗುರಿ, ಸಿದ್ದಾಂತವನ್ನು ಎಲ್ಲರೂ ಪ್ರೆÃರಿಪಿಸಿಕೊಂಡು ಸಂಘಟನೆಯಲ್ಲಿ ಕೈ ಜೋಡಿಸಬೇಕೆಂದು ಹೇಳಿದರು.
ರಾಜ್ಯ ಸಂಘಟನಾ ಖಜಾಂಚಿ ಶ್ರವಣ ಕಾಂಬಳೆ ಮಾತನಾಡಿ ಸಂಘಟನೆಯ ತತ್ವ ಸಿದ್ದಾಂತ ಪ್ರತಿಯೊಬ್ಬರು ಪಾಲನೆ ಮಾಡಬೇಕು, ಜಿಲ್ಲೆಯಲ್ಲಿ ಪ.ಜಾತಿ, ಪ.ಪಂಗಡಗಳ ೯ ಲಕ್ಷ ಜನಸಂಖ್ಯೆವಿದೆ. ಪ.ಜಾತಿ, ಪ.ಪಂಗಡಗಳ ಜನಾಂಗದ ದೌರ್ಜನ್ಯ, ಪ್ರಕರಣಗಳುವಿದ್ದರು ಯಾವ ಪ್ರಕರಣಗಳ ಮೇಲೆ ಕ್ರಮ ಕೈಗೊಂಡಿರುದಿಲ್ಲ ಇದು ವಿಷಾದಕರ ಸಂಗತಿ ಎಂದು ಹೇಳಿದರು. ಖಾನಾಪೂರ ತಾಲೂಕಾಧ್ಯಕ್ಷ ಸುನೀಲ ಮಾದರ ಸಂಘಟನೆಯನ್ನು ಉದ್ದೆÃಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ದಿವ್ಯ ಸಾನಿಧ್ಯವನ್ನು ಮಡಿವಾಳ ಮಠದ ಈರಯ್ಯ ಹಿರೇಮಠ ಸ್ವಾಮಿಜಿ ಆರ್ಶಿವಚನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಉಪಾಧ್ಯಕ್ಷ ನಿಂಗಪ್ಪ ಕಣಬರಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಬಿ.ನಡುಮನಿ, ಖಾನಾಪೂರ ತಾಲೂಕಾ ಸಮಘಟನಾ ಅಧ್ಯಕ್ಷ ಸುಭಾಸ ಮಾದರ, ಸುನೀಲ ಮುತಗಾರ, ಗ್ರಾಪಂ. ಸದಸ್ಯ ಸುರೆಶ ಗಡಿವಾಡ, ವಿಠ್ಠಲ ಕಲಕಗ್ರಿ, ಪಟ್ಟಣ ಪಂ.ಸದಸ್ಯ ಬಾಳೇಶ, ಚಲವಾದಿ, ಗಿರೀಶ ಚಲವಾದಿ ನಾಗಪ್ಪ ಚಲವಾದಿ, ಮಾದೇವಿ ಚಲವಾದಿ ಗಿರಿಧ ಕೋಲಕಾರ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ, ಸಮಿತಿ ಸದಸ್ಯರು, ಪದಾಧಿಕಾರಿಗಳು, ಸಂಘಟಿಕರು ಇದ್ದರು. ಸಂಘಟಿಕ ನಾನಪ್ಪ. ಮಾವರಕರ ನಿರೂಪಿಸಿ ವಂದಿಸಿದರು.

loading...