ಡಾ.ಕೋರೆ ದೂರದೃಷ್ಟಿತ್ವ ಯುವಪೀಳಿಗೆಗೆ ಸಹಕಾರಿ: ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅಭಿಮತ

0
16
loading...

ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅಭಿಮತ
ಡಾ.ಕೋರೆ ದೂರದೃಷ್ಟಿತ್ವ ಯುವಪೀಳಿಗೆಗೆ ಸಹಕಾರಿ
ಕನ್ನಡಮ್ಮ ಸುದ್ದಿ
ಚಿಕ್ಕೋಡಿ 01: ಕೆಎಲ್‍ಇ ಅಂತಹ ಪ್ರತಿಷ್ಠಿತ ಸಂಸ್ಥೆಯ ಅಧಿಕಾರವಹಿಸಿಕೊಂಡಾಗ ಎದುರಾಗಿದ್ದಾಗ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿ ಡಾ.ಪ್ರಭಾಕರ ಕೋರೆ ತಮ್ಮ ಕತೃತ್ವಶಕ್ತಿ ಪ್ರದರ್ಶಿಸಿದ್ದಾರೆ ಎಂದು ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಅಂಕಲಿಯಲ್ಲಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆಯವರ 71ನೇ ಹುಟ್ಟು ಹಬ್ಬದ ನಿಮಿತ್ಯ ಹಮ್ಮಿಕೊಂಡ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಕೃಷಿ ಪ್ರಶಸ್ತಿ ವಿತರಣೆ ಹಾಗೂ ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತ,
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅವರ ದೂರದೃಷ್ಟಿತ್ವದ ಚಿಂತನೆಗಳು ಮುಂದಿನ ಪೀಳಿಗೆಗೆ ಸಹಕಾರಿಯಾಗಲಿದ್ದು, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕೋರೆಯಂತಹ ಪ್ರತಿಭಾನ್ವಿತರು ಅವಶ್ಯಕತೆಯಿದೆ ಎಂದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ರಾಜ್ಯದ ಶೈಕ್ಷಣಿಕ ಅಭಿವೃದ್ಧಿಯ ಪರ್ವ ಹುಟ್ಟುಹಾಕಿರುವ ಡಾ. ಪ್ರಭಾಕರ ಕೋರೆ ಅವರಿಗೆ ರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸುವ ಪ್ರಧಾನಿ ನರೇಂದ್ರ ಮೋದಿ ಅವಕಾಶ ಒದಗಿಸಬೇಕಾಗಿದ್ದು, ಆರ್ಥಿಕ, ಸಾಮಾಜಿಕ, ಸಹಕಾರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕೋರೆಯವರ ಕೊಡುಗೆ ಅಪಾರವಾಗಿದ್ದು ಸಮಾಜಮುಖಿ ಮತ್ತು ರಾಜಕೀಯವಾಗಿ ಹಲವಾರು ಜನ ಯುವ ರಾಜಕಾರಣಿಗಳನ್ನು ಬೆಳೆಸಿರುವ ಡಾ. ಪ್ರಭಾಕರ ಕೋರೆ ಅವರು ಅಜಾತಶತ್ರುವಾಗಿದ್ದಾರೆ ಎಂದರು.
ಶಾಸಕ ಪಿ.ರಾಜೀವ ಮಾತನಾಡಿ, ಕರ್ನಾಟಕ ರಾಜ್ಯ ಕಂಡ ಅಪರೂಪದ ಮೇರುಪರ್ವತ ಡಾ. ಪ್ರಭಾಕರ ಕೋರೆಯವರು ಎಲ್ಲ ಕ್ಷೇತ್ರದಲ್ಲಿಯೂ ದಣೀವಿಲ್ಲದೆ ದುಡಿಯುವಂತಹ ಮುತ್ಸದ್ದಿ ಹಿರಿಯ ರಾಜಕಾರಣಿ.ಹೀಗಾಗಿಯೇ ಅವರು ಎಲ್ಲ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದು, ನಮ್ಮಂತಹ ಯುವ ಜನಾಂಗಕ್ಕೆ ಸ್ಪೂರ್ತಿಯಾಗಿದ್ದಾರೆ ಎಂದರು.
ಶಾಸಕ ದುರ್ಯೋಧನ ಐಹೋಳೆ ಮಾತನಾಡಿ, ಈ ಭಾಗದ ರೈತರ ಕಬ್ಬಿಗೆ ನ್ಯಾಯಯುತ ಬೆಲೆ ನೀಡುವ ಮೂಲಕ ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆಯವರು ರೈತರ ಹಿತ ಕಾಪಾಡಿದ್ದು, ರೈತ ಜನಾಂಗದ ಹೃದಯದಲ್ಲಿ ಮನೆ ಮಾಡಿದ್ದಾರೆ ಎಂದರು.
ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಅನ್ನಾಸಾಹೇಬ ಜೊಲ್ಲೆ ಮಾತನಾಡಿ, ಉತ್ತರ ಕರ್ನಾಟಕದ ಸಹಕಾರ, ಶಿಕ್ಷಣ, ಆರೋಗ್ಯ, ರಾಜಕೀಯ ಮತ್ತು ಧಾರ್ಮಿಕ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಮಾಜಿ ಶಾಸಕ ರಾಜು ಕಾಗೆ ಮಾತನಾಡಿ, ತಂದೆ, ತಾಯಿಯವರು ನೀಡುವ ಉತ್ತಮ ಸಂಸ್ಕಾರದಿಂದ ಮನುಷ್ಯ ಹೇಗೆ ಅಭಿವೃದ್ಧಿ ಹೊಂದಬಹುದು ಎಂಬುದನ್ನು ಡಾ. ಪ್ರಭಾಕರ ಕೋರೆಯವರನ್ನು ನೋಡಿ ಕಲಿಯಬೇಕು ಎಂದರು.
ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಮಿತ ಕೋರೆ ಮಾತನಾಡಿ, ಕೆಎಲ್‍ಇ ಸಂಸ್ಥೆ, ದೂಧ ಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಶಿವಶಕ್ತಿ ಕಾರ್ಖಾನೆಗಳ ಮೂಲಕ ಈ ಭಾಗದ ಜನತೆಗೆ ಹೆಚ್ಚಿನ ಸೌಕರ್ಯ ಒದಗಿಸಿಕೊಡಲು ಕೋರೆ ಕುಟುಂಬ ಬದ್ದವಾಗಿದೆ ಎಂದರು.
ಚಿಕ್ಕೋಡಿ ಸಂಪಾದನಾ ಮಹಾಸ್ವಾಮಿಗಳು ಮಾತನಾಡಿ, ಪರಿಶ್ರಮ, ಶೃದ್ಧೆ ಮತ್ತು ಕಾಯಕ ನಿಷ್ಠೆಯಿಂದ ಸಂಸ್ಕಾರತಯುತರಾಗಿ ಬೆಳೆದ ಕೋರೆ ಇಂದು ಉತ್ತರ ಕರ್ನಾಟಕದ ಹೆಮ್ಮೆಯ ನಾಯಕರಾಗಿದ್ದಾರೆ ಎಂದರು. ಪ್ರಾಧ್ಯಾಪಕಿ ಗುರುದೇವಿ ಹುಲ್ಲೇಪನವರಮಠ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಡಾ. ಚಂದ್ರಕಾಂತ ಆರ್.ಬಿ.ಬರೆದ ಶರಣರನ್ನು ಕುರಿತ ಪ್ರಾತಿನಿಧಿಕ ನಾಟಕಗಳ ಅಧ್ಯಯನ ಎಂಬ ಪುಸ್ತಕ ಬಿಡುಗಡೆ ಮಾಡಿದರು.
ಕಾರ್ಖಾನೆ ಉಪಾಧ್ಯಕ್ಷ ಸುಭಾಷ ಕಾತ್ರಾಳೆ, ನಿರ್ದೇಶಕರಾದ ಅಜೀತ ದೇಸಾಯಿ, ಭರತೇಶ ಬನವಣೆ, ಮಲ್ಲಿಕಾರ್ಜುನ ಕೋರೆ, ಪರಸಗೌಡ ಪಾಟೀಲ, ತಾತ್ಯಾಸಾಬ ಕಾಟೆ, ಸಂದೀಪ ಪಾಟೀಲ, ಮಹಾವೀರ ಮಿರಜೆ, ಬಾಳಗೌಡ ರೇಂದಾಳೆ, ರಾಮಚಂದ್ರ ನಿಶಾನದಾರ, ಮಲ್ಲಪ್ಪಾ ಮೈಶಾಳೆ, ಚೇತನ ಪಾಟೀಲ, ನಂದಕುಮಾರ ನಾಶಿಪುಡಿ, ರವೀಂದ್ರ ಪಟ್ಟಣಶೆಟ್ಟಿ, ಮಾಜಿ ಶಾಸಕ ದತ್ತು ಹಕ್ಯಾಗೋಳ, ಮಾರುತಿ ಅಷ್ಟಗಿ, ಕೆಎಲ್‍ಇ ವಿಶ್ವವಿದ್ಯಾಲ ಉಪಕುಲಪತಿ ಡಾ. ವಿ.ಎ.ಸಾವೋಜಿ, ಡಾ. ವಿ.ಡಿ.ಪಾಟೀಲ, ಡಾ. ಎನ್.ಎಸ್.ಮಹಾಂತಶೆಟ್ಟಿ, ಡಾ. ಆರ್.ಸಿ.ಮುದೋಳ, ಡಿ.ಎಸ್.ಕರೋಶಿ, ಆನಂದ ಕೊಟಬಾಗಿ ಮುಂತಾದವರು ಉಪಸ್ಥಿತರಿದ್ದರು. ಭರತೇಶ ಬನವಣೆ ಸ್ವಾಗತಿಸಿದರು.
..

loading...