ಡಾ. ಪುಟ್ಟರಾಜ ಗವಾಯಿಗಳ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ: ಶ್ರೀಗಳು

0
3
loading...

ಕನ್ನಡಮ್ಮ ಸುದ್ದಿ- ನರೇಗಲ್ಲ: ಲೋಕವನ್ನೇ ನೋಡದೇ ಲೋಕದ ಜನ ಕಷ್ಟಗಳನ್ನು ಅರಿತು ಅಂಧರ ಜೀವನಕ್ಕೆ ಬೆಳಕಾದ ಡಾ. ಪುಟ್ಟರಾಜ ಗವಾಯಿಗಳ ಆದರ್ಶ ತತ್ವಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಗದುಗಿನ ವೀರೇಶ್ವ ಪುಣ್ಯಾಶ್ರಮದ ಕಲ್ಲಯ್ಯಜ್ಜ ಆಶೀರ್ವಚನ ನೀಡಿದರು.
ಸಮೀಪದ ಯರೇಬೇಲೇರಿ ಗ್ರಾಮದಲ್ಲಿ ಜರುಗಿದ ಗಣೇಶ ಮೂರ್ತಿ ಹಾಗೂ ಪಂಡಿತ ಪಟ್ಟರಾಜ ಗವಾಯಿಗಳ ಮೂರ್ತಿ ಪ್ರತಿಷ್ಟಾಪನೆ ಮಾಡಿ ಆಶೀರ್ವಚನ ನೀಡಿದರು.ಆಧುನಿಕ ಜಗತ್ತಿನ ಒತ್ತಡದ ಜೀವನದಲ್ಲಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮನೋಭಾವನೆ, ಚಟುವಟಿಕೆಗಳಿಂದ ಯಾರೂ ವಿಮುಖರಾಗಬಾರದು. ಸುಖಮಯ ಜೀವನಕ್ಕೆ ನಮ್ಮ ಸಂಪ್ರದಾಯ, ಆಚಾರ, ವಿಚಾರಗಳನ್ನು ಧರ್ಮ, ಗುರು ಪರಂಪರೆಯಿಂದ ಅರಿತು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧರ್ಮದ ಆಚರಣೆ ಮನುಷ್ಯನಿಗೆ ತುಂಬಾ ಮಹತ್ವವಾದದ್ದು, ನಮ್ಮ ಜೀವನಕ್ಕೆ ದೇವರ ಕಲ್ಪನೆ ಬೇಕು. ಉತ್ತಮ ನಾಗರಿಕನಾಗಲು ಮಾನವರೆಲ್ಲರೂ ಒಂದೇ ಎಂಬ ಕಲ್ಪನೆಯನ್ನು ಧರ್ಮ ಸಾರುತ್ತದೆ ಎಂದರು.
ಬ್ರಹನ್ಮಠ ಆಡ್ಡೂರ ರಾಜೂರದ ಪಂಚಾಕ್ಷರ ಸ್ವಾಮೀಜಿ ಮಾತನಾಡಿ, ಮನುಷ್ಯನ ಸಾಧನೆಗೆ ಆಧ್ಯಾತ್ಮಿಕ ಅಗತ್ಯ. ಆಧ್ಯಾತ್ಮಿಕ ಚಿಂತನೆಯೊಂದಿಗೆ ಸಾಮಾಜಿಕ ಕಾಳಜಿ ಬೆಳೆಸಿಕೊಂಡಾಗ ಬದುಕು ವಿಸ್ತಾರ ಗೊಳ್ಳತ್ತದೆ. 84 ಲಕ್ಷ ಜೀವರಾಶಿಗಳಲ್ಲಿ ಮನುಷ್ಯನಿಗೆ ವಿಶಿಷ್ಟ ಶಕ್ತಿಗಳನ್ನು ಕರುಣಿಸಿರುವ ದೇವರು ನಮ್ಮ ಕಾರ್ಯವೈಖರಿ ಗಮನಿಸುತ್ತಾ ಇರುತ್ತಾನೆ. ಸಮಾಜ ಸೇವಗೆ ಭಕ್ತಿಯ ಮುದ್ರೆ ಸಿಕ್ಕಾಗ ಬದುಕು ಮಂಗಲಮಯವಾಗುತ್ತದೆ ಎಂದರು. ಗುಳೇದಗುಡ್ಡದ ಒಪ್ಪತೇಶ್ವರ ಸ್ವಾಮೀಜಿ, ನರುಗುಂದ ಪಂಚಗ್ರಹ ಹಿರೇಮಠದ ಅಭಿನವನ ಸಿದ್ಧಲಿಂಗ ಸ್ವಾಮೀಜಿ, ಮಣಕವಾಡ ಅನ್ನದಾನೇಶ್ವರ ಮಠದ ಶಿದ್ದರಾಮದೇವರು ಸಾನಿಧ್ಯ ವಹಿಸಿದ್ದರು. ಡಾ. ಪಂಡಿತ ಪುಟ್ಟರಾಜ ರೈತ ಪುರುಷರ ವಿವಿದೊದ್ಧೇಶಗಳ ಸಂಘದ ಸದಸ್ಯರು ಇದ್ದರು.

loading...