ತಂದೆ ನಿಧನಕ್ಕೆ ಭಾವುಕರಾದ ಸ್ಟಾಲಿನ್

0
3
Chennai: DMK chief M Karunanidhi with his son and party treasurer MK Stalin at the party's executive meeting at Anna Arivalayam in Chennai on Tuesday. PTI Photo (PTI5_24_2016_000263B)
loading...

ಚೆನೈ: ‘ನಾನು ನಿಮ್ಮನ್ನು ಸದಾ ತಲೈವರೆ (ನಾಯಕ) ಎಂದು ಕರೆಯುತ್ತಿದ್ದೆ. ಈಗಲಾದರೂ ನಿಮ್ಮನ್ನು ಅಪ್ಪ ಎಂದು ಕರೆಯಲೇ….’ ಹೀಗೆ ಭಾವುಕರಾಗಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ ದಿ. ಕರುಣಾನಿಧಿ ಪುತ್ರ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್​.
ಮಂಗಳವಾರ ಇಹಲೋಕ ತ್ಯಜಿಸಿದ ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಸಾಮಾನ್ಯರಿಂದ ಹಿಡಿದು ಗಣ್ಯಾತಿಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ತಮ್ಮ ಪ್ರೀತಿಯ ತಂದೆಯನ್ನು ಕಳೆದುಕೊಂಡಿರುವ ಸ್ಟಾಲಿನ್​ ಸಹ ಈ ಬಗ್ಗೆ ಪತ್ರವೊಂದರ ಮೂಲಕ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
‘ನೀವು ಸದಾ ಎಲ್ಲಿಗಾದರೂ ತೆರಳಬೇಕೆಂದಾಗ ನನಗೆ ಹೇಳುತ್ತಿದ್ದಿರಿ. ಆದರೆ ಇಂದೇಕೆ ನನಗೆ ಹೇಳದೆ ಹೊರಟುಹೋದಿರಿ? ಎಂದು ತಮ್ಮ ತಂದೆಯ ನೆನಪಿನಲ್ಲಿ ಅವರು ಪತ್ರವನ್ನು ಬರೆದಿದ್ದಾರೆ. ತಮ್ಮ ತಂದೆ ಜೀವನದುದ್ದಕ್ಕೂ ದಣಿವರಿಯದೆ ದುಡಿದ ಶ್ರಮಜೀವಿ ಎಂದು ಗುಣಗಾನ ಮಾಡಿದ್ದಾರೆ. ತಮಿಳುನಾಡಿಗೆ ಅವರು ಸಲ್ಲಿಸಿದ ಸೇವೆಯ ಬಗ್ಗೆ ಅವರಿಗೆ ಸಂಪೂರ್ಣ ತೃಪ್ತಿಯಿತ್ತು ಎಂದು ಸ್ಟಾಲಿನ್​ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

loading...