ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗ್ರಹ

0
5
loading...

ಕನ್ನಡಮ್ಮ ಸುದ್ದಿ-ಧಾರವಾಡ: ಮಹಾನಗರ ಪಾಲಿಕೆ ವಲಯ ಕಚೇರಿ 6ರಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಅಭಿಯಂತರಾದ ಸುದರ್ಶನರಾವ ಬಿ, ವಾರ್ಡ ಸಂಖ್ಯೆ 31ರಲ್ಲಿ ಶಬರಿನಗರ ಮುಖ್ಯ ಸಿ.ಸಿ. ರಸ್ತೆ ನಿರ್ಮಾಣ ಮಾಡಿ 6 ತಿಂಗಳೊಳಗೆ ಪೂರ್ಣಪ್ರಮಾಣದಲ್ಲಿ ಹದಗೆಟ್ಟಿರುತ್ತದೆ. ಇದಕ್ಕೆ ಮುಖ್ಯ ಕಾರಣ ಗುತ್ತಿಗೆದಾರ ಹಾಗೂ ಸುದರ್ಶನರಾವ್ ಬಿ. ಕಿರಿಯ ಅಭಿಯಂತರ (ಸಿವಿಲ್) ಇವರ ವಿರುದ್ದ ಈಗಾಗಲೇ ವಲಯ ಕಚೇರಿ 6ರ ಸಹಾಯಕ ಆಯುಕ್ತರಿಗೆ ಜುಲೈ ತಿಂಗಳಲ್ಲಿ ಮನವಿ ಸಲ್ಲಿಸಲಾಗಿದ್ದು ಇರುತ್ತದೆ.
ಸಹಾಯಕ ಆಯುಕ್ತರು ಇಲ್ಲಿಯವರೆಗೆ ಗುತ್ತಿಗೆದಾರರನ್ನು ಕರೆಸಿ ರಸ್ತೆ ಸುಧಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅದಲ್ಲದೆ ತಮ್ಮ ವಲಯ ಕಚೇರಿಯ ಕಿರಿಯ ಅಭಿಯಂತರಾದ ಸುದರ್ಶನರಾವ ಬಿ (ಸಿವಿಲ್). ಇದರಲ್ಲಿ ಭಾಗಿಯಾಗಿರುವದು ಗೊತ್ತಿದ್ದರು ಸಹಿತ ಕ್ರಮ ಕೈಗೊಳ್ಳಲಾರದೆ ಇರುವದು ಖಂಡನಿಯ. ಕೂಡಲೆ ಮಾನ್ಯ ಸಚಿವರು ತಮ್ಮ ಅಧೀನದಲ್ಲಿ ಬರುವ ಇಲಾಖೆಯ ತಪ್ಪಿಸ್ತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ಸಂಗ್ರಾಮ ಸೇನೆ ಧರಣಿ ನಡೆಸಿತು.

loading...