ತಳಿರು ತೋರಣ ಕಟ್ಟಿಕೊಂಡು ಭತ್ತ ನಾಟಿ ಮಾಡಿದರೆ ರೈತರ ಸಮಸ್ಯೆಗಳು ಬಗೆಹರಿಯುವುದಿಲ್ಲ: ಬಿಎಸ್‍ವೈ

0
5
loading...

ಕನ್ನಡಮ್ಮ ಸುದ್ದಿ-ಕೊಪ್ಪಳÀ: ಕಳೆದ ಮೂರು ತಿಂಗಳಿಂದ ಅಧಿಕಾರದಲ್ಲಿರುವ ಕುಮಾರಸ್ವಾಮಿ ಸರ್ಕಾರ ಇದ್ದರೂ ಸತ್ತಂತೆ. ಈ ಸರ್ಕಾರ ಸಂಪೂರ್ಣ ದೀವಾಳಿಯಾಗಿದ್ದು, ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.
ಕೊಪ್ಪಳ ನಗರದಲ್ಲಿ ಶನಿವಾರ ಜಿಲ್ಲಾ ಬಿಜೆಪಿ ಶಕ್ತಿಕೇಂದ್ರ ಮೇಲ್ಪಟ್ಟ ಪದಾಧಿಕಾರಿಗಳ, ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಭತ್ತ ನಾಟಿ ಮಾಡುವುದು ಹಾಸ್ಯಾಸ್ಪದ ಅಷ್ಟೇ, ಮುಖ್ಯಮಂತ್ರಿಯಾಗಿ ಮಾಡಲು ಬೇಕಾದಷ್ಟು ಕೆಲಸವಿರುತ್ತದೆ ಅದನ್ನು ಬಿಟ್ಟು ಭತ್ತ ನಾಟಿ ಮಾಡುವದರಿಂದ ಯಾವ ರೈತರ ಸಮಸ್ಯೆಗಳು ಬಗೆಹರಿಯುವದಿಲ್ಲವೆಂದು ಯಡಿಯೂರಪ್ಪ ಟೀಕಿಸಿದರು. ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ತರಬೇಕು. ಬರಗಾಲಕ್ಕೆ ಉತ್ತರ ಕರ್ನಾಟಕ ರೈತರು ಈಗಾಲೇ ತತ್ತರಿಸುತ್ತಿದ್ದಾರೆ. ಕಳೆದಮೂರು ತಿಂಗಳಿಂದ ಈ ಸರ್ಕಾರ ಬದುಕಿದ್ದರು ಸತ್ತಂತೆ ನಾನು ಈಗಾಗಲೇ ಐದು ಜಿಲ್ಲೆಗಳಲ್ಲಿ ಭೇಟಿ ಮಾಡಿದ್ದೇನೆ ಈ ಜಿಲ್ಲೆಗಳಲ್ಲಿ ಶೇ40% ರಷ್ಟು ಬಿತ್ತನೆಯಾಗಿಲ್ಲ, ಬಿತ್ತಿದ ಬೆಳೆಗಳು ನಾಶವಾಗಿದ್ದು, ಇದುವರೆಗೂ ಒಬ್ಬ ಸಚಿವರು ಜಿಲ್ಲೆಗಳಿಗೆ ಹೋಗಿ ಪ್ರವಾಸ ಮಾಡಿಲ್ಲ ಇದಕ್ಕಿಂತ ನಾಚಿಕೇಡಿನ ಸಂಗತಿ ಬೇರೊಂದಿಲ್ಲವೆಂದು ಸರ್ಕಾರದ ವಿರುದ್ಧ ಮಾತಿನುದ್ದುಕ್ಕು ಟೀಕಿಸಿದ ಅವರು ಆಡಳಿತ ಪಕ್ಷದಷ್ಟೆ ವಿರೋಧ ಪಕ್ಷಕ್ಕೂ ಜವಾಬ್ದಾರಿ ಇದೆ ಅದನ್ನು ನಾವು ಮಾಡುತ್ತಿದ್ದು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದ ಮೇಲೆ ರಾಜ್ಯದ್ಯಾಂತ ಚಳುವಳಿಯನ್ನು ಹಮ್ಮಿಕೊಂಡಿರುವದಾಗಿ ಹೇಳಿದರು.
ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿದ ಜೆಡಿಎಸ್ ಈಗ ಅಧಿಕಾರದಲ್ಲಿದೆ, ಜೆಡಿಎಸ್ ವಿರುದ್ಧ ಹೋರಾಡಿದ ಕಾಂಗ್ರೆಸ್ ಅಧಿಕಾರಕ್ಕಾಗಿ ಜೆಡಿಎಸ್ ಗೆ ಬೆಂಬಲಿಸಿದ್ದು, ಈ ಎರಡು ಪಕ್ಷಗಳ ಮಧ್ಯೆ ಯಾವ ತತ್ವ ಆದರ್ಶಗಳು ಇಲ್ಲ, ಅಧಿಕಾರಕ್ಕಾಗಿ ಒಂದಾಗಿರುವ ಈ ಸರ್ಕಾರದಲ್ಲಿ ಜನರ ಗೋಳು ಕಷ್ಟವನ್ನು ಕೇಳವರು ಯಾರು ಇಲ್ಲ, ಚುನಾವಣೆ ನಂತರ ರಾಜ್ಯಾದ್ಯಂತ ಚಳುವಳಿಗೆ ಸಿದ್ದತೆ ನೆಡಸಿದ್ದೇನೆ ನನ್ನೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿಕೊಂಡರು. ಈ ಸರ್ಕಾರದ ಕಿವಿ ಇಂಡುವುದು ಗೊತ್ತು ಹಾಗೇ ಇದನ್ನು ಅಧಿಕಾರದಿಂದ ಕಿತ್ತೊಗೆಯುವುದು ಗೊತ್ತು ಎಂದು ಗುಡುಗಿದ ಅವರು ನಾವು ರೈತರ ಸಾಲ ಮನ್ನಕ್ಕಾಗಿ ಹೋರಾಟ ಮಾಡದಿದ್ದರೆ ಸಾಲ ಮನ್ನಾ ಆಗುತಿರಲಿಲ್ಲ, ಆದರೆ ಇನ್ನೂ ರೈತರ ಖಾತೆಗೆ ಹಣ ಜಮಾ ಆಗಿಲ್ಲ. ಈ ಸರ್ಕಾರ ದೀವಾಳಿಯಾಗಿದೆ, ಅಭಿವೃದ್ಧಿ ಕೆಲಸಗಳು ನಿಂತಿವೆ, ನೌಕರಿಗೆ ಸಂಬಳ ಕೊಡಲು ಹಣ ಇಲ್ಲ, ಇದೊಂದು ಆರ್ಥಿಕವಾಗಿ ದೀವಾಳಿಯಾದ ಸರ್ಕಾರವಾಗಿದೆ ಎಂದು ಜರಿದರು. ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಜೆ, ವಿಧಾನ ಸಭೆ ಉಪನಾಯಕ ಗೋವಿಂದ ಕಾರಜೋಳ, ಸಂಸದ ಕರಡಿ ಸಂಗಣ್ಣ, ಶಾಸಕರಾದ ಹಾಲಪ್ಪ ಆಚಾರ, ಬಸವರಾಜ ದಡೇಸ್ಗೂರ, ಪರಣ್ಣ ಮುನವಳ್ಳಿ, ಮಾಜಿ ಶಾಸಕ ಕೆ.ಶರಣಪ್ಪ, ದೊಡ್ಡನಗೌಡ ಪಾಟೀಲ, ನಾಗಪ್ಪ ಸಾಲೋಣಿ, ಜಿ,ವೀರಪ್ಪ, ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಮುಖಂಡರಾದ ಅಮರೇಶ ಕರಡಿ, ಸಿ.ವಿ.ಚಂದ್ರಶೇಖರ, ಚಂದ್ರಶೇಖರ ಹಲಗೇರಿ, ಬಸವಲಿಂಗಪ್ಪ ಭೂತೆ, ಇತರರು ಉಪಸ್ಥಿತರಿದ್ದರು.
ಮಾಜಿ ಸಚಿವ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ರಾಜಕೀಯ ಲೆಕ್ಕಚಾರ ತಪ್ಪಿದ್ದರಿಂದ ವಿರೋಧ ಪಕ್ಷದಲ್ಲಿ ಕುಳಿತಕೊಳ್ಳವ ಪರಿಸ್ಥಿತಿ ಬಂದಿದೆ, ಕಾಂಗ್ರೆಸ್‍ಗೆ ದಯನೀಯ ಪರಿಸ್ಥಿತಿ ಇದ್ದು, ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ದೇಶವಾಗಲಿದೆ. ಮೋದಿ ಆಡಳಿತದಿಂದ ನಮ್ಮ ದೇಶದ ಘನತೆ ಹೆಚ್ಚಾಗಿದೆ. ಬಾರತದ ಗೌರವವನ್ನು ಮಣ್ಣು ಪಾಲು ಮಾಡಿದ್ದರು, ಈಗ ಜಗತ್ತಿನಲ್ಲಿ ದೇಶ ಗುರುತಿಸುವಂತಾಗಿದೆ, ದೇಶ ಇಂದು ಜಗತ್ತಿನಲ್ಲಿ ಆರನೇ ಸ್ಥಾನದಲ್ಲಿದೆ. ಸಿಎಂ ಕಣ್ಣಿರು… ಆರುವರೆ ಕೋಟಿ ಜನರ ಕಣ್ಣಿರ ಒರೈಸುವಬೇಕಾದವರು ವಿಧಾನಸೌಧದಲ್ಲಿ ಅಳಲು ಕೂತಾರ, ವಿಧಾನ ಸೌಧದಲ್ಲಿ ಕೆಲಸ ಇಲ್ಲದಕ್ಕೆ ಭತ್ತ ಬಿತ್ತಾಕ ಹೋಗ್ಯಾರ. ನಾಡಿನ ಅಭಿವೃದ್ಧಿ ಬಗ್ಗೆ ಕಾಳಜಿ, ಜನರ ಬಗ್ಗೆ ಗೌರವ ಇದ್ದರೆ ರಾಜಿನಾಮೆ ಕೊಟ್ಟು ಹೋಗಲಿ, ಹದಿಮೂರು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಬೆಳೆನಾಶವಾಗಿದೆ. ಇಂತಹ ಸಮಯದಲ್ಲಿ ರೈತರ ನೆರವಿಗೆ ಬರಬೇಕಾದ ಸರ್ಕಾರ ಇದುವರೆಗೂ ಆ ಕೆಲಸಮಾಡಿಲ್ಲ ಎಂದು ದೂರಿದ ಅವರು, ರೈತರ ನೆರವಿಗೆ ಬರದೆ ಕಣ್ಣಿರು ಹಾಕುತಾ ಕುಳಿತರೆ ಹೇಗೆ ಎಂದು ಪ್ರಶ್ನಿಸಿದರು.

loading...