ತಾಲೂಕು ವೈದ್ಯಾಧಿಕಾರಿ ವರ್ತನೆ ಖಂಡಿಸಿ ಮನವಿ

0
4
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಸಾರ್ವಜನಿಕರಿಗೆ ಅಸಭ್ಯ ವರ್ತನೆಯಿಂದ ಮಾತನಾಡುವ ತಾಲೂಕು ವೈದ್ಯಾಧಿಕಾರಿ ವರ್ತನೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಮೂಲಕ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಸರ್ಕಾರಿ ಆಸ್ಪತ್ರೆಯ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾರ್ಯ ನಿಭಾಯಿಸುತ್ತಿರುವ ತಾಲೂಕು ವೈದ್ಯಾಧಿಕಾರಿಯು ಸಾರ್ವಜನಿಕರಿಗೆ ಅಸಭ್ಯವಾಗಿ ಮಾತನಾಡುತ್ತಾರೆ. ಅದಲ್ಲದೇ ದುಡ್ಡಿಗಾಗಿ ಆರೋಗ್ಯ ಕೇಂದ್ರದ ಶುಶ್ರುಕಿಯರಿಗೂ ಅಸಭ್ಯವಾಗಿ ವರ್ತಿಸುತ್ತಾರೆ. ಇದು ವೈದ್ಯಾಧಿಕಾರಿಗಳ ಅಧಿಕಾರಕ್ಕೆ ಅಗೌರವ ತರುವಂತ ವಿಷಯವಾಗಿದೆ. ಆದ್ದರಿಂದ ಆರೋಗ್ಯ ಸಚಿವರು ಈ ಬಗೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಉಪತಹಸೀಲ್ದಾರ್ ರಮೇಶ ಬಾಲೆಹೊಸೂರ ಮನವಿ ಸ್ವೀಕರಿಸಿದರು. ಕರವೇ ತಾಲೂಕು ಅಧ್ಯಕ್ಷ ಶ್ರೀನಿವಾಸ ಕೊರ್ಲಗಟ್ಟಿ, ಕರವೇ ಜಿಲ್ಲಾ ಉಪಾಧ್ಯಕ್ಷ ಹಾಲಪ್ಪ ಅರಹುಣಸಿ, ರತ್ನಾ ಪಾಟೀಲ್, ಟಿಪ್ಪು ನಧಾಫ್, ಭಾರತಿ ಹರಶಿಕಾರಿ, ಸಿದ್ದಪ್ಪ ಮಲ್ಲಣ್ಣವರ, ಇದ್ದರು.

loading...