ತೋಟದ ಮನೆಯಲ್ಲಿದ್ದ ಒಂಟಿ ವೃದ್ಧೆ ಕತ್ತು ಸೀಳಿ ಕೊಲೆ

0
6
loading...

ಬೆಂಗಳೂರು:ತೋಟದ ಮನೆಯಲ್ಲಿ ವಾಸವಾಗಿದ್ದ ಒಂಟಿ ವೃದ್ಧೆಯನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಕೆಂಗೇರಿಯ ರಾಜಾಕಾಲುವೆ ಬಳಿಯ ತೆಂಗಿನ ತೋಟದಲ್ಲಿನ ಮನೆಯಲ್ಲಿ ತಡರಾತ್ರಿ ಈ ಘಟನೆ ನಡೆದಿದೆ.
65 ವರ್ಷದ ಗೌರಮ್ಮ ಎಂಬುವರನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿದೆ.19ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಗೌರಮ್ಮ ಮಕ್ಕಳಿಲ್ಲದೇ ಇದ್ದಿದ್ದರಿಂದ ಒಂಟಿಯಾಗಿ ವಾಸ ಮಾಡ್ತಿದ್ದರು.ಪರಿಚಯಸ್ಥರ ತೋಟವೊಂದರ ಮನೆಯೊಂದರಲ್ಲಿ ಅಜ್ಜಿ ಒಂಟಿಯಾಗಿ ವಾಸ ಮಾಡುತ್ತಿದ್ದರು.
ಮನೆಗೆ ಬಂದ ದುಷ್ಕರ್ಮಿಗಳು ವೃದ್ಧೆಯ ಕೊಲೆ ಮಾಡಿ ಪರಾರಿಯಾಗಿದ್ದಾರೆ.ಕೊಲೆ ಮಾಡಿದ ಬಳಿಕ ದುಷ್ಕರ್ಮಿಗಳು ವೃದ್ಧೆಯ ಮೃತದೇಹವನ್ನು ಶೆಡ್‍ನಲ್ಲಿ ಹಾಕಿ ಹೊರಗಿನಿಂದ ಬೀಗ ಹಾಕಿಕೊಂಡು ಹೋಗಿದ್ದರು.
ಘಟನೆ ನಡೆದ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕೊಲೆಗೆ ಕಾರಣ ಏನು?,ಕೊಲೆ ಮಾಡಿದ ವರು ಯಾರು?ಅನ್ನೋದರ ಸುಳಿವು ಇನ್ನೂ ಸಿಕ್ಕಿಲ್ಲ.ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

loading...